ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

07HDK01
ಎಚ್.ಡಿ.ಕೋಟೆ ತಾಲ್ಲೂಕಿನ ಹ್ಯಾಂಡ್ಪೋಸ್ಟ್ ನ ಮಂಜುನಾಥ್ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಯಾದರು.
Published on

ಎಚ್.ಡಿ.ಕೋಟೆ: ವಿಶ್ವಕರ್ಮ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗಿದೆ ಎಂದು ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಬಡಗಲಪುರ ವೆಂಕಟೇಶ್ ಆರೋಪಿಸಿದರು.

ತಾಲೂಕಿನ ಹ್ಯಾಂಡ್‌ಪೋಸ್ಟ್‌ನ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕೋಟೆ ಮತ್ತು ಸರಗೂರು ತಾಲೂಕು ವಿಶ್ವಕರ್ಮ ಸಮಾಜದ ಮುಖಂಡರ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವಕರ್ಮ ಸಮಾಜವನ್ನು ಇದುವರೆಗೂ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರ ಕಡೆಗಣಿಸುತ್ತಾ ಬಂದಿದೆ. ಯಾವುದೇ ಸ್ಥಾನಮಾನ ಕೊಡುವುದರಲ್ಲಿ ನಮ್ಮ ಸಮಾಜವನ್ನು ಮೂಲೆಗುಂಪಾಗಿ ಮಾಡಿದೆ ಎಂದು ದೂರಿದರು.

ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದರೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ. ಹಾಗಾಗಿ ವಿಶ್ವಕರ್ಮ ಸಮಾಜದ ಬಂಧುಗಳು ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಯಪ್ರಕಾಶ್ ಚಿಕ್ಕಣ್ಣ ಅವರನ್ನು ಬೆಂಬಲಿಸುವುದರ ಮೂಲಕ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದರು.

ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಬಂದರೆ ನಮ್ಮ ಸಮಾಜದವರನ್ನು ಗುರುತಿಸುವ ಕೆಲಸವನ್ನು ಜಯಪ್ರಕಾಶ್ ಚಿಕ್ಕಣ್ಣ ಅವರ ಒಡಗೂಡಿ ಕುಮಾರಸ್ವಾಮಿ ಮಾಡುತ್ತಾರೆ ಎಂಬ ನಂಬಿಕೆ ನಮಗಿದೆ ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್ ತೊರೆದು ವಿಶ್ವಕರ್ಮ ಸಮಾಜದ ನೂರಕ್ಕೂ ಹೆಚ್ಚು ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕೋಟೆ ಮತ್ತು ಸರಗೂರು ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷರಾದ ರಾಜೇಂದ್ರ, ಗೋಪಾಲಸ್ವಾಮಿ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ, ವಿಶ್ವಕರ್ಮ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಪ್ಪಾಜಿ, ಮುಖಂಡರಾದ ನರಸಿಂಹಗೌಡ, ಮೂರು ಬಾಂದ್ ಸ್ವಾಮಿ, ಚಿನ್ನ ಬೆಳ್ಳಿ ರವಿ, ವೆಂಕಟೇಶ್, ಚೆನ್ನಾಚಾರ್, ಗೋವಿಂದಾಚಾರ್, ವಸಂತ ಆಚಾರ್, ವಿಶ್ವನಾಥ್, ಮೂರ್ತಿ, ಪುಟ್ಟಣ್ಣಾಚಾರಿ, ನಾಗಾಚಾರ್, ಶ್ರೀನಿವಾಸ್, ಚೆಲುವಾಚಾರಿ, ಪುಟ್ಟಣ್ಣಾಚಾರಿ, ನಟರಾಜ್, ನಾಗಾಚಾರ್, ಸುರೇಶ್, ದಾಸಚಾರಿ, ಲೋಕೇಶ್, ಮಂಜು, ಚಂದ್ರು, ಆನಂದ್, ಜಗದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net