ಕಾಂಗ್ರೆಸ್​ ಬಜೆಟ್​ ಹಿಂದು ವಿರೋಧಿ: ಬಿಜೆಪಿ ಪ್ರತಿಭಟನೆ

13 Jaggu 3
ಬೆಳಗಾವಿಯಲ್ಲಿ ರಾಜ್ಯ ಕಾಂಗ್ರೆಸ್​ ಬಜೆಟ್​ ಖಂಡಿಸಿ ಬಿಜೆಪಿ ಮುಖಂಡರು ಗುರುವಾರ ಬೃಹತ್​ ಪ್ರತಿಭಟನೆ ನಡೆಸಿದರು. ಸಂಜಯ್​ ಪಾಟೀಲ, ಅನಿಲ ಬೆನಕೆ, ಸುಭಾಷ ಪಾಟೀಲ, ಡಾ. ಸೋನಾಲಿ ಸನೋರ್ಬತ್​, ಎಂ.ಬಿ. ಝೀರಲಿ, ಗೀತಾ ಸುತಾರ, ಮುರುಂದ್ರಗೌಡ ಪಾಟೀಲ, ಪ್ರಮೋದ ಕೊಚೇರಿ ಇತರರಿದ್ದರು.
Published on

ಬೆಳಗಾವಿ: ರಾಜ್ಯ ಸರ್ಕಾರ ದಲಿತ ಹಾಗೂ ಹಿಂದು ವಿರೋಧಿ ಬಜೆಟ್​ ಮಂಡಿಸಿದೆ ಎಂದು ಆರೋಪಿಸಿ ನಗರದಲ್ಲಿ ಬಿಜೆಪಿ ಮುಖಂಡರು ಗುರುವಾರ ಬೃಹತ್​ ಪ್ರತಿಭಟನೆ ನಡೆಸಿದರು.

ನಗರದ ಚನ್ನಮ್ಮವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಹಲಗೆ ಬಾರಿಸುತ್ತ ರಾಜ್ಯ ಸರ್ಕಾರದ ವಿರುದ್ಧ ೂಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್​ ಸರ್ಕಾರ ಮುಸ್ಲಿಮರ ತುಷ್ಟೀಕರಣದ ಬಜೆಟ್​ ಮಂಡಿಸಿದೆ. ರೈತರಿಗೆ ಯಾವುದೇ ಯೋಜನೆ ನೀಡದೆ ಒಂದೇ ಸಮುದಾಯ ಓಲೈಸುವ ಕೆಲಸ ಮಾಡಿದೆ ಆರೋಪಿಸಿದರು.

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, 36 ಸಾವಿರ ಕೋಟಿ ರೂ. ಗುತ್ತಿಗೆದಾರರ ಬಾಕಿ ಬಿಲ್​ ನೀಡುತ್ತಿಲ್ಲ. ಗ್ಯಾರಂಟಿಗಳ ಹೆಸರಿನಲ್ಲಿ ನಡೆಯುತ್ತಿರುವ ಸರ್ಕಾರ ಗ್ಯಾರಂಟಿ ಸರಿಯಾಗಿ ನೀಡುತ್ತಿಲ್ಲ. ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅನೇಕ ಸಮುದಾಯಗಳಿಗೆ ಬಜೆಟ್​ನಲ್ಲಿ ಅನ್ಯಾಯವಾಗಿದೆ. ಬರುವಂತಹ ದಿನಗಳಲ್ಲಿ ಜನರು ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹರಿಹಾಯ್ದರು.

ಮಾಜಿ ಶಾಸಕ ಸಂಜಯ್​ ಪಾಟೀಲ ಮಾತನಾಡಿ, ಸಿದ್ದರಾಮಯ್ಯ ಪಾಕಿಸ್ತಾನ ಪರ ಬಜೆಟ್​ ಮಂಡಿಸಿದ್ದಾರೆ. ಅವರು ಪಾಕಿಸ್ತಾನಕ್ಕೆ ಹೋಗಬೇಕು ಎಂದರು.

ರಾಜ್ಯ ಉಪಾಧ್ಯ ಅನಿಲ ಬೆನಕೆ ಮಾತನಾಡಿ, ಸರ್ಕಾರ ಒಂದೇ ಸಮುದಾಯವನ್ನು ಓಲೈಸಿದೆ. ಬೆಳಗಾವಿಗೆ ಹಾಗೂ ಹಿಂದುಗಳಿಗೆ ಏನನ್ನೂ ನೀಡಿಲ್ಲ. ರಾಜ್ಯ ಬಿಜೆಪಿ ಇದನ್ನು ಖಂಡಿಸುತ್ತದೆ ಎಂದು ಹೇಳಿದರು.

ಗ್ರಾಮೀಣ ಜಿಲ್ಲಾಧ್ಯ ಸುಭಾಷ ಪಾಟೀಲ ಮಾತನಾಡಿ, ರಾಜ್ಯ ಸರ್ಕಾರದಿಂದ ದಲಿತರ ಹಣ ದುರ್ಬಳಕೆ ಮಾಡಲಾಗುತ್ತಿದೆ. ಸರ್ಕಾರದ ಖಜಾನೆ ಖಾಲಿಯಾಗಿದ್ದು, ಸ್ವಪದ ಶಾಸಕರೇ ಸರ್ಕಾರದ ವಿರುದ್ಧ ಸಿಡಿದೇಳುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿಸಿದರು.

ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಬಿಜೆಪಿ ಮಹಿಳಾ ಪ್ರಮುಖ ಡಾ. ಸೋನಾಲಿ ಸನೋರ್ಬತ್​, ಎಂ.ಬಿ. ಝೀರಲಿ, ಗೀತಾ ಸುತಾರ, ಮುರುಂದ್ರಗೌಡ ಪಾಟೀಲ, ಪ್ರಮೋದ ಕೊಚೇರಿ ಸೇರಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net