ಕಾಂಗ್ರೆಸ್​ನದ್ದು ದೇಶ ಒಡೆಯುವ ಹುನ್ನಾರ

New PJ New 9999
Published on

ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷ ಭಾರತವನ್ನು ಒಡೆಯುವ ಕೆಲಸವನ್ನು ತಲತಲಾಂತರದಿಂದಲೂ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಭಾರತವನ್ನು ಒಂದೇ ಎಂದು ಭಾವಿಸುವುದೇ ಇಲ್ಲ. ದಕ್ಷಿಣ ಭಾರತ, ಉತ್ತರ ಭಾರತ ಎಂದು ಪ್ರತ್ಯೇಕತೆಯ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಕ್ಷಿಣ ಭಾರತದವರು ಆಫ್ರಿಕನ್​ರ ತರ, ಪೂವೋತ್ತರ ಭಾರತೀಯರು ಚೀನಾದವರ ತರ ಕಾಣುತ್ತಾರೆ ಎಂದೆಲ್ಲಾ ಹೇಳುತ್ತ ದೇಶ ಒಂದಾಗಿಲ್ಲ ಎಂಬ ಸಂದೇಶ ಸಾರುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ವರ್ಣ, ಬಣ್ಣ, ಚರ್ಮ ಕಾಂತಿ, ವಿಭಿನ್ನ ಸಂಸ್ಕೃತಿ ಎನ್ನುತ್ತ ಪ್ರತ್ಯೇಕತೆ ಭಾವ ಮೂಡಿಸುವುದು ಶೋಭೆ ತರದು ಎಂದು ಪ್ರಲ್ಹಾದ ಜೋಶಿ ಕಾಂಗ್ರೆಸ್ಸಿಗರಿಗೆ ಕಿವಿಮಾತು ಹೇಳಿದರು.

ಜಾತಿ, ಸಂಂಸ್ಕೃತಿ, ಬಣ್ಣ ಎಲ್ಲವನ್ನೂ ಮೀರಿ ಭಾರತ ಸಾಂಸ್ಕೃತಿಕವಾಗಿ ಬಹು ವಿಶಾಲವಾಗಿದೆ. ಅಫ್ಘಾನಿಸ್ತಾನದವರೆಗೂ ಭಾರತ ವಿಸ್ತಾರವಾಗಿದೆ. ಆದರೂ ಸಾಂಸ್ಕೃತಿತಿಕವಾಗಿ ತಲ ತಲಾಂತರಿಂದಲೂ ಒಂದಾಗೇ ಉಳಿದಿದೆ ಎಂದು ಪ್ರತಿಪಾದಿಸಿದರು.

ಉತ್ತರದಲ್ಲಿ ಕಾಶಿ ವಿಶ್ವನಾಥನ ದೇವಸ್ಥಾನವಿದ್ದರೆ, ದಕ್ಷಿಣದಲ್ಲಿ ರಾಮೇಶ್ವರ ದೇಗುಲವಿದೆ. ಆದರೆ, ಎರಡರಲ್ಲೂ ಈಶ್ವರನನ್ನೇ ಕಂಡ ದೇಶ ನಮ್ಮದು. ಆದರೆ, ಕಾಂಗ್ರೆಸ್ ದೇಶ ವಿಭಜಿಸುವ ರೀತಿ ಮಾತನಾಡುವುದು ಸರಿಯಲ್ಲ ಎಂದ ಸಚಿವ ಪ್ರಲ್ಹಾದ ಜೋಶಿ ಆಕ್ಷೇಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net