ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಬಹಳದಿನದ್ದಲ್ಲ

21blh3 metagud bd news.
ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರ 63ನೇ ಜನ್ಮದಿನದ ಅಂಗವಾಗಿ ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸಂಜಯ ಪಾಟೀಲ ಸಸಿಗೆ ನೀರುಣ್ಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಉದ್ಯಮಿ ವಿಜಯ ಮೆಟಗುಡ್ಡ, ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ ಇತರರು ಇದ್ದರು.
Published on

ಬೈಲಹೊಂಗಲ: ಇಲ್ಲಿ ಸೇರಿದ ಅಪಾರ ಜನಸ್ತೋಮ ಮೆಟಗುಡ್ಡ ಮನೆತನದ ಮೇಲಿನ ಪ್ರೀತಿ& ವಿಶ್ವಾಸ ತೋರಿಸುತ್ತದೆ ಎಂದು ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರ 63ನೇ ಜನ್ಮದಿನದ ಅಂಗವಾಗಿ ಸಸಿ ವಿತರಿಸಿ ಮಾತನಾಡಿ, ಕಾಂಗ್ರೆಸ್​ ಗ್ಯಾರಂಟಿ ಬಹಳ ದಿನದ್ದು ಅಲ್ಲ. ಗ್ಯಾರಂಟಿಗಳಿಂದ ಸರ್ಕಾರ ನಡೆಸಲು ಆಗುವುದಿಲ್ಲ. ಜನತೆಗೆ ಮೋಸ ಮಾಡುವ ಗ್ಯಾರಂಟಿಗಳು ನಡೆಯುವುದಿಲ್ಲ. ಸರ್ಕಾರ ಅಲ್ಪ ಅವಧಿ ಹೊಂದಿದೆ. ಬಿಜೆಪಿ ಕಾರ್ಯಕರ್ತರು ಸಂಟಿತರಾಗಿದ್ದು, ಬಿಜೆಪಿ ಬಾವುಟ ಹಾರಿಸಲು ಸಜ್ಜಾಗಬೇಕು. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಹಿರಿಯರ ಕಾಲದಿಂದಲೂ ಜನರ ಅಭಿಮಾನ ನಮ್ಮ ಮನೆತನದ ಮೇಲಿದೆ. ತಮ್ಮ ಸೇವೆ ಮಾಡಲು ಸದಾ ಸಿದ್ಧ. ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಸಂಟಿಸಿ, ಜಿಪಂ, ತಾಪಂ, ಎಂಪಿ ಚುನಾವಣೆಯಲ್ಲಿ ಅಭ್ಯಥಿಗಳ ಗೆಲುವಿಗೆ ಶ್ರಮಿಸೋಣ. ಹತ್ತು ವರ್ಷಗಳಿಂದ ರಕ್ತದಾನ ಮೂಲಕ ಜೀವನ್ಮರಣದ ನಡುವೆ ಹೋರಾಡುತ್ತಿರುವವರಿಗೆ ನೆರವಾಗುತ್ತಿರುವ ಎಲ್ಲರಿಗೂ ಸದಾ ಚಿರಋಣಿಯಾಗಿದ್ದೇವೆ ಎಂದರು.

ಉದ್ಯಮಿ ವಿಜಯ ಮೆಟಗುಡ್ಡ ಮಾತನಾಡಿ, ಅಧಿಕಾರ ಇಲ್ಲದಿದ್ದರೂ ಇಷ್ಟೊಂದು ಜನ ಪ್ರೀತಿಯಿಂದ ಸೇರಿದ್ದಿರಿ. ನಿಮ್ಮ ಅಭಿಮಾನಕ್ಕೆ ಚಿರಋಣಿಯಾಗಿ ನಿಮ್ಮ ಸೇವೆ ಮಾಡುವೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ ಪಾಟೀಲ, ಸಂದೀಪ ದೇಶಪಾಂಡೆ, ಎಪಿಎಂಸಿ ಮಾಜಿ ಸದಸ್ಯ ಎಸ್​.ಎಫ್​. ಹರಕುಣಿ, ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ, ನ್ಯಾಯವಾದಿ ಜಿ.ಬಿ. ಶಿಗಿಹಳ್ಳಿ, ಬಾಬು ಪತ್ತೆನ್ನವರ, ಪ್ರಪುಲ ಪಾಟೀಲ, ವಾಸನಗೌಡ ಪಾಟೀಲ, ಬಸವರಾಜ ಸಾಲಿಮಠ, ಬಿ.ಬಿ. ನರಸನ್ನವರ, ಪುರಸಭೆ ಸದಸ್ಯ ಗುರು ಮೆಟಗುಡ್ಡ, ಸುಭಾಷ ತುರಮರಿ, ಲಕ್ಕಪ್ಪ ಕಾರಗಿ, ಸಂತೋಷ ಹಡಪದ, ರವಿ ತುರಮರಿ, ಬಸವರಾಜ ಬೆಟಗೇರಿ, ಅಜ್ಜಪ್ಪ ಹೊಸೂರ, ಮಹಾಂತೇಶ ಕರ್ಜಗಿಮಠ, ರವಿ ಹೊಸೂರ, ರತ್ನಾ ಗೋದಿ, ರಾಚಪ್ಪ ಮಟ್ಟಿ, ರಾಜು ಬೊಳಶೆಟ್ಟಿ, ಜಗದೀಶ ಬೂದಿಹಾಳ, ಸಂತೋಷ ರಾಯರ, ಶಿವಾನಂದ ಬಡ್ಡಿಮನಿ, ಸುನೀಲ ಮರಕುಂಬಿ, ಜಯರಾಜ ಮೆಟಗುಡ್ಡ, ಸುಭಾಷ ತುರಮರಿ, ಸಚಿನ ಖಡಿ, ಪ್ರಶಾಂತ ಅಮ್ಮಿನಭಾವಿ, ಪವನ ಅಕ್ಕಿ, ಬಸವರಾಜ ಯಾಸನ್ನವರ, ನಾಮದೇವ ಶಿಂಗನ್ನವರ ಸಾವಿರಾರು ಬಿಜೆಪಿ ಕಾರ್ಯಕರ್ತರು ಇದ್ದರು.

ಜನ್ಮದಿನದ ನಿಮಿತ್ತ ಸಸಿ ವಿತರಣೆ, ಸಿದ್ದೇಶ್ವರ ಗಾರ್ಡನ್​ ಹತ್ತಿರ ಜಗದೀಶ ಕಾಲನಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಜರುಗಿತು. 151 ಯುವಕ, ಯುವತಿಯರು ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net