ಕಾಂಗ್ರೆಸ್‌ನಿಂದ ಚಾಮರಾಜುಗೆ ಶ್ರದ್ಧಾಂಜಲಿ

13Rajesh4
Published on

ಚಾಮರಾಜನಗರ: ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಪುತ್ರ ಪಿ.ಚಾಮರಾಜು ನಿಧನದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಚಾಮರಾಜು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮಾತನಾಡಿ, ಚಾಮರಾಜು ಅವರು ತಂದೆ ಶಾಸಕ ಪುಟ್ಟರಂಗಶೆಟ್ಟರಂತೆ ಕ್ಷೇತ್ರದ ಜನರ ಜತೆ ಒಡನಾಟವಿಟ್ಟುಕೊಂಡಿದ್ದರು. ಅವರ ನಿಧನ ಅವರ ಕುಟುಂಬಕ್ಕೆ ಭರಿಸಲಾಗದ ದುಃಖ ತಂದಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡುವಂತಾಗಲಿ ಎಂದರು.

ಇದೇ ವೇಳೆ ಮೃತರ ಗೌರವಾರ್ಥ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. ನಗರಸಭೆ ನಾಮ ನಿರ್ದೇಶನ ಸದಸ್ಯ ಸ್ವಾಮಿ, ಶಾಂತಲ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕಾವೇರಿ ಶಿವಕುಮಾರ್, ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಪದ್ಮ ಪುರೋತ್ತಮ್, ಮುಖಂಡರಾದ ಎ.ಎಚ್.ಎನ್.ನಸ್ರುಲ್ಲಾಖಾನ್, ಪರ್ವೇಜ್, ಜುಬೇರ್‌ಎಲ್‌ಹಕ್, ಮಹಮದ್ ಸಾಧೀಕ್, ರಾಮಸಮುದ್ರ ಶಿವಮೂರ್ತಿ, ಶಿವಕುಮಾರ್, ಚನ್ನಬಸವಯ್ಯ, ನಾಗರಾಜು, ರವಿಚಂದ್ರಪ್ರಸಾದ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net