ಕಾಂಗ್ರೆಸ್ ದಲಿತರಿಗೆ ರಾಜಕೀಯ ಸ್ಥಾನಮಾನ ಕೊಡಲೇ ಇಲ್ಲ:ಪ್ರಜ್ವಲ್ ರೇವಣ್ಣ

ಕಾಂಗ್ರೆಸ್ ದಲಿತರಿಗೆ ರಾಜಕೀಯ ಸ್ಥಾನಮಾನ ಕೊಡಲೇ ಇಲ್ಲ:ಪ್ರಜ್ವಲ್ ರೇವಣ್ಣ
Published on

ಹಾಸನ: ಅಧಿಕ ಅವಧಿಯವರೆಗೆ ದೇಶದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ದಲಿತರಿಗೆ ರಾಜಕೀಯ ಸ್ಥಾನಮಾನ ಕೊಡಲೇ ಇಲ್ಲ, ಹಿಂದುಳಿದ ವರ್ಗಗಳನ್ನು ಕೇವಲ ಮತಬ್ಯಾಂಕ್ ಆಗಿ ಮಾಡಿಕೊಂಡರು ಎಂದು ಸಂಸದ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ದಲಿತ ಸಂಘಟನೆ ಸಭೆ ಮಾಡಲು ಹೋಗಿ ಕಾಂಗ್ರೆಸ್ ಸಭೆ ನಡೆಸಿದ್ದಾರೆ. ನಮ್ಮ ಪಕ್ಷ ದಲಿತರು ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿದೆ. ಅದರಲ್ಲಿ ಅಂಗಡಿಹಳ್ಳಿಯ 150 ಜನ ಸಮುದಾಯ ಇರುವ ಹಕ್ಕಿಪಿಕ್ಕಿ ಸಮುದಾಯದ ಸಂಗಿತಾ ಎನ್ನುವ ಮಹಿಳೆಯಗೆ ತಾಪಂ ಸದಸ್ಯರಾಗಿ ಮಾಡುವ ಮೂಲಕ ಸಣ್ಣಪುಟ್ಟ ಸಮುದಾಯವನ್ನು ಗುರುತಿಸುವ ಕೆಲಸ ಜೆಡಿಎಸ್ ಮಾಡಿದೆ ಎಂದರು.
ನಾನು ನನ್ನ ಜೀವನದಲ್ಲಿ ದಲಿತ ಸಮುದಾಯ ಮರೆಯುವುದಿಲ್ಲ. ಅಂಬೇಡ್ಕರ್ ಬರೆದ ಸಂವಿಧಾನದ ಗೌರವ ಹೆಚ್ಚಿಸುವ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಪರಿಶಿಷ್ಟ ಸಮುದಾಯವರ ಜೊತೆ ಅಣ್ಣ-ತಮ್ಮಂದಿರಂತೆ ಜೊತೆಯಾಗಿ ಅವರಿಗೆ ರಾಜಕೀಯ ಶಕ್ತಿ ಹಾಗೂ ಆರ್ಥಿಕ ಶಕ್ತಿ ತುಂಬುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ಗಂಗಾ ಕಲ್ಯಾಣ ಯೋಜನೆಯಡಿ ಬೋರವೆಲ್ ಕೊರೆಸಿದ ದಲಿತ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕಾಂಗ್ರೆಸ್‌ನಿಂದ ಆಗಿಲ್ಲ. ನಮ್ಮ ಅವಧಿಯಲ್ಲಿ ಜಾತಿ ತಾರತಮ್ಯ ಯಾವ ಕಾರಣಕ್ಕೂ ಮಾಡಿಲ್ಲ. ಹೊಳೆನರಸೀಪುರ, ಹಾಸನ ಸೇರಿ ಎಲ್ಲಾ ಕಡೆ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದೇವೆ. ಮೀಸಲಾತಿ ಇಲ್ಲದ ಸಮಯದಲ್ಲಿ ಬಾಲಕೃಷ್ಣ ಮೂರ್ತಿಯನ್ನು ಜಿ.ಪಂ. ಅಧ್ಯಕ್ಷರಾಗಿ ಮಾಡಿದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಸೇರಿದಂತೆ ದಲಿತ ಸಮುದಾಯದ ನಾಯಕರಿಗೆ ಮಿಸಲಾತಿ ಕೊಟ್ಟಿದ್ದು ದೇವೇಗೌಡರು. ಆದರೆ, ಕಾಂಗ್ರಸ್ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ 34 ಸಾವಿರ ಕೋಟಿ ಹಣ ಪರಿಶಿಷ್ಟ ಜಾತಿಗೆ ಹಣ ಮೀಸಲಿಟ್ಟ ಬಗ್ಗೆ ಸುಳ್ಳು ಭಾಷಣವನ್ನು ಮಾಡಿಸುತ್ತಾರೆ.ನನ್ನ ಕ್ಷೇತ್ರವೊಂದರಲ್ಲಿ ಸುಮಾರು 600. ಬೊರವೆಲ್ ದಲಿತ ಸಮುದಾಯಕ್ಕೆ ಕೊರೆಯಿಸಿ ಕೊಟ್ಟಿರುವುದಾಗಿ ಹೇಳಿದರು.
ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್ ಪಕ್ಷ ಅಧಿಕಾರದಲ್ಲಿ ಇರಲಿ, ಇಲ್ಲದೆ ಹೊಗಲಿ, ದಲಿತ ಸಮುದಾಯದ ಜನರ ಹಿತ ಕಾಪಾಡಿದ್ದೆವೆ.ಕಾಂಗ್ರೆಸ್ ಪಕ್ಷ ಮಾತ್ರ ದಲಿತ ಚಾಂಪಿಯನ್ ಎಂಬ ಸ್ಲೋಗನ್ ಹಾಕಿಕೊಂಡು ದಲಿತರ ಮೂಗಿಗೆ ತುಪ್ಪ ಹಚ್ಚಿ ದಲಿತರಿನ್ನು ಸೆಳೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ದೇಶಕ್ಕೆ ಸ್ವಾತಂತ್ರೃ ಇಷ್ಷು ವರ್ಷದಲ್ಲಿ ಕಾಂಗ್ರಸ್ 56 ವರ್ಷ ಆಡಳಿತ ಮಾಡಿದೆ.ಬಿಜೆಪಿ ಜೆಡಿಎಸ್ ಕೆವಲ 18 ವರ್ಷ ಮಾತ್ರ ಆಡಳಿತ ನಡೆಸಿದೆ.
ದೇವೇಗೌಡರು ನೀರಾವರಿ ಸಚಿವರಾದ ಸಮಯದಲ್ಲಿ ದಲಿತರಲ್ಲಿ ಆರ್ಥಿಕ ಶಕ್ತಿ ತುಂಬುವ ಸಲುವಾಗಿ ದಲಿತರ ಜಮೀನಗಳಿಗೆ ಬೊರವೆಲ್ ಕೊರೆಯಿಸಿಕೊಡುವ ಕೆಲಸ ಮಾಡಿದ್ದರಿಂದ ದಲಿತರು ಶುಂಠಿ ಮತ್ತು ವ್ಯವಸಾಯ ಮಾಡಿ ಆರ್ಥಿಕ ಲಾಭಗಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಮುಖಂಡರಾದ ಎನ್.ಆರ್.ಸಂತೋಷ್,ಬಾಲಕೃಷ್ಣಮೂರ್ತಿ, ಮಂಜಯ್ಯ, ಶಿವನಂಜಪ್ಪ, ಮಹದೇವಮ್ಮ, ಚಂಚಲ ಕುಮಾರ್‌ಸ್ವಾಮಿ, ಲತಾ ಮಂಜೇಶ್, ಮಂಜುಳಾ, ಸಂಗೀತಾ, ಕ್ರಾಂತಿ ಪ್ರಸಾದ್ ತ್ಯಾಗಿ, ರಘಹೊಂಗೆರೆ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net