ಕಾಂಗ್ರೆಸ್ ಗ್ಯಾರಂಟಿ ಸರಕಾರ

07ydg04.
Published on

ಯಾದಗಿರಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂ ಅವರ ಭಾರತ್ ಜೋಡೊ ಪಾದಯಾತ್ರೆ ಪೂರ್ಣಗೊಂಡು ವರ್ಷ ಕಳೆದ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ನಿಂದ ಪಾದಯಾತ್ರೆ ಕಾರ್ಯಕ್ರಮ ನಡೆಯಿತು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿ ಆರಂಭಗೊಂಡ ಯಾತ್ರೆ ನಗರದ ಗಾಂವೃತ್ತದಲ್ಲಿ ಸಮಾವೇಶಗೊಂಡಿತು. ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಭಾರತದ ಸವರ್ಾಂಗಿಣ ಅಭಿವೃದ್ಧಿಗೆ ಕಾಂಗ್ರೆಸ್ ಅಪಾರವಾಗಿ ಶ್ರಮಿಸಿದೆ. ಜಾಗತಿಕವಾಗಿ ಇಂದು ದೇಶ ಬೆಳೆಯುತ್ತಿದ್ದರೆ, ಅದಕ್ಕೆ ನಮ್ಮ ಪಕ್ಷದ ಕೊಡುಗೆ ಸಾಕಷ್ಟಿದೆ ಎಂದು ಹೇಳಿದರು. ಆಂಗ್ಲರು ಭಾರತ ಬಿಟ್ಟು ಹೋದಾಗ ದೇಶದಲ್ಲಿ ಸಾಕ್ಷರತೆ ಪ್ರಮಾಣ ಕೇವಲ ಶೇ.15ರಷ್ಟಿತ್ತು. ಆದರೆ, ಈಗ ಶೇ.75ರಷ್ಟು ಆಗಿದೆ. ದೊಡ್ಡ ದೊಡ್ಡ ಆಸ್ಪತ್ರೆಗಳು, ಐಐಟಿ, ವಿಮಾನ ನಿಲ್ದಾಣ, ಆಣೆಕಟ್ಟುಗಳು, ಕಾಖರ್ಾನೆಗಳ ನಿಮರ್ಾಣ ಹೀಗೆ ನಮ್ಮ ಪಕ್ಷ ಅಕಾರದಲ್ಲಿದ್ದಾಗಲೆಲ್ಲ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಆದರೆ ಬಿಜೆಪಿಯವರು ಎಲ್ಲವನ್ನೂ ತಾವೇ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವುದು ವಿಪಯರ್ಾಸದ ಸಂಗತಿ ಎಂದು ಟೀಕಿಸಿದರು.

ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ನಮ್ಮ ನಾಯಕರು ನೀಡಿದ್ದ 5 ಗ್ಯಾರಂಟಿಗಳನ್ನು ಪಕ್ಷ ಅಕಾರಕ್ಕೆ ಬಂದ ತಕ್ಷಣ ಅನುಷ್ಠಾನಗೊಳಿಸಿದೆ. ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳು ನಾಡಿನ ಅಸಂಖ್ಯ ಬಡ ಮತ್ತು ಮಧ್ಯಮ ವರ್ಗಕ್ಕೆ ನೆರವಾಗಿವೆ. ಜನತೆ ಸ್ವಾಭಿಮಾನದಿಂದ ಜೀವನ ಸಾಗಿಸಲು ನಮ್ಮ ಗ್ಯಾರಂಟಿಗಳು ನೆರವಾಗುತ್ತಿವೆ ಎಂದು ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಬಸರಡ್ಡಿ ಪಾಟೀಲ್ ಅನಪುರ ಮಾತನಾಡಿ, ರಾಜ್ಯದಲ್ಲಿ ಈ ಹಿಂದೆ ಅಕಾರ ಹಿಡಿದಿದ್ದ ಬಿಜೆಪಿ ಭ್ರಷ್ಟಾಚಾರದ ಕೂಪವಾಗಿತ್ತು. ಜನಕಲ್ಯಾಣಕ್ಕಾಗಿ ಒಂದಾದರೂ ಯೋಜನೆ ರೂಪಿಸಲಿಲ್ಲ. ಇದರಿಂದ ಜನತೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಕಾರಕ್ಕೆ ಬರುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದಶರ್ಿ ಮರಿಗೌಡ ಹುಲಕಲ್, ಡಾ.ಎಸ್ಬಿ ಕಾಮರಡ್ಡಿ,ಮುಖಂಡರಾದ ಮಹಿಪಾಲರಡ್ಡಿ ಹತ್ತಿಕುಣಿ, ಬಸ್ಸುಗೌಡ ಬಿಳ್ಹಾರ, ಲಾಯಕ ಹುಸೇನ್ ಬಾದಲ್, ಜಿಪಂ ಮಾಜಿ ಉಪಾಧ್ಯಕ್ಷೆ ಮಲ್ಲಮ್ಮ ಕೋಮಾರ, ಜಿಲ್ಲಾ ವಕ್ತಾರ ಸ್ಯಾಮಸನ್ ಮಾಳಿಕೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net