

ಬೀದರ್: ದಕ್ಷಿಣ ವಿಧಾನಸಭೆ ಕ್ಷೇತ್ರದ ಬೋರಾಳ, ಜಮೀಸ್ತಾನಪುರ, ನಾಗೋರಾ ಸೇರಿದಂತೆ ವಿವಿಧ ಗ್ರಾಮಗಳ ಕಾಂಗ್ರೆಸ್, ಬಿಜೆಪಿಯ ಮುಖಂಡರು, ಯುವಕರು, ಮಹಿಳೆಯರು ಜೆಡಿಎಸ್ ಸೇರಿದರು. ಖಾಶೆಂಪುರ (ಪಿ) ಗ್ರಾಮದ ಹೊರವಲಯದ ತಮ್ಮ ನಿವಾಸದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ ಪಕ್ಷ ಸೇರಿದವರಿಗೆ ಶಾಲು ಹೊದಿಸಿ, ಧ್ವಜ ನೀಡುವ ಮೂಲಕ ಸ್ವಾಗತಿಸಿದರು.
ಚುನಾವಣೆ ದಿನಾಂಕ ಪ್ರಕಟಗೊಂಡಿದ್ದು, ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಕೆಲಸ ಮಾಡಬೇಕಾಗಿದೆ. ಪಕ್ಷ ಸಂಘಟನೆ ಬಲವರ್ಧನೆಗೆ ಆದ್ಯತೆ ನೀಡಬೇಕು. ಜೆಡಿಎಸ್ ಅಧಿಕಾರದಲ್ಲಿದ್ದಾಗ ಮಾಡಿದ ಜನಪರ ಕೆಲಸಗಳ ಜತೆಗೆ ಅಧಿಕಾರಕ್ಕೆ ಬಂದರೆ ಜಾರಿಗೆ ತರುವ ಯೋಜನೆಗಳ ಕುರಿತು ಪ್ರತಿ ಮನೆಗೂ ತಿಳಿಸಬೇಕು ಎಂದು ಖಾಶೆಂಪುರ ಹೇಳಿದರು.
ಬೋರಾಳದ ರಾಜಕುಮಾರ ಬಿರಾದಾರ್, ಅಶೋಕ ಹೊಸಮನಿ, ರಹೀಮ್, ಬೊಮ್ಮಗೊಂಡ, ಮಾಣಿಕರಾವ್ ಬೂತಾಪು, ಜಮೀಸ್ತಾನಪುರದ ಅಭಿಲಾಷ ಸಿಂಧೆ, ನಾಗೋರಾದ ರಮೇಶ, ಸವಿತಾ ಸುಭಾಷ, ಕವಿತಾ, ಶ್ರೀದೇವಿ, ಸಂಜನಾ, ಜಯಶೀಲಾ, ಶೋಭಾವತಿ, ಸುನೀತಾ, ಬಕ್ಕಮ್ಮಾ, ನರಸಮ್ಮ, ಲಕ್ಷ್ಮೀ, ಭಾಗ್ಯವತಿ, ಮಂಗಲಾ, ಈಶ್ವರಿ, ಶಿವಮ್ಮ, ರೋಹಿಣಿ, ವಿಜಯಶ್ರೀ, ಅಂಬಿಕಾ, ಇಸ್ಮಾಯಿಲ್, ಆರೀಫ್ ಇತರರು ಜೆಡಿಎಸ್ ಸೇರಿದರು. ಈ ವೇಳೆ ಬೀದರ್ ದಕ್ಷಿಣ ಕ್ಷೇತ್ರದ ಪರಿಶಿಷ್ಟ ಜಾತಿ ವಿಭಾಗದ ಕಾಯರ್ಾಧ್ಯಕ್ಷರಾಗಿ ನೇಮಕವಾದ ಪ್ರೇಮನಾಥ ಅಂಬೇವಾಡೆಕರ್ ಅವರಿಗೆ ಶಾಸಕರು ಆದೇಶ ಪತ್ರ ನೀಡಿ ಸತ್ಕರಿಸಿದರು.