ಕಾಂಗ್ರೆಸ್‌ನ 5 ಗ್ಯಾರಂಟಿ ವರದಾನವಾಗಲಿದೆ

B.N.Chandrappa
Published on

ಚಿತ್ರದುರ್ಗ: ಕಾಂಗ್ರೆಸ್‌ನ 5 ಗ್ಯಾರಂಟಿ ಯೋಜನೆಗಳು ಕೈ ಅಭ್ಯರ್ಥಿಗಳಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವರದಾನವಾಗಲಿದೆ ಎಂದು ಕ್ಷೇತ್ರದ ಕೈ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ 18.5 ಲಕ್ಷ ಮತದಾರರಿದ್ದು, ಮತದಾರರ ತೀರ್ಪು ಆಶಾದಾಯಕವಾಗಿ ಇರುವ ಅಚಲ ವಿಶ್ವಾಸವಿದೆ ಎಂದರು.

ಕ್ಷೇತ್ರದ ಯಾವ ಭಾಗದಲ್ಲಿಯೂ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದೆ, ಮತದಾನ ಶಾಂತಿಯುತವಾಗಿ ನಡೆದಿರುವುದು ಸಂತಸದ ವಿಚಾರ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಜನಪರ ಆಡಳಿತ ನೀಡುತ್ತಿದ್ದಾರೆ. ಇದನ್ನು ಮತದಾರರು ಗಮನದಲ್ಲಿ ಇಟ್ಟುಕೊಂಡು ಸೂಕ್ತರನ್ನು ಆಯ್ಕೆ ಮಾಡಿ, ಸಂಸತ್‌ಗೆ ಕಳುಹಿಸುವ ನಂಬಿಕೆ ಪಕ್ಷದ ಎಲ್ಲ ನಾಯಕರು ಹೊಂದಿದ್ದೇವೆ ಎಂದು ಹೇಳಿದರು.

ಚುನಾವಣೆ ಸುಸೂತ್ರವಾಗಿ ನಡೆದಿದ್ದು, ಫಲಿತಾಂಶ ಬರುವವರೆಗೂ ಸಮಾಧಾನದಿಂದ ಎಲ್ಲರೂ ಕಾಯೋಣ. ಅವಸರ ಅಪಘಾತಕ್ಕೆ ಕಾರಣ ಎಂದು ಮಾರ್ಮಿಕವಾಗಿ ನುಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಪದಾಧಿಕಾರಿಗಳಾದ ಕೆ.ಎಂ.ಹಾಲಸ್ವಾಮಿ, ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಕುಮಾರ್‌ಗೌಡ, ಬಿ.ಟಿ.ಜಗದೀಶ್, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಬಿ.ಯೋಗೇಶ್‌ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net