

ಚಿತ್ರದುರ್ಗ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸಹಿಸಲಾಗದೆ, ಬಿಜೆಪಿ-ಜೆಡಿಎಸ್ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಆರೋಪಿಸಿ ಚಿತ್ರದುರ್ಗ ಕಾಂಗ್ರೆಸ್ ಕಚೇರಿ ಬಳಿ ಪಕ್ಷದ ಮಹಿಳಾ ಕಾರ‌್ಯಕರ್ತರು ಪ್ರತಿಪಕ್ಷಗಳ ವಿರುದ್ಧ ಪೋಸ್ಟರ್ ಪ್ರದರ್ಶಿಸಿ ಪ್ರತಿಭಟಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿಗೌಡ, ಮೋಕ್ಷಾ ರುದ್ರಸ್ವಾಮಿ, ನಜ್ಮತಾಜ್, ಪಿ.ಕೆ.ಮೀನಾಕ್ಷಿ, ಮುನಿರಾ ಎ.ಮಕಾಂದಾರ್, ಭಾಗ್ಯಮ್ಮ, ಚಂದನಾ, ಶ್ವೇತಾ ಇದ್ದರು.