ಕಾಂಗ್ರೆಸ್ ನುಡಿದಂತೆ ನಡೆದ ಸರಕಾರ

CONGRESSS 02
Published on


ಯಾದಗಿರಿ: ಬಿಜೆಪಿಗರು ತಮ್ಮ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಿಸಿದರು.

ನಗರದ ಎನ್ಜಿಒ ಕಾಲೋನಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಬಹಿರಂಗ ಸಮಾವೇಶ ಉದ್ಘಾಟಿಸಿ ಮಾತನಾಡಿ, ನಾನು ಬಳ್ಳಾರಿ ಪಾದಯಾತ್ರೆಗೆ ಬಂದಿದ್ದಾಗ ಅಕಾರಕ್ಕೆ ಬಂದರೆ, ನೀರಾವರಿಗೆ ರೂ 50,000 ಕೋಟಿ ನೀಡುವುದಾಗಿ ಹೇಳಿದ್ದೆ. ಆದರೆ 58,000 ಕೋಟಿ ನೀರಾವರಿಗೆ ನೀಡಿ, ನುಡಿದಂತೆ ನಡೆದಿದ್ದೇವೆ. ಆದರೆ ಬಿಜೆಪಿ ಕಳೆದ ಚುನಾವಣೆಯಲ್ಲಿ ರಾಜ್ಯದ ಜನರಿಗೆ ನೀಡಿದ್ದ 600 ಭರವಸೆಗಳಲ್ಲಿ 50 ಭರವಸೆ ಸಹ ಈಡೇರಿಸಲು ಸಾದ್ಯವಾಗಿಲ್ಲ ಎಂದು ಕಿಡಿಕಾರಿದರು.

ಕಲ್ಯಾಣ ಭಾಗದಲ್ಲಿ ಪ್ರಮುಖ ಬೆಳೆ ತೊಗರಿಗೆ ನೆಟೆ ರೋಗ ಬಂದಿದ್ದು, ರೈತಾಪಿ ವರ್ಗ ಪರಿತಪಿಸುತ್ತಿದ್ದಾರೆ. ಆದರೆ ಇದುವರೆಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೌಜನ್ಯಕ್ಕಾದರೂ ಈ ಭಾಗದಲ್ಲಿನ ಜಿಲ್ಲೆಗಳಿಗೆ ಭೇಟಿ ನೀಡಲೇ ಇಲ್ಲ. ಇನ್ನೂ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣಗೆ ಕನ್ನಡ ಮಾತನಾಡಲು ಬರುವುದೇ ಇಲ್ಲ ಎಂದು ವ್ಯಂಗ್ಯವಾಡಿದ ಸಿದ್ದು, ಅವರಿಗೆ ರಾಜ್ಯದಲ್ಲಿ ಎಷ್ಟು ಜಾನುವಾರು ಇವೆ ಎಂಬುದೇ ಗೊತ್ತಿಲ್ಲ. ಕರ್ನಾಟಕ 15 ಲಕ್ಷ ಜಾನುವಾರುಗಳು ಕಣ್ಮರೆಯಾಗಿವೆ. ಇವು ಎಲ್ಲಿಗೆ ಹೋಗಿವೆ ಯಾರಿಗೂ ಗೊತ್ತಿಲ್ಲ. ಕಣ್ಮರೆಯಾದ ಜಾನುವಾರುಗಳಿಂದ ನಿತ್ಯ 18 ಲಕ್ಷ ಲೀಟರ್ ಹಾಲು ಉತ್ಪಾದನೆಯಲ್ಲಿ ಕುಂಠಿತಗೊಂಡಿದೆ. ಇದರಿಂದ ಸಕರ್ಾರಕ್ಕೆ ನಿತ್ಯ 6.57 ಕೋಟಿ ರೂ.ನಷ್ಟವಾಗುತ್ತಿದೆ ಎಂದು ವಿವರಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, 12ನೇ ಶತಮಾನದಲ್ಲಿ ಜಾತ್ಯಾತೀತ ಸಮಾಜ ನಿಮರ್ಾಣ ಮಾಡಬೇಕು ಎಂದು ಕ್ರಾಂತಿ ಮಾಡಿದ್ದ ವಿಶ್ವಗುರು ಬಸವಣ್ಣನವರ ನಾಡಾದ ಬಸವ ಕಲ್ಯಾಣದಿಂದ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇವೆ. ಇದರ ಉದ್ದೇಶ ಕಾಂಗ್ರೆಸ್ ಸಮಸಮಾಜ ನಿರ್ಮಾಣ ಮಾಡುವ ಪಕ್ಷವಾಗಿದೆ. ಬಿಜೆಪಿಯಂತೆ ಕೋಮು ಭಾವನೆ ತುಂಬಿಕೊಂಡಿಲ್ಲ. ಅಭಿವೃದ್ಧಿಗಾಗಿ ಶಹಾಪುರ ಕ್ಷೇತ್ರದ ಜನತೆ ಮತ್ತೊಮ್ಮೆ ಶರಣಬಸಪ್ಪರಿಗೆ ಆಶಿವರ್ಾದ ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕ ಪ್ರಿಯಾಂಕ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಒಂದಲ್ಲ 50 ಬಾರಿ ಕಲಬುರಗಿ, ಯಾದಗಿರಿ ಜಿಲ್ಲೆಗೆ ಬಂದರೂ ಕಾಂಗ್ರೆಸ್ ಅಭ್ಯರ್ಥಿಗಳೇ ಇಲ್ಲಿ ಗೆಲವು ಸಾಸುತ್ತಾರೆ. ಇದನ್ನು ರಾಜ್ಯ ಬಿಜೆಪಿ ಅವರು ಅರ್ಥ ಮಾಡಿಕೊಳ್ಳಬೇಕು. ಈ ಹಿಂದೆ ಬಿಜೆಪಿಯವನ್ನು ಚಾಯ್ ಪೇ ಚಚರ್ಾ ಕಾಂಪೇನ್ ಆರಂಭಿಸಿ, ಕಾಂಗ್ರೆಸ್ ಏನು ಸಾಧನೆ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದರು. ಈಗ ನಾವೇ ಚಾಯ್ ಪೇ ಚರ್ಚಾ ಮಾಡುತ್ತೇವೆ ಮತ್ತು ನಾವೇ ಚಹಾ ಮಾಡುತ್ತೇವೆ ಬನ್ನಿ ನಿಮ್ಮ ಸಕರ್ಾರದ ಬಗ್ಗೆ ಚರ್ಚಾ ಮಾಡೋಣ ಎಂದು ಸವಾಲು ಹಾಕಿದರು.

ಬಿಜೆಪಿ ಅವರು ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿದ್ದಾರೆ. ಕೆಕೆಆರ್ಡಿಬಿ ಕಳ್ಳ, ಕಾಕರ ಅಭಿವೃದ್ಧಿ ಮಂಡಳಿ ಮಾಡಲಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್, ಕೆ.ಎಸ್.ಈಶ್ವರಪ್ಪ, ಗೂಳಿಹಟ್ಟಿ ಶೇಖರ, ಮಾಧುಸ್ವಾಮಿ ಹೀಗೆ ಬಿಜೆಪಿಯ ಶಾಸಕರು ಹಾಗೂ ಮಂತ್ರಿಗಳೇ ತಮ್ಮ ಸರಕಾರದಲ್ಲಿನ ಭ್ರಷ್ಟಚಾರದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೆ ಹೆಚ್ಚು ಮಾತನಾಡಿದರೆ, ಸಿಡಿ ಬಿಡುಗಡೆ ಮಾಡುತ್ತೇವೆ ಎಂದು ಹೆದರಿಸಲಾಗುತ್ತಿದೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಕೋಟಿಗಟ್ಟಲೇ ಹಗರಣ ನಡೆಸಲಾಗಿದೆ. ರಾಜ್ಯದಲ್ಲಿ 2.5 ಲಕ್ಷ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ಒಂದೊಂದು ಹುದ್ದೆಗೆ ಇಂತಿಷ್ಟು ರೇಟ್ ಫಿಕ್ಸ್ ಮಾಡಲಾಗಿದೆ. ಹೀಗಾದರೆ ನಮ್ಮ ಭಾಗದ ಮಕ್ಕಳಿಗೆ ಸರಕಾರಿ ನೌಕರಿ ಮಾಡಲು ಸಾಧ್ಯವೇ ಎಂದು ಖಾರವಾಗಿ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net