

ಸಾಗರ: ಪಕ್ಷದ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಪರವಾಗಿ ಕ್ಷೇತ್ರದಾದ್ಯಂತ ಪ್ರಚಾರ ಮಾಡುವೆ, ಮುನಿಸಿಕೊಂಡವರು, ಬಂಡಾಯದ ಆಲೋಚನೆ ಮಾಡುವವರ ಕಾಲಿಗೆ ಎರಗಿ ಕರೆತರುವೆ. ನನಗೆ ಪಕ್ಷದ ಗೆಲುವು ಬಹಳ ಮುಖ್ಯ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಘೋಷಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಬುಧವಾರ ಮನೆಗೆ ಭೇಟಿ ನೀಡಿ, ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೋ ಸಣ್ಣ ಸಣ್ಣ ಕಾರಣಗಳಿಗೆ ಬೇಸರಗೊಂಡಿರುತ್ತಾರೆ. ಅದು ನಮ್ಮ ಪಕ್ಷದ ಆಂತರಿಕ ವಿಚಾರ. ಅವೆಲ್ಲವನ್ನು ನಾವು ಸರಿಪಡಿಸಿ ಕೊಂಡಿರುತ್ತೇವೆ. ಬೇಳೂರು ಅವರಿಗೆ ಟಿಕೆಟ್ ನೀಡಿರುವುದು ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ತುಂಬಿದೆ. ನನ್ನ ಮಾತೃ ಪಕ್ಷದಲ್ಲಿ ಅಳಿಯನೇ ಅಭ್ಯರ್ಥಿ ಆಗಿರುವುದು ಸಂತಸ ತಂದಿದು, ಗೆಲ್ಲಿಸಲು ಎಲ್ಲರ ಪ್ರಯತ್ನ ಅಗತ್ಯ, ಎಲ್ಲರ ಸಹಕಾರವನ್ನು ಪಡೆಯಲಾಗುವುದು ಎಂದು ಹೇಳಿದರು.
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ನಾವು ಮಾಡಿರುವ ಅಭಿವೃದ್ಧಿ ಏನು ಎಂಬುದು ಜನತೆಗೆ ತಿಳಿದಿದೆ. ಪ್ರಚಾರ ಮತ್ತು ಪ್ರದರ್ಶನದ ಅವಶ್ಯಕತೆಯಿಲ್ಲ. ನಮ್ಮ ಕ್ಷೇತ್ರದ ಜನರು ಪ್ರಜ್ಞಾವಂತರು. ಎಲ್ಲವನ್ನು ಅರಿತು ಕಾಂಗ್ರೆಸ್ ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದರು.
ಕಾಂಗ್ರೆಸ್ ಪ್ರಮುಖರಾದ ಬಿ.ಆರ್.ಜಯಂತ್, ಬಿ.ಎ.ಇಂದೂಧರ ಗೌಡ, ತಾರಾಮೂರ್ತಿ, ಡಿ.ದಿನೇಶ್, ಅಶೋಕ ಬೇಳೂರು, ಮಹಾರಾಜ ಕೆಳದಿ, ಅಬ್ದುಲ್ ಹಮೀದ್, ಗಲ್ಲಿ ವೆಂಕಟೇಶ್, ಗಣಪತಿ ಮಂಡಗಳಲೆ, ಮೈಕೆಲ್ ಡಿಸೋಜ ಇತರರು ಹಾಜರಿದ್ದರು.
ಭೀಷ್ಮ ಇಲ್ಲಿರುವಾಗ ಗೆಲುವು ಸುಲಭ: ಕಾಂಗ್ರೆಸ್‍ನ ಭೀಷ್ಮ ಇಲ್ಲಿರುವಾಗ ಗೆಲುವು ಸುಲಭ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿರೋಧ, ಸವಾಲುಗಳು ಇರುತ್ತವೆ. ಅವೆಲ್ಲವನ್ನು ಕುಳಿತು ಬಗೆಹರಿಸಿಕೊಳ್ಳುತ್ತೇವೆ ಎಂದು ಗೋಪಾಲಕೃಷ್ಣ ಬೇಳೂರು ಹೇಳಿದರು. ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪ ಮತ್ತು ನನ್ನ ಅವ„ಯಲ್ಲಿ ತಂದ ಪ್ರಮುಖ ಕಾಮಗಾರಿಗಳನ್ನು ನಾನೇ ಮಾಡಿದ್ದೇನೆ ಎಂದು ಸಾಗರ ಶಾಸಕರು ಪೆÇೀಸ್ ಕೊಡುತ್ತಿದ್ದಾರೆ. ಕುಡಿಯುವ ನೀರಿನ ಯೋಜನೆ, ಮಿನಿ ವಿಧಾನಸೌಧ, ಕಾಗೋಡು ಮತ್ತು ನನ್ನ ಅವ„ಯಲ್ಲಿ ತಂದದ್ದು. ಶರಾವತಿ ನೀರು ಸಾಗರಕ್ಕೆ ತರುವ ಯೋಜನೆ 70 ಕೋಟಿ ರೂ. ವೆಚ್ಚದಲ್ಲಿ ಜÁರಿಗೆ ತರಲಾಯಿತು. ಇದರ ಮುಂದುವರಿದ ಭಾಗವಾಗಿ ಗ್ರಾಮೀಣ ಭಾಗಗಳಿಗೂ ನೀರು ಕೊಡಲು ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಸಾಗರ ಕ್ಷೇತ್ರದ ಶಾಸಕರಿಂದ ಇಲ್ಲಿಯವರೆಗೂ ಅದು ಸಾಧ್ಯವಾಗಲಿಲ್ಲ. ಬಡವರಿಗೆ ಒಂದೇ ಒಂದು ನಿವೇಶನ ಕೂಡ ಕೊಡಲಿಲ್ಲ, ಕೇವಲ ಪ್ರಚಾರವೇ ಇವರಿಗೆ ಮೂಲವಾಗಿದೆ ಎಂದು ದೂರಿದರು.
ಮಂಡಿಯೂರಿ ನಮಸ್ಕಾರ: ಸಾಗರಕ್ಕೆ ಆಗಮಿಸಿದ ಗೋಪಾಲಕೃಷ್ಣ ಬೇಳೂರು ಅವರಿಗೆ ಕಾರ್ಯಕರ್ತರು ರಸ್ತೆಯುದ್ದಕ್ಕೂ ಭವ್ಯ ಸ್ವಾಗತ ನೀಡಿದರು. ತೆರೆದ ಕಾರಿನಲ್ಲಿ ಎಂದಿನಂತೆ ಕೈ ಬೀಸಿದ ಬೇಳೂರು ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಕಾಗೋಡು ತಿಮ್ಮಪ್ಪ ಅವರ ಮನೆಗೆ ಭೇಟಿ ನೀಡಿ ತಿಮ್ಮಪ್ಪ ಅವರ ಎದುರು ಮಂಡಿಯೂರಿ ನಮಸ್ಕರಿಸಿದರು. ನಂತರ ಮಾವ- ಅಳಿಯ ಪರಸ್ಪರ ಸಿಹಿ ತಿನಿಸಿದರು. ತದನಂತರ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಜತೆಯಲ್ಲಿ ಚರ್ಚಿಸಿದರು. ದಾರಿಯುದ್ದಕ್ಕೂ ಬೇಳೂರು ಪರ ಜಯಘೋಷ, ಕಾರುಗಳು ಹಿಂಬಾಲಿಸಿದವಲ್ಲದೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.