

ಬೆಟ್ಟದಪುರ: ಸಮೀಪದ ಹರದೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
ಎಚ್.ಟಿ. ಕುಮಾರ, ರಾಜಶೇಖರ, ಕುಮಾರ್, ಎಚ್.ಸಿ. ಮಂಜುನಾಥ್, ಎಚ್.ಎಸ್. ರಾಮೇಗೌಡ, ಸತೀಶ್, ಎಚ್.ಕೆ. ನಾಗರಾಜೇಗೌಡ, ಸಾವಿತ್ರಮ್ಮ, ತಿಮ್ಮಮ್ಮ, ಎಚ್.ಎಂ. ಜಗದೀಶ, ಎಚ್.ಎಸ್. ಜಗದೀಶ, ರವಿ ಹಾಗೂ ಚಂದ್ರನಾಯಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಇಲಾಖೆ ಪ್ರಸಾದ್ ಘೋಷಣೆ ಮಾಡಿದರು.
ಸಂಘದ ಒಟ್ಟು 13 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯುವ ಮುಖಂಡ ನಿತಿನ್ ವೆಂಕಟೇಶ್ ಆಗಮಿಸಿ ಅಭಿನಂದನೆ ಸಲ್ಲಿಸಿದರು. ಮುಖಂಡರಾದ ಸುರೇಶ್‌ಗೌಡ, ಕಾಶಿರಾಜ್, ಗೋವಿಂದಯ್ಯ, ಮೆಡಿಕಲ್ ಮಂಜು, ಮೈಲಾರಿಗೌಡ, ದಿಲೀಪ್, ಮಂಜುನಾಥ್, ಮಧು, ಬೆಟ್ಟದಪುರ ಪೊಲೀಸ್ ಸಿಬ್ಬಂದಿ ಕುಮಾರ್, ಸಿಬ್ಬಂದಿ ಶೇಖರ್, ಸಂಘದ ಕಾರ್ಯದರ್ಶಿ ಹರೀಶ್, ಸಿಬ್ಬಂದಿ ಅಜಿತ್ ತರರಿದ್ದರು.