ಕಾಂಗ್ರೆಸ್ ಬೆಂಬಲಿತರು ಅವಿರೋಧ ಆಯ್ಕೆ

24hbd1
Published on

ಹುಮನಾಬಾದ್: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಎಂಎಸ್)ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 13 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಶಾಸಕ ರಾಜಶೇಖರ ಪಾಟೀಲ್ ಪುತ್ರ ಅಭಿಷೇಕ ಪಾಟೀಲ್ ನೇತೃತ್ವದ ಪೆನಾಲ್ ಭರ್ಜರಿ ಜಯ ಗಳಿಸಿದೆ. ಸಂಘದ 13 ನಿರ್ದೇಶಕ ಸ್ಥಾನಗಳ ಆಯ್ಕೆಗಾಗಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, 13 ಸ್ಥಾನಗಳಿಗೆ 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಶನಿವಾರ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂತೆಗೆದುಕೊಂಡಿದ್ದರಿಂದ ಕಣದಲ್ಲಿ ಉಳಿದ 13 ಅಭ್ಯರ್ಥಿಗಳನ್ನು ಚುನಾವಣಾಧಿಕಾರಿಗಳಾದ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಸಹಾಯಕ ನಿರ್ದೇಶಕ ಮಹಾದೇವ ಸ್ವಾಮಿ ಅವಿರೋಧ ಆಯ್ಕೆ ಘೋಷಿಸಿದರು. ಚುನಾವಣೆಯಲ್ಲಿ ಅಭಿಷೇಕ ರಾಜಶೇಖರ ಪಾಟೀಲ್, ಮಲ್ಲಿಕಾರ್ಜುನ ಗುಂಡಪ್ಪ, ಸುಭಾಷಚಂದ್ರ ಪವಾಡಶೆಟ್ಟಿ, ವಿಜಯಕುಮಾರ ಗೊಟುರ್, ವೀರೇಶ ನೀಲಕಂಠ, ಈಶ್ವರ ಕಲಬುರಗಿ, ಅಣ್ಣಾರಾವ ಪಾಟೀಲ್ ಹುಡಗಿ, ಮಾರುತಿ ಖಂಡಾರಿ, ಮಾಣಿಕಪ್ಪ ಬ್ಯಾಲಹಳ್ಳಿಕರ್, ಮಹ್ಮದ್ ಪಟೇಲ್ ಫತ್ರು ಪಟೇಲ್, ಸೋಮಶೇಖರ ಏಖ್ಖೆಳ್ಳಿ, ಸುನಂದಾ ಪ್ರಭು, ಸರಸ್ವತಿ ಶಿವರಾಜ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net