ಕಾಂಗ್ರೆಸ್ ಭದ್ರಕೋಟೆ ಮರು ನಿರ್ಮಿಸೋಣ

0207Klb13
Published on


ಕಲಬುರಗಿ: ಬೆಂಗಳೂರಿನಲ್ಲಿ ಗುರುವಾರ ನಡೆದ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ ಹಾಗೂ ಸಲೀಂ ಅಹ್ಮದ್ ಪದಗ್ರಹಣ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ವೀಕ್ಷಿಸಲು ಪಕ್ಷದ ಜಿಲ್ಲಾ ಕಚೇರಿ ಮತ್ತು ಜಿಲ್ಲೆಯ 300ಕ್ಕೂ ಹೆಚ್ಚು ಕಡೆ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾ ಕಚೇರಿಯಲ್ಲಿ ವೀಕ್ಷಕರಾಗಿ ಆಗಮಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ. ವಸಂತಕುಮಾರ, ಶಂಕರ ದೊಡ್ಡಿ, ವೆನಿಲ್ಲಾ ಸೂರ್ಯವಂಶಿ, ಜಾನ್ ಜತೆ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಪ್ರಚಾರ ಸಮಿತಿ ಅಧ್ಯಕ್ಷ ಜಗನ್ನಾಥ ಗೋಧಿ, ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ್, ಬ್ಲಾಕ್ ಅಧ್ಯಕ್ಷ ನೀಲಕಂಠ ಮೂಲಗೆ ಇತರರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಬೆಂಗಳೂರಿನಲ್ಲಿ ಡಿಕೆಶಿ ತಂಡ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿದ್ದರೆ, ಇಲ್ಲೂ ಎಲ್ಲರೂ ಎದ್ದು ನಿಂತು ಪ್ರತಿಜ್ಞೆ ಸ್ವೀಕರಿಸಿದರು. ಪದಗ್ರಹಣ ವೇಳೆ ಹಲವೆಡೆ ಪಟಾಕಿ ಸಿಡಿಸಿ ಸಿಹಿ ಸಹ ಹಂಚಿ ಸಂಭ್ರಮಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಚೀನಾ ಗಡಿಯಲ್ಲಿ ಹುತಾತ್ಮ 20 ಯೋಧರನ್ನು ಸ್ಮರಿಸಿ ಮೌನಾಚರಣೆ ಮಾಡಲಾಯಿತು.
ಪ್ರಮುಖರಾದ ಅಲಂಖಾನ್, ಡಾ.ಕಿರಣ ದೇಶಮುಖ, ಮಹಾಂತಪ್ಪ ಸಂಗಾವಿ, ಬಾಬು ಒಂಟಿ, ಲತಾ ರವಿ ರಾಠೋಡ್, ಈರಣ್ಣ ಝಳಕಿ, ಸಂಗೀತಾ ಪಾಟೀಲ್, ಹಣಮಂತ ಜವಳಿ, ಭೀಮರಾವ ತೇಗಲತಿಪ್ಪಿ, ಶಾಂತಪ್ಪ ಕೂಡಲಗಿ, ಸವಿತಾ ಸಜ್ಜನ್, ಪ್ರಭಾವತಿ ಪಾಟೀಲ್, ಚೇತನಕುಮಾರ ಗೋನಾಯಕ, ಬಸವರಾಜ ಬಿರಾದಾರ, ಸಂಜೀವ ಐರಡ್ಡಿ, ರಾಜಕುಮಾರ ಕಪನೂರ, ಸೈಯದ್ ಅಹ್ಮದ್, ಲಾಲ್ ಅಹ್ಮದ್ ಮೊದಲಾದವರು ಪಾಲ್ಗೊಂಡಿದ್ದರು.

ಡಿ.ಕೆ. ಶಿವಕುಮಾರ್ ಸಾರಥ್ಯದಲ್ಲಿ ಪಕ್ಷ ಸಂಘಟನೆಗೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶ್ರಮಿಸುವ ಮೂಲಕ ಮತ್ತೆ ಅಧಿಕಾರಕ್ಕೆ ತರಲು ಕಾರ್ಯಪ್ರವೃತ್ತರಾಗಬೇಕು. ಪ್ರತಿಯೊಬ್ಬ ಕಾರ್ಯಕರ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಪಕ್ಷ ಸಂಘಟನೆಗೆ ಟೊಂಕಕಟ್ಟಿ ನಿಲ್ಲಬೇಕು.
| ಜಗನ್ನಾಥ ಗೋಧಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net