ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

HUN-APR-20-1(JDS SERPADE)
Published on

ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ಧರ್ಮಾಪುರ ಗ್ರಾಮದ ಕಾಂಗ್ರೆಸ್ ಮುಖಂಡ ಪ್ರಕಾಶ್ ಮತ್ತವರ ಬೆಂಬಲಿಗರು ಪಕ್ಷ ತೊರೆದು ಜೆಡಿಎಸ್ ಸೇರ್ಪಡಗೊಂಡರು.

ಪ್ರಕಾಶ್ ಮತ್ತವರ ಬೆಂಬಲಿಗರನ್ನು ಸ್ವಾಗತಿಸಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡ ತಾಲೂಕಿನ ಜನತೆ ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ. ಯುವ ಸಮೂಹ ತಾಲೂಕಿನಲ್ಲಿ ಜಡ್ಡುಗಟ್ಟಿದ ರಾಜಕೀಯ ವಾತಾವರಣದಿಂದ ಮುಕ್ತಿಗಾಗಿ ಮುಂದಡಿಯಿಟ್ಟಿದ್ದಾರೆ. ತಾಲೂಕಿನಾದ್ಯಂತ ಯುವಕರು ಮತ್ತು ರೈತರು ಜೆಡಿಎಸ್ ಪಕ್ಷದ ಬೆಂಬಲಕ್ಕೆ ನಿಂತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನತೆ ಆಶೀರ್ವಾದದೊಂದಿಗೆ ಜಯಶಾಲಿಯಾಗಿ ಬಂದು ಈ ಜನರ ನಿರೀಕ್ಷೆ ಹುಸಿಯಾಗದಂತೆ ಕರ್ತವ್ಯ ನಿರ್ವಹಿಸಲಿದ್ದೇನೆ ಎಂದರು.

ಮೂರು ಬಾರಿ ಆಯ್ಕೆಯಾದರೂ ಪ್ರಯೋಜನವಾಗಲಿಲ್ಲ: ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಜನತೆ ಸತತ ಮೂರು ಬಾರಿ ಅಧಿಕಾರಕ್ಕೆ ತಂದರು. ಆದರೆ ಪಕ್ಷದ ನಾಯಕರು ಮಾಡಿದ್ದಾದರೂ ಏನು? ಆಡಳಿತದಲ್ಲಿ ದ್ವೇಷಸಾಧನೆ, ಅಶಾಂತಿ ಮೆರೆಯಿತೇ ಹೊರತು ಅಭಿವೃದ್ಧಿ ಸಾಧ್ಯವಾಗಲಿಲ್ಲ. ತಾಲೂಕಿನ ಜ್ವಲಂತ ಸಮಸ್ಯೆಗಳ ಕುರಿತು ಪರಿಹಾರ ಹುಡುಕಲಿಲ್ಲ. ಬದಲಾಗಿ ರಾಜ್ಯ ಸರ್ಕಾರವನ್ನು ಅಲ್ಲಗಳೆಯುತ್ತಾ ಕಾಲ ಕಳೆದರು. ಜೆಡಿಎಸ್ ಪಕ್ಷವು ಅಭಿವೃದ್ಧಿಯ ಜತೆಗೆ ಜನರ ಭಾವನೆಗಳಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸುವ ಹೊಣೆಗಾರಿಕೆಯನ್ನು ಹೊಂದಿದೆ ಎಂದರು.

ಕಾರ್ಯಕ್ರಮಲ್ಲಿ ಮುಖಂಡರಾದ ಧರ್ಮಾಪುರ ರಮೇಶ್, ವಿಶ್ವನಾಥ್, ಸಿಂಗರಮಾರನಹಳ್ಳಿ ವೆಂಕಟೇಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net