

ಯಳಂದೂರು: ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಜನರ ಸಮಸ್ಯೆಯನ್ನು ಬಗ್ಗೆಹರಿಸದೆ ಸುಳ್ಳು ಆಶ್ವಾಸನೆ, ಪ್ರಚಾರ ಮಾಡಿಕೊಂಡು ಅಧಿಕಾರ ಹಿಡಿಯುತ್ತಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಬಡ ವರ್ಗದವರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಹೇಶ್ ಆರೋಪಿಸಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ ಗ್ಯಾರಂಟಿ ಕಾರ್ಡ್ ಅನ್ನು ಜನರಿಗೆ ವಿತರಿಸಿ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ನೀಡಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸುವ ಮೂಲಕ ಜನ ಸಮಾನ್ಯರಿಗೆ ಅನುಕೂಲ ಕಲ್ಪಿಸಿತ್ತು, ಆದರೆ, ಈಗಿನ ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಹಗರಣಗಳಲ್ಲೇ ಕಾಲಾಹರಣ ಮಾಡುತ್ತಿದೆ ಎಂದು ದೂರಿದರು.
ಇದನ್ನು ನೋಡಿಯೂ ಸುಮ್ಮನಿರದ ಕಾಂಗ್ರೆಸ್ ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಾಗ 200 ಯೂನಿಟ್ ಉಚಿತ ವಿದ್ಯುತ್ , ಕುಟುಂಬದ ಮಹಿಳೆಗೆ 2000 ರೂ., 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ಆದ್ದರಿಂದ ಕಾಂಗ್ರೆಸ್ ಗ್ಯಾರೆಂಟ್ ಕಾರ್ಡ್ ಅನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕೆಲಸ ಮಾಡಲಾಗುತ್ತಿದ್ದು, ಆದ್ದರಿಂದ ಮಹಿಳೆಯರು, ಯುವಕರು, ಈ ಬಗ್ಗೆ ಆಲೋಚಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಪ್ರಕಾಶ್, ರಂಗನಾಥ್, ನಾಗೇಂದ್ರ, ಶಿವಕುಮಾರ್, ಕೇಶವ, ಶೈಲ್, ರಾಜಮ್ಮ, ಅನಿತಾ, ಪಲ್ಲವಿ, ಲಕ್ಷ್ಮೀ, ಸಾವಿತ್ರಿ, ಮಾದು, ಉಮಾ, ನಂದಿನಿ, ರಂಗನಾಥ್, ಮಂಜು, ಮಹದೇವನಾಯಕ, ಸೇರಿದಂತೆ ಇತರರು ಹಾಜರಿದ್ದರು.