

ಕಲಘಟಗಿ: ರಾಜ್ಯದಲ್ಲಿ ಸೌಹಾರ್ದಯುತ ಸಮಾಜ ನಿರ್ವಿುಸಲು ಕಾಂಗ್ರೆಸ್ ಪಕ್ಷವನ್ನು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಕೈ ಬಲಪಡಿಸಲು ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಹೇಳಿದರು.
ಪಟ್ಟಣದ ಹೊರವಲಯದ ಹನ್ನೆರಡು ಮಠದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಪ್ರತಿಜ್ಞಾ ದಿನದ ನೇರ ಪ್ರಸಾರ ವೀಕ್ಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬೇಕಾಬಿಟ್ಟಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಅಂಕುಶ ಹಾಕಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸಮರ್ಥ ನಾಯಕರಾಗಿದ್ದಾರೆ. ಇವರ ಅವಧಿಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಸಂವರ್ಧನೆಗೊಳ್ಳಲಿದೆ. ಕೆಳ ಮಟ್ಟದ ಕಾರ್ಯಕರ್ತರನ್ನೂ ಗೌರವಿಸುವ ಅವರು ಗ್ರಾಮ ಮಟ್ಟದಿಂದ ಪಕ್ಷವನ್ನು ಆಡಳಿತಕ್ಕೆ ತರಲಿದ್ದಾರೆ ಎಂದರು.
ಮುಕ್ತಿ ಮಂದಿರದ ಶ್ರೀ ವಿಮಲರೇಣುಕ ಶಿವಾಚಾರ್ಯರು, ಹನ್ನೆರಡು ಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯದ್ವಯರು ಜ್ಯೋತಿ ಬೆಳಗಿಸುವ ಮೂಲಕ ಪ್ರತಿಜ್ಞಾ ದಿನದ ನೇರ ಪ್ರಸಾರ ವೀಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಣ್ಣಪ್ಪ ಓಲೇಕಾರ, ಬಿ.ವೈ. ಪಾಟೀಲ, ಶಿವಾಜಿ ವಾಗ್ಮೋಡೆ, ಶಂಕರಗೌಡ ಭರಮಗೌಡ್ರ, ರಾಮಣ್ಣ ಬಾರಕೇರ, ಚಂದ್ರಪ್ಪ ಹುಲಿಹೊಂಡ, ಪ್ರಕಾಶ ಬೆಂಗೇರಿ, ನಾರಾಯಣ ಮಧೂರಕರ, ಅಬ್ದುಲ್ಸತ್ತಾರ ಪಠಾಣ, ಪ್ರಕಾಶ ಹುಲಿಕಟ್ಟಿ, ಕಾರ್ಯಕರ್ತರು ಇದ್ದರು.
ಪ್ರತಿಜ್ಞಾ ವಿಧಿ ಬೋಧನೆ: ಕಲಘಟಗಿಯ ಹೊರವಲಯ ದಲ್ಲಿರುವ ಮಾಜಿ ಶಾಸಕ ಸಂತೋಷ ಲಾಡ್ ಅವರ ನಿವಾಸದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ ಕಾರ್ಯಕರ್ತರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕೆಪಿಸಿಸಿ ಕ್ಷೇತ್ರ ವೀಕ್ಷಕಿ ವನಜಾಕ್ಷಿ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಮಾಜಿ ಸದಸ್ಯ ವೈ.ಬಿ. ದಾಸನಕೊಪ್ಪ, ಸದಸ್ಯರಾದ ವಿದ್ಯಾ ಬಾವನವರ, ಈರವ್ವ ದಾಸನಕೊಪ್ಪ, ಹರಿಶಂಕರ ಮಠದ, ಸೋಮಶೇಖರ ಬೆನ್ನೂರ, ಹಿರಿಯರಾದ ಶಂಕರಗಿರಿ ಬಾವನವರ, ವೃಷಭೇಂದ್ರ ಪಟ್ಟಣಶೆಟ್ಟಿ, ಮಂಜುಳಾ ದೇವಲಾಪುರ, ಅಜಮತುಲ್ಲಾಖಾನ ಜಹಗೀರದಾರ, ಲಿಂಗರಡ್ಡಿ ನಡುವಿನಮನಿ, ಸುಧೀರ ಬೋಳಾರ, ಬಾಳು ಖಾನಾಪುರ, ಇತರರಿದ್ದರು.
ಅಳಗವಾಡಿಯಲ್ಲೂ ವೀಕ್ಷಣೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪದಗ್ರಹಣ ಕಾರ್ಯಕ್ರಮದ ನೇರ ವೀಕ್ಷಣೆ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಹರಿ ಮಂದಿರದಲ್ಲಿ ಗುರುವಾರ ಜರುಗಿತು. ಕಾರ್ಯಕ್ರಮಕ್ಕೆ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಚಾಲನೆ ನೀಡಿದರು. ಮಾಜಿ ಸಚಿವ ಕೆ.ಎನ್. ಗಡ್ಡಿ, ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ, ಕೆಪಿಸಿಸಿ ವೀಕ್ಷಕ ಪ್ರಕಾಶಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ಪಿ.ಕೆ. ನೀರಲಕಟ್ಟಿ, ಚಂದ್ರು ಅಣ್ಣಿಗೇರಿ, ಎಂ.ಎಂ. ಮಾಕಣ್ಣವರ, ವೈ.ಬಿ. ಕುರಹಟ್ಟಿ, ಪ್ರವೀಣ ಹೊಂಗಲ, ಶಿವಣ್ಣ ನಾಯ್ಕರ, ಬಸು ಜಿಣ್ಣರ, ವೆಂಕಣ್ಣ ಅಣ್ಣಿಗೇರಿ, ಇತರರಿದ್ದರು.
ಕಟಗಿ ನಿವಾಸದಲ್ಲಿ ವ್ಯವಸ್ಥೆ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಪರದೆಯ ಮೂಲಕ ಕುಂದಗೋಳದಲ್ಲಿ ಕಾರ್ಯಕರ್ತರು ವೀಕ್ಷಿಸಿದರು. ಅಲ್ಲದೆ, ಪಕ್ಷ ಬಲಪಡಿಸುವ ಪ್ರತಿಜ್ಞೆ ಸ್ವೀಕರಿಸಿದರು. ಪಟ್ಟಣದ ಅರವಿಂದ ಕಟಗಿ ಅವರ ನಿವಾಸದಲ್ಲಿ ನೇರ ಪ್ರಸಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ನಗರ ಘಟಕದ ಅಧ್ಯಕ್ಷ ಸುರೇಶ ಗಂಗಾಯಿ, ನಗರ ಘಟಕದ ವೀಕ್ಷಕರಾದ ಬಸಲಿಂಗಪ್ಪ ಕೋರಿ, ರವಿ ಕಲ್ಯಾಣಿ, ಕಿಸಾನ್ ತಾಲೂಕು ಘಟಕದ ಅಧ್ಯಕ್ಷ ಗಂಗಾಧರ ಪಾಣಿಗಟ್ಟಿ, ಸಲೀಂ ಕ್ಯಾಲಕೊಂಡ ಸಲೀಂ ಕಡ್ಲಿ, ಇತರರು ಇದ್ದರು.