

ಅರಕಲಗೂಡು: ಕ್ಷೇತ್ರದ ಜನರು ಬದಲಾವಣೆ ಬಯಸಿದ್ದು, ಚುನಾವಣೆಯಲ್ಲಿ ನನ್ನ ಕೈ ಬಲಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್‌ಗೌಡ ಮನವಿ ಮಾಡಿದರು.
ತಾಲೂಕಿನ ಮಲ್ಲಿಪಟ್ಟಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಹೋಬಳಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ನೂರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಎಂತಹ ಸಂದರ್ಭದಲ್ಲಿಯೂ ನಾನು ನಿಮ್ಮೊಂದಿಗಿದ್ದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಅಬ್ದುಲ್ ರೆಹಮಾನ್, ಗಣೇಶ್, ರಾಜೇಶ್, ಕೆಂಪಣ್ಣ, ದೇವರಾಜ್, ಶಶಾಂಕ್, ಸ್ವಾಗತ್, ಪೃಥ್ವಿರಾಜ್, ಧರ್ಮಣ್ಣ, ಗಣೇಶ್, ಉದಯ್, ಅಪ್ಪಣ್ಣ, ಗಿಡ್ಡಣ್ಣ, ಕಾರ್ತಿಕ್, ಮನು ಹಾಗೂ ಸುತ್ತಮುತ್ತಲಿನ ಗ್ರಾಮದ ಜೆಡಿಎಸ್, ಬಿಜೆಪಿ ಬಿಎಸ್‌ಪಿ ಹಾಗೂ ಎ. ಮಂಜು ಬಣದ ನೂರಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.
ಜಿಪಂ ಉಪಾಧ್ಯಕ್ಷ ಎಚ್.ಪಿ. ಶ್ರೀನಿವಾಸ್, ಕಬ್ಬಳಿಗೆರೆ ಸೋಮಶೇಖರ್, ಕಸಾಪ ಉಪಾಧ್ಯಕ್ಷ ಜಿಮ್ ಸೋಮು, ಕರವೇ ಜಯರಾಜ್, ಮಲ್ಲಿಪಟ್ಟಣ ರವಿ, ಟೈಲರ್ ಮಂಜು, ಬಾಗ್ದಾಳ್ ದೇವರಾಜ್, ಶಿರದನಹಳ್ಳಿ ಮಲ್ಲೇಗೌಡ, ಮದ್ಲಾಪುರದ ರಾಜಣ್ಣ, ನೆಲಬಳ್ಳಿ ಪಾಪಣ್ಣ, ಮಂಜಣ್ಣ, ಪಾರಸನಹಳ್ಳಿ ದಿನೇಶ್, ಮನು, ಯಡಿಯೂರು ಪುಟ್ಟರಾಜು, ದಾರಿ ಕೊಂಗಳಲೆ ಪಾಪಣ್ಣ, ಅಲ್ಲಾಪಟ್ಟಣದ ಮಲ್ಲೇಶ್, ವಸಂತ, ಹೆಗ್ಗಡಿಹಳ್ಳಿಯ ಗೋವಿಂದಣ್ಣ, ಬಾಲು, ಬಾಗ್ದಾಳ್ ಸುಧಾಕರ್, ಹಿಪ್ಪಲಿ ಸತೀಶ್, ಹೊಂಡರವಳ್ಳಿ ಪ್ರತಾಪ್, ಮಲ್ಲಿಪಟ್ಟಣ ಮಂಜು, ಮುದಗನೂರು ಪ್ರತಾಪ್ , ಹಿಪ್ಪಲಿ ಪ್ರವೀಣ್, ಮಣಜೂರು ಸಚಿನ್, ಹೊಂಗನೂರು ದಿನೇಶ್, ಪೂರ್ಣೇಶ್, ಶಹಾಬಾಜ್ ಮುಂತಾದವರು ಇದ್ದರು.