ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ

web6
ಚನ್ನಮ್ಮ ಕಿತ್ತೂರಿನಲ್ಲಿ ಹಮ್ಮಿಕೊಂಡಿದ್ದ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮದಲ್ಲಿ ವಿವಿಧ ಯೋಜನೆ ಫಲಾನುಭವಿಗಳಿಗೆ ಶಾಸಕ ಬಾಬಾಸಾಹೇಬ ಪಾಟೀಲ ಮಂಜೂರಾತಿ ಪತ್ರ ವಿತರಿಸಿದರು. ರವಿಂದ್ರ ಹಾದಿಮನಿ, ಕೃಷ್ಣ ಬಾಳೆಕುಂದರಗಿ, ಬಸವರಾಜ ಸಂಗೊಳ್ಳಿ, ವಿನಾಯಕ ಮರಡಿ, ಅಪ್ಪಾಸಾಬ್ ಶಿಲ್ಲೇದಾರ ಇತರರು ಇದ್ದರು.
Published on

ಚನ್ನಮ್ಮ ಕಿತ್ತೂರು: ಪಟ್ಟಣದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಶಾಸಕ ಬಾಬಾಸಾಹೇಬ ಪಾಟೀಲ ಬುಧವಾರ ಚಾಲನೆ ನೀಡಿದರು.

ಚುನಾವಣೆ ಪೂರ್ವದಲ್ಲಿ ಮಾತು ಕೊಟ್ಟಂತೆ ರಾಜ್ಯ ಸರ್ಕಾರದ 4ನೇ ಗ್ಯಾರಂಟಿಯನ್ನು ಅನುಷ್ಠಾನಕ್ಕೆ ತರುವ ಮೂಲಕ ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಈ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಿ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ತಹಸೀಲ್ದಾರ್ ರವಿಂದ್ರ ಹಾದಿಮನಿ ಮಾತನಾಡಿ, ನೋಂದಣಿಯಾದ ಎಲ್ಲ ಗೃಹಲಕ್ಷ್ಮೀಯರ ಖಾತೆಗಳಿಗೆ ಇಂದು ಅಥವಾ ನಾಳೆ ಹಣ ಜಮೆ ಆಗುತ್ತದೆ ಎಂದರು.

ಚನ್ನಮ್ಮ ಬಸಯ್ಯ ಹಿರೇಮಠ ಅವರಿಗೆ ಅಧಿಕೃತವಾಗಿ ಗೃಹಲಕ್ಷ್ಮೀ ಯೋಜನೆಯ ಹಾಗೂ ಅಮೃತಾ ಸುಣಗಾರ ಅವರಿಗೆ ಭಾಗ್ಯಲಕ್ಷ್ಮೀ ಸುಕನ್ಯಾ ಸಮೃದ್ಧಿ ಯೋಜನೆಯ ಮಂಜೂರಾತಿ ಪತ್ರವನ್ನು ಶಾಸಕರು ವಿತರಿಸಿದರು.

ಕೃಷ್ಣ ಬಾಳೆಕುಂದರಗಿ, ಬಸವರಾಜ ಸಂಗೊಳ್ಳಿ, ವಿನಾಯಕ ಮರಡಿ, ಅಪ್ಪಾಸಾಬ್ ಶಿಲ್ಲೇದಾರ, ಅಷ್ಫಾಕ್ ಹವಾಲ್ದಾರ್, ಸುರೇಶ ಕಿತ್ತೂರು, ಸುನೀಲ ಘಿವಾರಿ, ಶಿಲ್ಪಾ ಜಗಜಂಪಿ, ಶಿಲ್ಪಾ ಗುಂಗೋಳ, ಗೀತಾ ಗದ್ದಿಹಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net