ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ

06M.D.R.2
ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉದಯ್ ಅವರಿಗೆ ಬೆಂಬಲಿಗ ಜಗದೀಶ್ ಅವರು ಚುನಾವಣಾ ವೆಚ್ಚಕ್ಕೆ 1 ಲಕ್ಷ ರೂ.ಗಳನ್ನು ನೀಡಿ ಸನ್ಮಾನಿಸಿದರು. ಚಲುವರಾಜು, ಸಿ.ಟಿ.ಶಂಕರ್, ಕೆ.ಆರ್.ಮಹೇಶ್, ದೊರೆಸ್ವಾಮಿ ಇದ್ದರು.
Published on

ಮದ್ದೂರು: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಕೆ.ಕೋಡಿಹಳ್ಳಿ, ಅಗರಲಿಂಗನದೊಡ್ಡಿ, ಹುಣಸೇರದದೊಡ್ಡಿ, ರುದ್ರಾಕ್ಷಿಪುರ, ಮಾದನಾಯನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಕದಲೂರು ಉದಯ್ ಅವರ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದರು.

ಕಾಂಗ್ರೆಸ್ ಪಕ್ಷ ನೊಂದವರ ಧ್ವನಿಯಾಗಿ ಹಲವಾರು ವರ್ಷಗಳಿಂದ ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದು ಅನುಕೂಲ ಕಲ್ಪಿಸಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷವಾಗಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರಾಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳನ್ನು ಈಡೇರಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಕದಲೂರು ಉದಯ್ ಮಾತನಾಡಿ, ಕ್ಷೇತ್ರದ ಮತದಾರರು ನನ್ನನ್ನು ಮನೆ ಮಗನಂತೆ ಕಾಣುತ್ತಿದ್ದು, ನಾನು 3 ವರ್ಷಗಳಿಂದ ಮಾಡಿರುವ ಜನಸೇವೆ ಮತ್ತು ಕಾಂಗ್ರೆಸ್ ಪಕ್ಷದ ಜನಪರ ಯೋಜನೆಯನ್ನು ಮೆಚ್ಚಿ ತಾಲೂಕಿನ ಜನರು ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆಂದು ಭರವಸೆ ವ್ಯಕ್ತಪಡಿಸಿದರು.
ಕೆ.ಕೋಡಿಹಳ್ಳಿ ಗ್ರಾಮದಲ್ಲಿ ಉದಯ್ ಅವರಿಗೆ ಬೆಂಬಲಿಗ ಜಗದೀಶ್ ಅವರು ಚುನಾವಣಾ ವೆಚ್ಚಕ್ಕೆ 1 ಲಕ್ಷ ರೂ.ಗಳನ್ನು ನೀಡಿ ನೀಡಿ ಸನ್ಮಾನಿಸಿದರು.

ತಾಪಂ ಮಾಜಿ ಸದಸ್ಯರಾದ ಕೆ.ಆರ್.ಮಹೇಶ್, ತೈಲೂರು ಚಲುವರಾಜು, ಗ್ರಾಪಂ ಮಾಜಿ ಅಧ್ಯಕ್ಷ ನಿಡಘಟ್ಟ ಪ್ರಕಾಶ್, ಮುಖಂಡರಾದ ಸಿ.ಟಿ.ಶಂಕರ್, ಆರ್.ಸಿ.ಮಹೇಶ್, ಪುಟ್ಟಪ್ಪ, ತಿಪ್ಪೂರು ನಾಗ, ಲಿಂಗೇಗೌಡ, ದೊರೆಸ್ವಾಮಿ, ಯತೀಶ್, ರವಿ, ಪುಟ್ಟಸ್ವಾಮಿ, ವೆಂಕಟೇಶ್, ರಾಜಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net