ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಗೆಲುವು

31 HANUR 3
Published on

ಹನೂರು: ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿಯ 6ನೇ ವಾರ್ಡ್‌ನ (ಗಂಗನದೊಡ್ಡಿ) ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆರ್. ಬಸವರಾಜು ಜಯ ಗಳಿಸಿದರು.

ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ 6ನೇ ವಾರ್ಡ್‌ನ ಸದಸ್ಯ ವೆಂಕಟಶೆಟ್ಟಿ ನಿಧನರಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಕೆ.ಗೋವಿಂದ, ಆರ್.ಬಸವರಾಜು, ಎಂ.ಮುರುಗ ಹಾಗೂ ಲಕ್ಷ್ಮಮ್ಮ ಸ್ಪರ್ಧಿಸಿದ್ದರು. ಅ.28ರಂದು ಚುನಾವಣೆ ನಡೆದು, 365 ಜನರು ಮತ ಚಲಾಯಿಸಿದ್ದರು.

ಸೋಮವಾರ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಮತ ಎಣಿಕೆಯಲ್ಲಿ ಗೋವಿಂದ 24, ಲಕ್ಷ್ಮಮ್ಮ 3, ಮುರುಗ 144 ಮತಗಳನ್ನು ಪಡೆದರು. ಬಸವರಾಜು 189 ಮತಗಳನ್ನು ಪಡೆದು ಜಯ ಗಳಿಸಿದರು. ಚುನಾವಣಾಧಿಕಾರಿಯಾಗಿ ಕಾವೇರಿ ನೀರಾವರಿ ನಿಗಮದ ಎಇಇ ರಾಮಕೃಷ್ಣ ಕಾರ್ಯನಿರ್ವಹಿಸಿದರು. ಘೋಷಣಾ ಪ್ರಮಾಣ ಪತ್ರವನ್ನು ತಹಸೀಲ್ದಾರ್ ಆನಂದಯ್ಯ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net