ಕಾಂಗ್ರೆಸ್ ಮುಖಂಡರು ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆ

ಕಾಂಗ್ರೆಸ್ ಮುಖಂಡರು ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆ
Published on

ಹಾಸನ: ಹಾಸನದಲ್ಲೂ ಲೋಕಸಭೆ ಚುನಾವಣೆಗೂ ಮುನ್ನವೇ ಪಕ್ಷಾಂತರ ಪರ್ವ ಶುರುವಾಗಿದ್ದು, ದುದ್ದ ಹೋಬಳಿಯ ಕೆಲ ಪ್ರಭಾವಿ ಕಾಂಗ್ರೆಸ್ ಮುಖಂಡರು ಮಂಗಳವಾರ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾದರು.
ಜಿಪಂ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಆರ್.ವಾಸುದೇವ್(ಹೆರಗುವಾಸು), ಅಟ್ಟಾವರ ಹೊಸಳ್ಳಿಯ ವಾಸು, ದೊರೆ, ಚಿಕ್ಕಕಡಲೂರು ಬೋರೇಗೌಡ, ವಿಜಯಕುಮಾರ್, ದುದ್ದದ ಶಿವೇಗೌಡ, ದಿವಾಕರ್, ವಿಜಯಕುಮಾರ್ ಮೊದಲಾದವರು .ರೇವಣ್ಣ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು. ಮುಖಂಡರ ನಿವಾಸಕ್ಕೇ ತೆರಳಿದ ರೇವಣ್ಣ, ಎಲ್ಲಾರನ್ನು ಪಕ್ಷಕ್ಕೆ ಸ್ವಾಗತಿಸಿ ಬರಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net