ಕಾಂಗ್ರೆಸ್ ಸರ್ಕಾರದ ತಲೆ ದಂಡ ಖಚಿತ

CTD 23 GOVINDA M.KARAJOLA--0003
Published on

ಚಿತ್ರದುರ್ಗ: ರಾಜ್ಯಕಾಂಗ್ರೆಸ್ ಸರ್ಕಾರ ಎಸ್‌ಸಿ,ಎಸ್‌ಟಿ ಸಮುದಾಯದ ಕಲ್ಯಾಣಕ್ಕೆಂದು ಮೀಸಲಿಟ್ಟಿದ್ದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು. ಮಂಗಳವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ವ ತಂತ್ರ ಭಾರತದ ಇತಿಹಾಸದಲ್ಲಿ ಬ್ಯಾಂಕಿನಿಂದ ಲೂಟಿ ಹೊಡೆದಿರುವ ಉದಾಹರಣೆ ಇದ್ದರೆ ಅದು,ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಅನುದಾನ ದುರ್ಬಳಕೆ ಪ್ರಕರಣವಾಗಿದೆ.
ನಿಗಮದ ಹಣವನ್ನು ಅನ್ಯರಾಜ್ಯಗಳ ಲೋಕಸಭಾ ಚುನಾವಣೆ ವೆಚ್ಚಕ್ಕೆ ಕಾಂಗ್ರೆಸ್ ಬಳಸಿದೆ. ಇದಕ್ಕಾಗಿ ನಕಲಿ ಖಾತೆಗಳನ್ನು ತೆರೆಯಲಾಗಿ ದೆ. ಇಡಿ,ಸಿಬಿಐ,ಆದಾಯ ತೆರಿಗೆ ಸಂಸ್ಥೆಗಳು ಸಾಂವಿಧಾನಕವಾಗಿ ಸ್ವತಂತ್ರವಾಗಿ ಕಾರ‌್ಯನಿರ್ವಹಿಸುತ್ತಿವೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಎ ಫ್‌ಐಆರ್ ದಾಖಲಿಸುವ ಮೂಲಕ ಇಡಿ ಅಧಿಕಾರಿಗಳ ಬ್ಲಾಕ್‌ಮೇಲ್‌ಗೆ ಮುಂದಾಗಿದೆ. ಈ ಸರ್ಕಾರದ ತಲೆ ದಂಡ ಖಚಿತ. ಹುಜೂರ್ ಖ ಜಾನೆಯಿಂದಲೂ ನೇರವಾಗಿ ಹಣವನ್ನು ದುರ್ಬಳಕೆ ಮಾಡಿಕೊಳ್ಳ ಲಾಗಿದೆ.ಎಫ್‌ಐಆರ್ ದಾಖಲಿಸುವುದು ಸೇರಿದಂತೆ ಏನೇ ಕುತಂತ್ರ,ಗಿ ಮಿಕ್ ಮಾಡಿದರೂ ಈ ಸರ್ಕಾರ ಹೆಚ್ಚು ದಿನ ಉಳಿಯದೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net