

ಬೇಲೂರು: ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ನಿಶಾಂತ್, ಪಕ್ಷದ ಕಾರ್ಯಕರ್ತರ ವಿರುದ್ಧವೇ ಹಲ್ಲೆ ನಡೆಸಿರುವುದನ್ನು ಖಂಡಿಸಿ, ತಕ್ಷಣವೇ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಆಗ್ರಹಿಸಿ ಜಿಪಂ ಮಾಜಿ ಸದಸ್ಯ ವೈ.ಎನ್.ಕೃಷ್ಣೇಗೌಡ ಹಾಗೂ ಮುಖಂಡ ಗ್ರಾನೈಟ್ ರಾಜಶೇಖರ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟಿಸಿ ಮಾಜಿ ಸಚಿವ ಬಿ.ಶಿವರಾಂ ಹಠಾವೋ ಕಾಂಗ್ರೆಸ್ ಬಚಾವೋ ಎಂಭ ಘೋಷಣೆ ಕೂಗಿದರು.
ಪಟ್ಟಣದ ಖಾಸಗಿ ಹೋಟೆಲ್ ಸಮೀಪದಿಂದ ಮಾಜಿ ಸಚಿವ ಬಿ.ಶಿವರಾಂ ವಿರುದ್ಧ ಘೋಷಣೆಗಳನ್ನು ಕೂಗಿ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಪ್ರತಿಭಟಿಸಿ ಮಾತನಾಡಿದ ಜಿಪಂ ಮಾಜಿ ಸದಸ್ಯ ವೈ.ಎನ್.ಕೃಷ್ಣೇಗೌಡ, ಕಳೆದ ಡಿಸೆಂಬರ್ 4 ರಂದು ತಾಲೂಕಿನ ಹಳೇಬೀಡಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ನಮ್ಮ ಪಕ್ಷದ ಮುಖಂಡ ರಾಯಪುರ ಶಿವಣ್ಣ ಅವರು, ಬಿ.ಶಿವರಾಂರವರ ವಿರುದ್ಧ ಮಾತನಾಡಿದ್ದಾರೆ ಎಂದು ಬೇಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ನಿಶಾಂತ್, ತಾನೊಬ್ಬ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಂಬುದನ್ನು ಮರೆತು ನಿ?್ಠಾವಂತ ಕಾರ್ಯಕರ್ತ ಶಿವಣ್ಣರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದು ಖಂಡಿಸುತ್ತೇವೆ. ಅಲ್ಲದೆ ಈ ಬ್ಲಾಕ್ ಅಧ್ಯಕ್ಷರನ್ನು ಶೀಘ್ರವೇ ಪಕ್ಷದಿಂದ ಉಚ್ಚಾಟಿಸಬೇಕು. ಇವರ ಗೂಂಡಾಗಿರಿಗೆ ಕುಮ್ಮಕ್ಕು ನೀಡುತ್ತಿರುವ ಮಾಜಿ ಸಚಿವರಾದ ಬಿ.ಶಿವರಾಂರವರ ವಿರುದ್ಧ ಕೂಡ ಹೈಕಮಾಂಡ್ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನ್ಯಾಯಕ್ಕಾಗಿ ಕೆಪಿಸಿಸಿ ಕಚೇರಿ ಮುಂದೆ ಕ್ಷೇತ್ರದ ಕಾರ್ಯಕರ್ತರೊಂದಿಗೆ ಉಗ್ರವಾಗಿ ಪ್ರತಿಭಟಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡ ಗ್ರಾನೈಟ್ ರಾಜಶೇಖರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಾನು ಮತ್ತು ವೈ.ಎನ್.ಕೃ?್ಣೇಗೌಡರು ಒಟ್ಟಾಗಿ ಪಕ್ಷದ ಸಂಘಟನೆಗೆ ಮುಂದಾಗಿದ್ದೇವೆ. ಇದನ್ನು ಸಹಿಸದೆ ಮಾಜಿ ಸಚಿವ ಬಿ.ಶಿವರಾಂ ಬಣದವರು ಹತಾಶೆಯಿಂದ ನಮ್ಮ ಕಾರ್ಯಕರ್ತರ ವಿರುದ್ಧ ದಬ್ಬಾಳಿಕೆ ಮತ್ತು ದೌರ್ಜನ್ಯ ಎಸಗುತಿದ್ದಾರೆ. ಇಂತವರ ವಿರುದ್ಧ ಪೋಲಿಸರು ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದ ಅವರು ಕಾಂಗ್ರೆಸ್ ಮುಖಂಡ ರಾಯಪುರ ಶಿವಣ್ಣ ಮೇಲೆ ಒಬ್ಬ ಜವಬ್ದಾರಿ ಇರುವ ಪಕ್ಷದ ಅಧ್ಯಕ್ಷರೇ ಕೈ ಮಾಡುವುದು ಎಷ್ಟು ಸರಿ. ಎಲ್ಲರನ್ನು ಒಟ್ಟಿಗೆ ಕರೆದೊಯ್ಯಬೇಕಾದ ಇವರೆ ಯಾರದೋ ಮಾತು ಕೇಳಿ ಕಾರ್ಯಕರ್ತರ ಮೇಲೆ ಹಲ್ಲೆ ದೌರ್ಜನ್ಯ ಎಸಗಿ ಪಕ್ಷವನ್ನು ಕ್ಷೇತ್ರದಲ್ಲಿ ಹಾಳು ಮಾಡುತಿದ್ದಾರೆ. ಈ ಬಗ್ಗೆ ಕೆಪಿಸಿಸಿ ಮುಖಂಡರು ಗಮನ ಹರಿಸಿ ಕಾರ್ಯಕರ್ತರಿಗೆ ನ್ಯಾಯ ಕೊಡಿಸಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಚಿಕ್ಕಬ್ಯಾಡಿಗೆರೆ ಮಂಜುನಾಥ್, ವಿಜಯಕುಮಾರ್, ಪುರಸಭೆ ಮಾಜಿ ಸದಸ್ಯರಾದ ಜುಬೇರ್ ಅಹಮದ್, ಅರುಣ್ ಕುಮಾರ್, ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಬಾಬು, ಮುಖಂಡರಾದ ಜೀಪ್ ಚಂದ್ರು, ಭೂಮೇಶ್, ಧನ್‌ಪಾಲ್, ಎಂ.ಜಿ.ವೆಂಕಟೇಶ್, ಆಸೀಫ್ ಸೇರಿದಂತೆ ಇತರರಿದ್ದರು.
''ಪ್ರಬಲ ಸಮಾಜದ ಮುಖಂಡ ಗ್ರಾನೈಟ್ ರಾಜಶೇಖರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಲು ಮೀನಾ ಮೇಣ ಎಣಿಸಿದ್ದಾರೆ ಎಂದು ನಾನು ಮಾಜಿ ಸಚಿವ ಶಿವರಾಂ ಬಗ್ಗೆ ಮಾತನಾಡಿದ್ದು ಸತ್ಯ, ಇದನ್ನೆ ದೊಡ್ಡದು ಮಾಡಿಕೊಂಡು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ನಿಶಾಂತ್ ನನ್ನ ಮೇಲೆ ಹಲ್ಲೆ ನಡೆಸಿದರು. ಈ ಸಂದರ್ಭ ಎಂ.ಆರ್.ವೆಂಕಟೇಶ ನನ್ನನ್ನು ತಬ್ಬಿ ಹಿಡಿದು ಹಲ್ಲೆಗೆ ಸಹಕಾರ ನೀಡಿದರು. ಅವರು ಈ ಹಲ್ಲೆಯಿಂದ ಎದೆ ಗುಂದಿಲ್ಲ. ಇನ್ನು 100 ಜನ ಶಿಬಿ.ವರಾಂ ಮತ್ತು ನಿಶಾಂತ್ ಬಂದರೂ ನನ್ನ ಆತ್ಮಬಲ ಕುಗ್ಗಿಸಲು ಸಾದ್ಯವಿಲ್ಲ''
ರಾಯಾಪುರ ಶಿವಣ್ಣ, ಹಲ್ಲೆಗೊಳಗಾದ ಕಾಂಗ್ರೆಸ್ ಮುಖಂಡ
ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪುಗಳ ನಡುವೆ ಬೂದಿ ಮುಚ್ಚಿದ ಕೆಮಡದಂತಿದ್ದ ತಿಕ್ಕಾಟ ಇತ್ತೀಚೆಗೆ ಜೋರಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಎರಡು ಗುಂಪಿನ ಕೆಲ ಮುಖಂಡರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮುಲಾಯಿಸಿರುವ ಘಟನೆ ನಡೆದು, ಎರಡೂ ಕಡೆಯವರಿಂದ ಪೊಲೀಸ್ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಲಾಗಿದೆ. ಆದರೂ ಎರಡು ಗುಂಪಿನ ಮುಖಂಡರು ಇನ್ನೂ ಒಬ್ಬರ ವಿರುದ್ಧ ಮತ್ತೊಬ್ಬರ ಆರೋಪ ಮಾಡುತಿದ್ದು, ಚುನಾವಣೆ ಹೊಸ್ತಿಲಲ್ಲಿ ಇದು ಎಲ್ಲಿಗೆ ಮುಟ್ಟುತ್ತದೋ ಕಾದು ನೋಡಬೇಕಿದೆ