ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ರೈತರಿಗೆ ಕಿರುಕುಳ

13sgr1
Published on

ಸಾಗರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಹಾಗೂ ಸಾಗರದಲ್ಲಿ ಗೋಪಾಲಕೃಷ್ಣ ಬೇಳೂರು ಶಾಸಕರಾದ ನಂತರದಲ್ಲಿ ತಾಲೂಕಿನಲ್ಲಿ ರೈತರ ಮೇಲೆ ಕಿರುಕುಳ ಹೆಚ್ಚಾಗುತ್ತಿದೆ. ರೈತರ ಮೇಲಿನ ಕಿರುಕುಳ ಇದೇ ರೀತಿ ಮುಂದುವರಿದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಎಚ್ಚರಿಸಿದರು.

ಕಳೆದ ಎರಡೂವರೆ ವರ್ಷದಲ್ಲಿ ಹಲವು ರೈತರು ಶಾಸಕರ ಸೂಚನೆಯಂತೆ ಅಕಾರಿಗಳ ವಕ್ರದೃಷ್ಟಿ ಬಿದ್ದು ತಮ್ಮ ಜಮೀನು, ಸಲು ಕಳೆದುಕೊಂಡು ಬೀದಿಗೆ ಬಂದಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ರಾಜ್ಯ ಸರ್ಕಾರ ಭೂಕಾಯ್ದೆಗೆ ಯಾವುದೇ ಹೊಸ ತಿದ್ದುಪಡಿ ತಂದಿಲ್ಲ. ಆದರೂ ಸಾಗರ ಕ್ಷೇತ್ರ ವ್ಯಾಪ್ತಿಯಲ್ಲಿ ಅರಣ್ಯಾಕಾರಿಗಳು ರೈತರ ಸಲು ನಾಶಪಡಿಸಿ ಒಕ್ಕಲೆಬ್ಬಿಸುತ್ತಿದ್ದಾರೆ. ಹಿರಳೇ ತಿಮ್ಮಪ್ಪ ಎಂಬುವವರ ಶುಂಠಿ ಸಲು ನಾಶ ಮಾಡಿದ್ದು ತಾಲೂಕಿನ ಕೋಗಾರಿನಲ್ಲಿ ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡಿದ ನಾಗರಾಜ್ ಎಂಬುವವರ ಸಲು ನಾಶ ಮಾಡಲಾಗಿದೆ. ಚನ್ನಶೆಟ್ಟಿಕೊಪ್ಪದ ಜಂಬೂರುಮನೆ ಗ್ರಾಮದ ಸ.ನಂ.18ರಲ್ಲಿ ರಾತ್ರಿ 8ಗಂಟೆಗೆ ಅರಣ್ಯಾಕಾರಿಗಳು ಮನೆಗೆ ನುಗ್ಗಿ ಮನೆ ಧ್ವಂಸ ಮಾಡಿದ್ದಾರೆ. ಇದಕ್ಕೆ ಬೇಕಾದ ದಾಖಲೆ ನಮ್ಮ ಬಳಿ ಇದೆ. ರಾತ್ರಿ ವೇಳೆ ಹೋಗಿ ಮನೆ ತೆರವು ಮಾಡುವ ಸಂದರ್ಭದಲ್ಲಿ ಹೆಚ್ಚುಕಡಿಮೆಯಾಗಿದ್ದರೆ ಅದಕ್ಕೆ ಹೊಣೆ ಯಾರು? ಇದಕ್ಕೆ ಉತ್ತರ ನೀಡಲಿ. ಅರಣ್ಯಾಕಾರಿಗಳಿಗೆ ಕೇಳಿದರೆ ರಾಜಕೀಯ ಒತ್ತಡ ಇದೆ ಎಂದು ಹೇಳುತ್ತಾರೆ ಎಂದರು.

ಇರುವಕ್ಕಿಯಲ್ಲಿ ಇತರ ಜನಾಂಗಗಳ ಜಮೀನು ತೆರವು ಮಾಡದೆ ಮೂರು ಜನ ಬಡ ಬ್ರಾಹ್ಮಣ ಕುಟುಂಬದ ಜಮೀನು ಭೂಸ್ವಾೀನಪಡಿಸಿಕೊಳ್ಳಲಾಗಿದೆ. ಧ್ವನಿ ಇಲ್ಲದ ಬ್ರಾಹ್ಮಣರ ಜಮೀನು ಸ್ವಾೀನಪಡಿಸಿಕೊಂಡಿದ್ದಾರೆ. ಈ ಸರ್ಕಾರದಲ್ಲಿ ರೈತರಿಗೆ ಸೂಕ್ತ ರಕ್ಷಣೆ ಇಲ್ಲ ಎಂದರು. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ, ನಾನು ಶಾಸಕನಾಗಿದ್ದಾಗ ಒಬ್ಬನೇ ಒಬ್ಬ ರೈತರನ್ನು ಒಕ್ಕಲೆಬ್ಬಿಸಿರಲಿಲ್ಲ. ಎಲ್ಲ ಪ್ರಕರಣಗಳನ್ನು ಜನತೆ ಗಂಭೀರವಾಗಿ ಗಮನಿಸುತ್ತಿದ್ದಾರೆ ಎಂದರು.

ನೆರೆಯಿಂದ ಮನೆ ಕಳೆದುಕೊಂಡವರಿಗೆ ನಮ್ಮ ಸರ್ಕಾರ 5 ಲಕ್ಷ ರೂ.ಪರಿಹಾರ ನೀಡುತ್ತಿತ್ತು. ಈಗಿನ ಕಾಂಗ್ರೆಸ್ ಸರ್ಕಾರ 1.20 ಲಕ್ಷ ರೂ. ಪರಿಹಾರ ನೀಡುತ್ತಿದೆ. ಅದನ್ನು ಸಹ ಈತನಕ ನೀಡಿಲ್ಲ. ಹಾನಿಗೊಳಗಾದ ಮನೆಗಳಿಗೆ ಕನಿಷ್ಠ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಟಿ.ಡಿ.ಮೇಘರಾಜ್, ದೇವೇಂದ್ರಪ್ಪ, ಕೊಟ್ರಪ್ಪ ನೇದರವಳ್ಳಿ, ಸುವರ್ಣ ಟೀಕಪ್ಪ, ಗಿರೀಶ್ ಹಕ್ರೆ, ಧನರಾಜ್, ಜೆ.ಕೆ.ಭೈರಪ್ಪ, ಪರಮೇಶ್ವರ ಕರೂರು, ನಾರಾಯಣಪ್ಪ ಕೆಳದಿ, ಸುಜಯ ಶೆಣೈ, ಶಿವಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net