

ಕೆ.ಆರ್.ಪೇಟೆ: ತಾಲೂಕಿನ ಅಘಲಯ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಬೆಂಬಲಿತ ಮೈತ್ರಿ ಅಭ್ಯರ್ಥಿಗಳು 13 ಸ್ಥಾನಗಳ ಪೈಕಿ 11 ಸ್ಥಾನ, ಜೆಡಿಎಸ್ ಬೆಂಬಲಿತರು 2 ಸ್ಥಾನಗಳನ್ನು ಗೆದ್ದಿದ್ದಾರೆ.
ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎ.ಎಸ್.ಶ್ರೀಧರ್ (434), ಎ.ವೈ.ವಿಜಯ್ ಕುಮಾರ್ (392), ಎನ್.ಎಸ್.ಮಂಜೇಗೌಡ (349), ಎನ್.ಆರ್.ರಾಮೇಗೌಡ (344), ಮಂಜುನಾಥ್ (343), ಬಿಸಿಎಂ ‘ಎ’ ಮೀಸಲು ಕ್ಷೇತ್ರದಿಂದ ಕೃಷ್ಣೇಗೌಡ (346), ಬಿಸಿಎಂ ‘ಬಿ’ ಮೀಸಲು ಕ್ಷೇತ್ರದಿಂದ ಡಿ.ಆರ್.ಕುಮಾರಸ್ವಾಮಿ (369), ನಾಗಮ್ಮ (362) ಚಂದ್ರಿಕಾ (323), ಮಂಜು (292) ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಎಸ್.ಟಿ.ಮೀಸಲು ಕ್ಷೇತ್ರದಿಂದ ದೇವಮ್ಮ ಅವಿರೋಧ ಆಯ್ಕೆಯಾಗಿದ್ದಾರೆ. ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜೇಶ್ 240 ಮತ ಪಡೆದು ಜಯಗಳಿಸಿದರು. ಇಬ್ಬರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಕೃಷ್ಣೇಗೌಡ (346/ಬಿಸಿಎಂ ಎ) ಮತ್ತು ಎನ್.ಆರ್.ರಾಮೇಗೌಡ(344/ ಸಾಮಾನ್ಯ ಕ್ಷೇತ್ರ) ಜಯ ಗಳಿಸಿದ್ದಾರೆ.
ಚುನಾವಣಾಧಿಕಾರಿಯಾಗಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಚ್.ಬಿ.ಭರತ್‌ಕುಮಾರ್, ಸಹ ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ಮುರುಳೀಧರ್ ಕಾರ್ಯನಿರ್ವಹಿಸಿದರು.
ನೂತನ ನಿರ್ದೇಶಕರನ್ನು ಜಿಪಂ ಮಾಜಿ ಸದಸ್ಯ ಮಂಜುನಾಥ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎಸ್.ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಮಹಡಿಮನೆ ಮಂಜಣ್ಣ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎ.ಎಸ್.ಶ್ರೀಧರ್, ಎ.ವೈ.ವಿಜಯ್‌ಕುಮಾರ್ ಇತರರು ಅಭಿನಂದಿಸಿದರು.