ಕಾಂಗ್ರೆಸ್ ರೈತ ವಿರೋಧಿ ಸರ್ಕಾರ

Congress is an anti-farmer government
ಬಸವನಬಾಗೇವಾಡಿಯ ತಹಸೀಲ್ದಾರ್ ಕಚೇರಿ ಎದುರು ಬಿಜೆಪಿ ರೈತ ಮೋರ್ಚಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿದರು. ಸಂಗನಗೌಡ ಚಿಕ್ಕೊಂಡ, ಶಂಕರಗೌಡ ಪಾಟೀಲ, ಪರಮಾನಂದ ತನಕೇದಾರ, ಪ್ರಶಾಂತ ಪೂಜಾರಿ ಇತರರಿದ್ದರು.
Published on

ಬಸವನಬಾಗೇವಾಡಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ರೈತ ಹಾಗೂ ಜನ ವಿರೋಧಿಯಾಗಿದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.

ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ನಿಲುವು ಖಂಡಿಸಿ ಶುಕ್ರವಾರ ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ ಸಹಯೋಗದಲ್ಲಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬೃಹತ್ ಪ್ರತಿಭಟನೆ ಮೂಲಕ ಮಿನಿ ವಿಧಾನಸೌಧ ತಹಸೀಲ್ದಾರ್ ಕಚೇರಿಗೆ ಪಾದಯಾತ್ರೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಕಳೆದ 3 ತಿಂಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸುತ್ತಿದ್ದು. ಈ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 139 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯಸರ್ಕಾರ ರೈತರ ಆತ್ಮಹತ್ಯೆ ತಡೆಗೆ ಮುಂದಾಗಬೇಕು ಎಂದರು.

ರಾಜ್ಯದಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ರೈತರು ಸಾಲ ಮಾಡಿ ಅಲ್ಪಸ್ವಲ್ಪ ಮಳೆಗೆ ಭೂಮಿಯಲ್ಲಿ ಬಿತ್ತನೆ ಮಾಡಿದ್ದು. ಆ ಬೆಳೆಯು ಕಮರಿ ಹೋಗುತ್ತಿವೆ. ಹೀಗಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಬಗ್ಗೆ ಸಚಿವರು ನೀಡುತ್ತಿರುವ ಹೇಳಿಕೆಗಳು ಮತ್ತು ಸರ್ಕಾರ ರೈತರ ಬಗ್ಗೆ ತೋರುತ್ತಿರುವ ವಿರೋಧಿಧೋರಣೆಗಳು ಸರಿಯಲ್ಲ. ತಕ್ಷಣ ಸರ್ಕಾರ ರೈತರ ನೆರವಿಗೆ ಬರಬೇಕು. ಹಿಂದಿನ ಬಿಜೆಪಿ ಸರ್ಕಾರ ರೈತರಿಗೆ ಸಹಕಾರವಾಗುವಂತಹ ಯೋಜನೆಗಳನ್ನು ತಡೆ ಹಿಡಿದಿರುವುದು ಸರಿಯಲ್ಲ ಎಂದರು.

ಪ್ರತಿಭಟನೆಯಲ್ಲಿ ಸಂಗನಗೌಡ ಚಿಕ್ಕೊಂಡ, ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ, ಪರಮಾನಂದ ತನಕೇದಾರ, ಪ್ರಶಾಂತ ಪೂಜಾರಿ, ಎಸ್.ಎಸ್. ಹಿರೇಮಠ, ಪ್ರಶಾಂತ ಪವಾರ, ಮಲ್ಲು ಸೊಬಗೊಂಡ, ಬಸವರಾಜ ಬಿಜಾಪುರ, ಪ್ರವೀಣ ಪವಾರ, ಟಿ.ಸಿ. ಯಳಮೇಲಿ, ಬಸವರಾಜ ಬೊಮ್ಮನಹಳ್ಳಿ, ಮುರಗೆಪ್ಪ ಬೆಳ್ಳುಬ್ಬಿ, ಪ್ರಕಾಶ ಮಲಗಾರ, ಶರಣು ಮರನಾಳ, ಸಂಗಪ್ಪ ಸೌದಿ, ವಿನೋದ ಬಜಂತ್ರಿ, ಸಿದ್ದಪ್ಪ ದೇಗಿನಾಳ, ಮುದುಕಪ್ಪ ಹೊರ್ತಿ, ದುಂಡಪ್ಪ ಖಾಕನಕಿ, ಈರಣ್ಣ ಅಡಗಿಮನಿ, ಮಲ್ಲು ಬನಾಸಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net