ಕಾಂಗ್ರೆಸ್‌ನಿಂದ ಬಂಜಾರರ ಒಡೆಯುವ ಹುನ್ನಾರ

oppo_2
oppo_2
Published on

ಕಲಬುರಗಿ: ಕಾಂಗ್ರೆಸ್‌ನಲ್ಲಿರುವ ಬಂಜಾರ ಸಮಾಜದ ಮುಖಂಡರು ಗುಲ್ಬರ್ಗ ಲೋಕಸಭೆ ವ್ಯಾಪ್ತಿಯಲ್ಲಿ ಇರದ ಬಂಜಾರದ ಸಮಾಜದ ಗುರುಗಳನ್ನು ಮುಂದಿಟ್ಟುಕೊAಡು ಹೀನ ರಾಜಕೀಯಕ್ಕೆ ಇಳಿದಿದೆ. ಬಿಜೆಪಿ ಸರ್ಕಾರ, ಡಾ.ಉಮೇಶ ಜಾಧವ್ ಜಿಲ್ಲೆಯಲ್ಲಿ ಮಹತ್ವದ ಕೊಡುಗೆ ನೀಡಿದೆ ಎಂದು ಮಾಜಿ ಸಚಿವ ಬಾಬುರಾವ ಚವ್ಹಾಣ್ ಹೇಳಿದರು.
ಕಲಬುರಗಿ ವಿಮಾನ ನಿಲ್ದಾಣದ ಬಳಿ ಸೇವಾಲಾಲ್ ಮಹಾರಾಜರ ದೇವಸ್ಥಾನ ನಿರ್ಮಾಣಕ್ಕೆ ಎರಡು ಎಕರೆ ಜಮೀನು ಕೊಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ. ಅದಕ್ಕಾಗಿ ಕಾಂಗ್ರೆಸ್‌ಗೆ ಬೆಂಬಲಿಸಬೇಕು ಎಂದು ಹೇಳಿಕೆ ನೀಡಿರುವುದು ಸಮಾಜವನ್ನು ಒಡೆಯುವ ಸುಳ್ಳು ಮತ್ತು ದಾರಿತಪ್ಪಿಸುವ ಹೇಳಿಕೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಸದ ಡಾ.ಉಮೇಶ ಜಾಧವ್ ಅವರು ದೇವಸ್ಥಾನಕ್ಕೆ ೧೦ ಎಕರೆ ಜಮೀನು ಮತ್ತು ೧೦ ಕೋಟಿ ರೂ. ಮಂಜೂರು ಮಾಡಿಸಿದ್ದಾರೆ. ಆದರೆ ಈ ವಿಷಯ ಪೂಜ್ಯರಿಂದ ಬಚ್ಚಿಟ್ಟು ಮಾಜಿ ಸಚಿವ ರೇವು ನಾಯಕ ಬೆಳಮಗಿ ಸುಳ್ಳು ಹೇಳಿಸಿದ್ದಾರೆ. ಬಂಜಾರ ಸಮಾಜದ ಮತ ವಿಭಜನೆ ಮಾಡಲು ಕಾಂಗ್ರೆಸ್ ಕಪಟ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಬಂಜಾರರ ಕಾಶಿ ಮಹಾರಾಷ್ಟçದ ಪೌರಾಗಡದಲ್ಲಿ ಕೇಂದ್ರ ಮತ್ತು ಮಹಾ ಸಕ್ರಾದಿಂದ ೫೯೮ ಕೋಟಿ ರೂ. ನೀಡಿ ಸೇವಾಲಾಲರ ಕ್ಷೇತ್ರ ಅಭಿವೃದ್ಧಿ ಮಾಡಲಾಗಿದೆ. ಮಾತಾ ಲತಾ ದೇವಿ ಆಶ್ರಮಕ್ಕೆ ನಾಲ್ಕು ಎಕರೆ ಜಮೀನು, ಗುರುಮಠಕಲ್‌ನಲ್ಲಿ ಲಕ್ಷಿö್ಮÃ ತಿಮ್ಮಪ್ಪ ದೇವಸ್ಥಾನಕ್ಕೆ ೧೦ ಎಕರೆ ಜಮೀನು, ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ, ಬಂಜಾರ ಭವನ ಸೇರಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಡಾ.ಜಾಧವ್ ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ ಎಂದರು.
ಮಾತಾ ಲತಾದೇವಿ, ಸವಿತಾ ಮಾತಾ, ಮಹಾದೇವಿಮಾತಾ, ನಾಮದೇವ ರಾಠೋಡ್, ಚಂದ್ರಶೇಖರ ರಾಠೋಡ್, ಪ್ರತಾಪ ಶಹಾಬಾದ್, ಶ್ರೀಕರಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net