

ಹುಮನಾಬಾದ್: ಸ್ವಾತಂತ್ರೃಅಮೃತ್ ಮಹೋತ್ಸವ ನಿಮಿತ್ತ ಶಾಸಕ ರಾಜಶೇಖರ ಪಾಟೀಲ್ ನೇತೃತ್ವದಲ್ಲಿ ಗುರುವಾರ ತಾಲೂಕು ಕಾಂಗ್ರೆಸ್ ಪಕ್ಷದಿಂದ ಹುಣಸಗೇರಾ ಗ್ರಾಮದಿಂದ ಪಟ್ಟಣದವರೆಗೆ ಬೃಹತ್ ಪಾದಯಾತ್ರೆ ನಡೆಸಲಾಯಿತು.
ಪಾದಯಾತ್ರೆ ಯುದ್ದಕ್ಕೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಕೈಯಲ್ಲಿ ತಿರಂಗಾ ಧ್ವಜ ಹಾಗೂ ಪಕ್ಷದ ಧ್ಜಜ ಹಿಡಿದು ರಾಷ್ಟ್ರಭಕ್ತಿಯ ಘೋಷಣೆ ಕೂಗಿದರು. ಡಿಜೆಯಲ್ಲಿ ದೇಶ ಭಕ್ತಿ ಗೀತೆಗಳು ಮೊಳಗಿದವು. ಹುಣಸಗೇರಾ, ಕನಕಟ್ಟ, ಮಾಣಿಕನಗರ ಹಾಗೂ ಪಟ್ಟಣದ ವಿವಿಧಡೆ ಪಾದಯಾತ್ರೆಗೆ ಆರತಿ ಬೆಳಗಿ, ಪಟಾಕಿ ಸಿಡಿಸಿ ಭವ್ಯ ಸ್ವಾಗತ ನೀಡಲಾಯಿತು.
ಶಾಸಕ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಟಿಎಪಿಸಿಎಂಎಸ್ ಅಧ್ಯಕ್ಷ ಸೇರಿ ಪ್ರಮುಖರು ಮಾತನಾಡಿದರು.
ಪ್ರಮುಖರಾದ ವೀರಣ್ಣ ಪಾಟೀಲ್, ಲಕ್ಷ್ಮಣರಾವ ಬುಳ್ಳಾ, ಶಾಂತಪ್ಪ ಜಿ.ಪಾಟೀಲ್, ಕೇಶಪ್ಪ ಬಿರಾದಾರ, ಮಲ್ಲಿಕಾಜರ್ುನ ಮಾಶೆಟ್ಟಿ, ರೇವಣಸಿದ್ದಪ್ಪ ಪಾಟೀಲ್, ಕೇಶವರಾವ ತಳಘಟಕರ, ಹಾಂತಯ್ಯಾ ತೀರ್ಥ, ರಮೇಶ ಡಾಕುಳಗಿ, ದತ್ತಕುಮಾರ ಚಿದ್ರಿ, ಮಲ್ಲಿಕಾಜರ್ುನ ಮಹೇಂದ್ರಕರ, ನೀತು ಶಮರ್ಾ, ನಾಗರಾಜ ಹಿಬಾರೆ, ಕಸ್ತೂರಬಾಯಿ ಪರಸನೋರ್, ಅಫ್ಸರಮಿಯಾ, ರಾಜು ಇಟಗಿ ಹಾಗೂ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ದೇಶ ಭಕ್ತರ ಹಾಗೂ ಹಿರಿಯರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರೃ ದೊರಕಿದೆ. ಇಂದು ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದು, ಪ್ರತಿಯೊಬ್ಬರೂ ಅಪ್ಪಟ್ಟ ದೇಶಭಕ್ತಿ ಹೊಂದಬೇಕು. ಪಾದಯಾತ್ರೆ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯಾವದಗಳು.
| ರಾಜಶೇಖರ ಪಾಟೀಲ್, ಶಾಸಕ
ರಾಜ್ಯದಲ್ಲಿ ಬಿಜೆಪಿ ಸಕರ್ಾರ ಆಚರಿಸುತ್ತಿರುವುದು ಆಜಾದಿ ಕಾ ಅಮೃತ ಮಹೋತ್ಸವನಾ ಅಥವಾ ಭ್ರಷ್ಟಾಚಾರ ಮಹೋತ್ಸವನಾ ಎಂಬ ಪ್ರಶ್ನೆ ಕಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಲ್ಲ ವಸ್ತುಗಳ ಬೆಲೆ ಏರಿಕೆಯಿಂದ ಬಡವರು ಸಂಕಷ್ಟ ಎದುರಿಸುವಂತಾಗಿದೆ. ಸ್ವಾತಂತ್ರೃ ಒದಗಿಸಿ ಕೊಡುವಲ್ಲಿ ಕಾಂಗ್ರೆಸ್ ಪಾತ್ರ ಬಹಳಷ್ಟಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ರಾಜ್ಯದ ಜನರಿಗೆ ಅನ್ನಭ್ಯಾಗ, ಬಿಸಿಯೂಟ ಸೇರಿ ಸಾಕಷ್ಟು ಯೋಜನೆ ನೀಡಿದೆ.
| ಡಾ.ಚಂದ್ರಶೇಖರ ಪಾಟೀಲ್, ಎಂಎಲ್ಸಿ