ಕಾಂಗ್ರೆಸ್ ಧ್ವಜ ಕಟ್ಟಿದಕ್ಕೆ ಆಕ್ಷೇಪ

15blk5
Published on

ಭಾಲ್ಕಿ: ಪಟ್ಟಣದ ಬಸವೇಶ್ವರ ವೃತ್ತದ ಲಿಂಗಾಯತ ಬಸವ ಧರ್ಮ ಧ್ವಜದ ಕಂಬಕ್ಕೆ ಕಾಂಗ್ರೆಸ್ನ ಧ್ವಜ ಕಟ್ಟಿ ಬಸವ ಧರ್ಮಕ್ಕೆ ಅಪಮಾನ ಎಸಗಲಾಗಿದೆ. ಇದು ಅಪರಾಧವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ನಗರ ಠಾಣೆಯ ಪೊಲೀಸ್ ಅಧೀಕ್ಷಕರಿಗೆ ವಿಶ್ವಕ್ರಾಂತಿ ದಿವ್ಯ ಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ದೂರಿದ್ದಾರೆ. ಕಾಂಗ್ರೆಸ್ ಮುಖಂಡ ಪ್ರಕಾಶ ಮಾಶೆಟ್ಟೆ, ಶಾಸಕ ಈಶ್ವರ ಖಂಡ್ರೆ ಅಭಿಮಾನ ಬಳಗದ ಅಧ್ಯಕ್ಷ ಬಿ.ಜಿ.ಪಾಟೀಲ್ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಕಾಶಿನಾಥ ಲದ್ದೆ ಅವರ ಗಮನಕ್ಕೆ ತರಲಾಗಿದೆ. ಆದರೂ ಧ್ವಜ ತೆಗೆದಿಲ್ಲ ಎಂದು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net