ಕಾಂಗ್ರೆಸ್‌ಗೆ ಹೆದರಿ ಮೋದಿ ಪರದಾಟ

Modige Congrees Bhaya
06 tbgr 01
Congreesge hedari modi paradata
Published on


ತೂಬಗೆರೆ
ಚುನಾವಣೆಗೋಸ್ಕರ ಇಷ್ಟೊಂದು ಬಾರಿ ಪ್ರಧಾನಿಯೊಬ್ಬರು ರಾಜ್ಯ ಸುತ್ತಿದ ಇತಿಹಾಸವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೆದರಿ ಪ್ರಧಾನಿ ಮೋದಿ ಅವರು ಪದೇಪದೆ ರಾಜ್ಯಕ್ಕೆ ಭೇಟಿ ನೀಡಿ ಪರದಾಡುತ್ತಿದ್ದಾರೆ ಎಂದು ದೇವನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಲೇವಡಿ ಮಾಡಿದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೂಬಗೆರೆ ಹೋಬಳಿಯಲ್ಲಿ ಶನಿವಾರ ಮತಯಾಚನೆ ಮಾಡಿ ಮಾತನಾಡಿದರು. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಬಾಲ ಬಿಚ್ಚಲು ಬಿಡಬೇಡಿ, ರಾಜ್ಯದಿಂದಲೇ ಬಿಜೆಪಿಯನ್ನು ಬುಡಸಹಿತ ಕಿತ್ತೊಗೆಯಬೇಕು ಎಂದು ಹೇಳಿದರು.
ಕಾಂಗ್ರೆಸ್ ಇತಿಹಾಸದ ಬಗ್ಗೆ ಪ್ರತಿಯೊಬ್ಬರೂ ಅರ್ಥಮಾಡಿಕೊಂಡಿದ್ದೀರಿ, ಚುನಾವಣೆಗೆ ಕೆಲವೇ ದಿನಗಳಿವೆ, ಕಾಂಗ್ರೆಸ್ಸಿನಿಂದ ಪ್ರತಿಯೊಬ್ಬರಿಗೂ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದೇವೆ, ಗ್ಯಾರಂಟಿ ಕಾರ್ಡ್‌ನಲ್ಲಿ ಐದು ಅಂಶಗಳು ಒಳಗೊಂಡಿದ್ದು, ಇವೆಲ್ಲ ಭರವಸೆಗಳು ಜಾರಿಯಾಗಬೇಕಾದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರು.
ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದ್ದೇವೆ. ಸಾಕಷ್ಟು ಜನ ಜೆಡಿಎಸ್, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಇನ್ನಷ್ಟು ಬಲ ತುಂಬಿದಂತಾಗಿದೆ ಎಂದರು.
ದೇವನಹಳ್ಳಿಯಲ್ಲೂ ನಗರಸಭೆ, ಪುರಸಭೆ ಹಾಗೂ ಗ್ರಾಪಂ ಸದಸ್ಯರು ಸೇರಿ ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.
ತೂಬಗೆರೆ ಹೋಬಳಿಯಲ್ಲಿ ಜೆಡಿಎಸ್ ಶಾಸಕರು ರಸ್ತೆಗಳನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿದ್ದಾರೆ. ಹೋಬಳಿಯ ಯಾವ ರಸ್ತೆಯೂ ಸರಿ ಇಲ್ಲ, ನೀವು ಮತ ನೀಡಿದರೆ ನಮ್ಮ ಸರ್ಕಾರ ಬರುತ್ತದೆ. ಎಲ್ಲ ರಸ್ತೆಗಳು ಅಭಿವೃದ್ಧಿಪಡಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net