ಕಾಂಗ್ರೆಸ್ ಸರ್ಕಾರ ಕಾನೂನು ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದೆ

CTD 25 R.ASHOK--02
Published on

ಚಿತ್ರದುರ್ಗ: ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆಗಾಗಿ ಸಿಬಿಐಗೆ ಕೊಟ್ಟಿದ್ದ ಅನುಮತಿ ಹಿಂಪಡೆದ ಕಾಂಗ್ರೆ ಸ್ ಸರ್ಕಾರ ಕಾನೂನು ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ಶ್ರೀ ಶಿವಶರಣ ಮಾ ದಾರ ಚನ್ನಯ್ಯ ಗುರುಪೀಠಕ್ಕೆ ಶನಿವಾರ ಭೇಟಿ ನೀಡಿ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಅವರ ಆರ್ಶೀವಾದ ಪಡೆದ ಬ ಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಒಮ್ಮೆ ತನಿಖೆ ಶುರುವಾದ ಬಳಿಕ ಅನುಮತಿ ಹಿಂಪಡೆಯಲು ಸಾಧ್ಯವಾಗದೆಂಬ ಅಭಿಪ್ರಾಯವಿದೆ. ಹಿಂದಿನ ಅಡ್ವೋಕೇಟ್ ಜನರ ಲ್ ಅನುಮತಿ ಕೊಟ್ಟಿದ್ದರು. ಇಂಥದ್ದೇ ಹಿಂದಿನ ಕೆಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್, ಹೈಕೋರ್ಟ್‌ಗಳು ಛೀಮಾರಿ ಹಾಕಿವೆ. ವಿ ಚಾರಣೆ ಹಂತದಲ್ಲಿರುವ ಹಾಗೂ ಶೇ.70 ತನಿಖೆ ಪೂರ್ಣಗೊಂಡಿರುವ ಪ್ರಕರಣ ಹಿಂಪಡೆದರೆ ಕೋರ್ಟ್, ಈ ಸರ್ಕಾರಕ್ಕೆ ಛೀಮಾರಿ ಹಾಕ ಬಹುದು.
ಅನುಮತಿ ಹಿಂಪಡೆಯಲೆಂದೇ ಸಂಪುಟದ ವಿಶೇಷ ಸಭೆ ನಡೆಸಲಾಗಿದೆ. ರಹಸ್ಯದಿಂದ ಏಕಾಏಕಿ ವಿಷಯ ಮಂಡಿಸಿ ಒಪ್ಪಿಗೆ ಪಡೆಯ ಲಾಗಿದೆ. ಸಂಪುಟ ಸಭೆ ಮುನ್ನ, ಶಿವಕುಮಾರ್ ಪರ ವಕೀಲರು ವಿಚಾರಣೆಗೆ ಒಂದು ವಾರದ ಸಮಯಾವಕಾಶ ಕೇಳಿದ್ದನ್ನು ಗಮನಿಸಿದರೆ ಸರ್ಕಾರದ ಹುನ್ನಾರ ಅರ್ಥವಾಗುತ್ತದೆ.
ಸಿಎಂ ಸಿದ್ದರಾಮಯ್ಯ ವಕೀಲರು, ಅವರಿಗೆ ಮುಂದಿನ ಅನಾಹುತದ ಅರಿವಿದೆ. ಆದರೆ ಕಾಂಗ್ರೆಸ್ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಹಾಗೂ ರಣದೀಪ್‌ಸುರ್ಜೆವಾಲ ಅವರು, ಒತ್ತಡ ಹೇರಿದ್ದರಿಂದಾಗಿ ಸಿಎಂ ಇದಕ್ಕೆ ಸಮ್ಮತಿಸಿದ್ದಾರೆ. ಇದು ನ್ಯಾಯಾಂಗ ದ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆಯಾಗಲಿದೆ.
ಕೇಸ್ ವಜಾ ಮಾಡಿ ಎಂದು ಕೋರ್ಟಿಗೆ ಹೋದವರಿಗೆ, ಸ್ಪೀಕರ್ ಅನುಮತಿ ಇಲ್ಲವೆಂಬುದರ ಅರಿವು ಇರಲಿಲ್ಲವೇ? ಸಿಎಂ ಆದೇಶ ವನ್ನು ಕಾರ‌್ಯದರ್ಶಿ ಜಾರಿ ಮಾಡುತ್ತಾರೆಂದು, ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಿಬಿಐಗೆ ಅನುಮತಿ ಕೊಡಲು ಮೌಖಿಕ ವಾಗಿ ಆದೇಶಿಸಿದ್ದರೆಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು. ಈ ಪ್ರಕರಣದಲ್ಲಿ ಸರ್ಕಾರ ನಗೆಪಾಟಲಿಗೆ ಈಡಾಗಲಿದೆ.
ಬಿ.ವೈ.ವಿಜಯೇಂದ್ರ ಹರಕೆ ಕುರಿ ಎಂಬ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್,ತಿಮ್ಮಾ ಪೂರ, ಅವರು ಮೊದಲು ದುಬೈಗೆ ಹೋಗಿರುವ ಕೆಲವು ಸಚಿವರನ್ನು ಕರೆದುಕೊಂಡು ಬಂದು ನಂತರ ಮಾತನಾಡಲಿ. ಶಿವಕುಮಾರ್ ಸಿ ಎಂ ಆಗುತ್ತಾರೆಂದು ಅವರ ಎಂಎಲ್‌ಎಗಳು ಮಾತನಾಡುತ್ತಾರೆ.
135 ಸೀಟುಗಳನ್ನು ಗೆದ್ದಿದ್ದರು ಸಿದ್ದರಾಮಯ್ಯ ಹೊಸದಿಲ್ಲಿಯಲ್ಲಿ ಯಾಕೆ 4 ದಿನಗಳ ಕಾಲ ಕುಳಿತಿದ್ದರು? ಸಿದ್ದರಾಮಯ್ಯ ಸಿಎಂ ಆ ಗುವುದಾದರೆ ನಾನು ಹೊರ ಹೋಗುತ್ತೇನೆಂದು ಶಿವಕುಮಾರ್ ಹೇಳಿರಲಿಲ್ಲವೆ ಎಂದು ಪ್ರಶ್ನಿಸಿದ ಅಶೋಕ್, ಬಿಜೆಪಿಯಲ್ಲಿ ಶೇ.98 ಗೊ ಂದಲ ಬಗೆಹರಿದಿದೆ.
ಮಾಜಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ಸ್ಪೀಕರ್ ಹುದ್ದೆ ಕುರಿತಾದ ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆ ವಿರೋಧಿಸಿ ಸದನದ ಒಳಗೆ, ಹೊರಗೆ ಹೋರಾಟ ಮಾಡಲಾಗುವುದು. ಸಂವಿಧಾನ ವಿರುದ್ಧ ಹೇಳಿಕೆ ನೀಡಿರುವ ಜಮೀರ್‌ಗೆ ಶಿಕ್ಷೆ ಆಗಬೇಕು ಎಂದರು. ಗ್ಯಾರಂಟಿಗಳಿಂದಾಗಿ ಈ ಸರ್ಕಾರ ಪಾಪರ್ ಆಗಿದೆ, ರೈತರಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.
ಶಾಸಕ ಎಸ್.ಮುನಿರಾಜು, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವ ರಾಜನ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮಾಜಿ ಅಧ್ಯಕ್ಷ ಹನುಮಂತೇಗೌಡ, ರೇಖಾ, ನವೀನ್‌ಚಾಲುಕ್ಯ, ಕಲ್ಲೇಶಯ್ಯ, ವೆಂಕಟೇಶ್‌ಯಾದವ್, ವಿರುಪಾಕ್ಷ, ಪಾಲಯ್ಯ,ಚಂದ್ರು ಇತರರು ಇದ್ದರು.

(ಸಿಟಿಡಿ 25 ಆರ್.ಆಶೋಕ್)
ಚಿತ್ರದುರ್ಗದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ಪ್ರತಿಪಕ್ಷ ನಾಯಕ ಆರ್.ಆಶೋಕ್ ಅವರು ಶನಿವಾರ ಭೇಟಿ ನೀ ಡಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಆರ್ಶೀವಾದ ಪಡೆದರು. ಶಾಸಕ ಎಸ್.ಮುನಿರಾಜು, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಎ.ಮುರುಳಿ, ಸೌಭಾಗ್ಯಬಸವರಾಜನ್, ಹನುಮಂತೇಗೌಡ, ನವೀನ್‌ಚಾಲುಕ್ಯ, ಕಲ್ಲೇಶಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net