ಕಾಂಗ್ರೆಸ್‌ನಿಂದ ಜನಪರ ಯೋಜನೆಗಳ ಜಾರಿ

06-GPT-2
ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಗಣೇಶ್ ಪ್ರಸಾದ್ ಮತಯಾಚನೆ ಮಾಡಿದರು. ಎಚ್.ಎಂ.ನಂಜುಂಡಪ್ರಸಾದ್, ಎಚ್.ಎನ್.ಬಸವರಾಜು, ಮಲ್ಲಿದಾಸ್, ವಿಶ್ವನಾಥ್ ಇದ್ದರು.
Published on

ಗುಂಡ್ಲುಪೇಟೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಅನುಕೂಲವಾಗುವ ಯೋಜನೆಗಳನ್ನು ಮತ್ತೆ ಆರಂಭಿಸಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ತಾಲೂಕಿನ ಬೊಮ್ಮಲಾಪುರ, ಬೇಗೂರು ಹಾಗೂ ಭೋಗಯ್ಯನಹುಂಡಿ ಗ್ರಾಮಗಳಲ್ಲಿ ಶನಿವಾರ ಮತಯಾಚನೆ ಮಾಡಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿದ್ದರಿಂದ ಜನತೆ ತೊಂದರೆ ಅನುಭವಿಸುವಂತಾಗಿದೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದಿನಂತೆ ಉಚಿತವಾಗಿ ಅಕ್ಕಿ, ಗ್ಯಾರಂಟಿ ಕಾರ್ಡ್‌ನಲ್ಲಿ ನೀಡಿರುವ ಭರವಸೆ ಈಡೇರಿಸಲಿದೆ ಎಂದು ಹೇಳಿದರು.

ಚಾಮುಲ್ ನಿರ್ದೇಶಕ ಎಚ್.ಎಂ.ನಂಜುಂಡಪ್ರಸಾದ್, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಮಾಜಿ ಸದಸ್ಯ ಮಲ್ಲಿದಾಸ್, ಮುಖಂಡ ವಿಶ್ವನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net