

ಚಿಕ್ಕಮಗಳೂರು: ತಾಲೂಕಿನ ಚಿಕ್ಕಗೌಜ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಸಿ.ಹಾಲಪ್ಪ (೮೭) ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕಳೆದ ಐದು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹಾಲಪ್ಪ ಅವರು ಗ್ರಾಪಂ ಹಾಗೂ ಮಂಡಲ ಪಂಚಾಯಿತಿ ಸದಸ್ಯರಾಗಿದ್ದರು. ಹಾಲಪ್ಪ ಅವರ ಅಂತ್ಯ ಸಂಸ್ಕಾರ ಚಿಕ್ಕಗೌಜ ಗ್ರಾಮದಲ್ಲಿ ನೆರವೇರಿತು. ಹಾಲಪ್ಪ ನಿಧನಕ್ಕೆ ಶಾಸಕ ಎಚ್.ಡಿ.ತಮ್ಮಯ್ಯ ಸಂತಾಪ ಸೂಚಿಸಿದ್ದಾರೆ.