

ಕೆ.ಆರ್.ಪೇಟೆ: ತಾಲೂಕಿನ ಸಂತೇಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 10 ಸ್ಥಾನಗಳನ್ನು ಗೆದ್ದಿದ್ದಾರೆ.
ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಹಡವನಹಳ್ಳಿ ಗೋಪಾಲ್(502), ಲೋಕನಹಳ್ಳಿ ಎಂ.ಪುನೀತ್ (536), ಹುಬ್ಬನಹಳ್ಳಿ ದಶರಥ (479), ದೊಡ್ಡಕ್ಯಾತನಹಳ್ಳಿ ಮಂಜೇಗೌಡ (456), ಮೀಸಲು ಕ್ಷೇತ್ರದಿಂದ ಛಾಯಾ ಕೃಷ್ಣ (602), ಎನ್.ಲಕ್ಷ್ಮೀ ಮಂಜೇಗೌಡ(419), ಬಿಸಿಎಂ ‘ಎ’ ಮೀಸಲು ಕ್ಷೇತ್ರದಿಂದ ಹರೀಶ್ (532), ಬಿಸಿಎಂ ‘ಬಿ’ ಮೀಸಲು ಕ್ಷೇತ್ರದಿಂದ ಬಿ.ಮೋಹನ್ (558), ಎಸ್.ಸಿ.ಮೀಸಲು ಕ್ಷೇತ್ರದಿಂದ ಹುಬ್ಬನಹಳ್ಳಿ ಸುರೇಶ್ (397), ಎಸ್.ಟಿ.ಮೀಸಲು ಕ್ಷೇತ್ರದಿಂದ ಹಡವನಹಳ್ಳಿ ಕುಮಾರ್ (372) ಜಯ ಸಾಧಿಸಿದ್ದಾರೆ.
ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಲೋಕನಹಳ್ಳಿ ಎಲ್.ಎಸ್.ದಿನೇಶ್ (ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರ) ಹಾಗೂ ಹಡವನಹಳ್ಳಿ ಮಹಾದೇವಪ್ಪ(394/ಸಾಮಾನ್ಯ ಕ್ಷೇತ್ರ) ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಆನಂದ್‌ನಾಯಕ್, ಸಹ ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ಅಜಿತ್ ಕಾರ್ಯನಿರ್ವಹಿಸಿದರು.
ನಿರ್ದೇಶಕರನ್ನು ಮನ್‌ಮುಲ್ ನಿರ್ದೇಶಕ ಡಾಲು ರವಿ, ಗ್ರಾಪಂ ಮಾಜಿ ಅಧ್ಯಕ್ಷ ಹುಬ್ಬನಹಳ್ಳಿ ಕುಮಾರಸ್ವಾಮಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಮಾಳಗೂರು ಜಗದೀಶ್, ಡಿ.ಪಿ.ಪರಮೇಶ್, ಹಡವನಹಳ್ಳಿ ದಿನೇಶ್ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಮನ್ಮುಲ್ ನಿರ್ದೇಶಕ ಡಾಲು ರವಿ, ಸಹಕಾರ ಸಂಘಗಳು ರೈತರ ಜೀವನಾಡಿಗಳಾಗಿವೆ. ಇವುಗಳ ಅಭಿವೃದ್ಧಿಗೆ ನೂತನ ನಿರ್ದೇಶಕರು ಶ್ರಮಿಸಬೇಕು ಎಂದರು.