ಕಾಂಗ್ರೆಸ್ ವರಿಷ್ಠರ ಸಕಾರಾತ್ಮಕ ಸ್ಪಂದನೆ

19CKD1-Web
ತೋರಣಹಳ್ಳಿ ಹನುಮಾನ ಮಂದಿರದಲ್ಲಿ ಕಲ್ಲೋಳಿಕರ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಅರಿಶಿಣ-ಕುಂಕುಮ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಕರ ಮಹಿಳೆಯರೊಂದಿಗೆ ಸಮಾಲೋಚನೆ ನಡೆಸಿದರು. ಶಾಂತಾ ಕಲ್ಲೋಳಿಕರ, ನಾನಾಗೌಡ ಪಾಟೀಲ, ಧುಳಗೌಡ ಪಾಟೀಲ, ರಾಘವೇಂದ್ರ ಸನದಿ ಇತರರಿದ್ದರು.
Published on

ಚಿಕ್ಕೋಡಿ: ಜನರ ಸೇವೆ ಮಾಡಲು ಉನ್ನತ ಹುದ್ದೆ ತ್ಯಜಿಸಿ ರಾಯಬಾಗ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಬಯಸಿದ್ದು, ಪಕ್ಷದ ಮುಖಂಡರ ಬಳಿ ಟಿಕೆಟ್‌ಗಾಗಿ ಮನವಿ ಮಾಡಲಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ತಿಳಿಸಿದ್ದಾರೆ.

ತಾಲೂಕಿನ ತೋರಣಹಳ್ಳಿ ಹನುಮಾನ ಮಂದಿರದಲ್ಲಿ ಕಲ್ಲೋಳಿಕರ ಫೌಂಡೇಷನ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ವಿಶೇಷ ಪೂಜೆ ಹಾಗೂ ಅರಿಶಿಣ-ಕುಂಕುಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರಿಷ್ಠರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಸರ್ಕಾರಿ ಸೇವೆಯಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿ ಜನ ಸೇವೆ ಮಾಡಿದ್ದೇನೆ. ಇದೀಗ ಸರ್ಕಾರದ ಯೋಜನೆಗಳನ್ನು ಸಾಮಾನ್ಯ ಜನರ ಮನೆ ಬಾಗಿಲಿಗೆ ಮುಟ್ಟಿಸುವ ಮೂಲಕ ಅವರ ಸರ್ವಾಂಗಿಣ ಪ್ರಗತಿಗೆ ಶ್ರಮಿಸುವುದೇ ನನ್ನ ಮುಖ್ಯ ಗುರಿ. ಈ ಭಾಗದಲ್ಲಿ 10 ರಿಂದ 15 ವರ್ಷ ಕಲ್ಲೋಳಕರ ಫೌಂಡೇಷನ್ ಮೂಲಕ ಜನರ ಸೇವೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಧುಳಗೌಡ ಪಾಟೀಲ, ಎಂ.ಎಚ್.ಪಟೇಲ್, ಜಿಪಂ ಮಾಜಿ ಅಧ್ಯಕ್ಷೆ ಶಾಂತಾ ಕಲ್ಲೋಳಿಕರ, ದುಂಡಪ್ಪ ಘರಬುಡೆ, ರವಿ ಪಾಶ್ಚಾಪುರೆ, ರುದ್ರಪ್ಪ ಸಂಗಪ್ಪಗೋಳ, ರಾಘವೇಂದ್ರ ಸನದಿ, ನಾನಾಗೌಡ ಪಾಟೀಲ, ಬಸವಪ್ರಭು ಕುಂಡ್ರುಕ್, ಬಸು ಮಾಂಜರೆ, ಅಪ್ಪಾಸಾಬ ಬ್ಯಾಳಿ, ರಾವಸಾಹೇಬ ಕೀರೆ, ಎಂ.ಆರ್.ಮನ್ನೋಳಿಕರ, ಐ.ಎಂ.ಪಾಟೀಲ, ಭೀಮರಾವ ಲಚ್ಚಪ್ಪಗೋಳ, ಶಿವಾಜಿ ಖಾಡ, ರಾಮಗೌಡ ಲಚ್ಚಪ್ಪಗೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net