ಕಾಂಗ್ರೆಸ್ ಗೆ ಪ್ರತಿಷ್ಠೆಯ ಚುನಾವಣೆ

B Nagendra
Published on

ಬಳ್ಳಾರಿ : ಈ್ ಬಾರಿ ನಡೆಯುವ ಬಳ್ಳಾರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ ಜಿಲ್ಲೆಯಿಂದ ಗೆದ್ದಿದ್ದರು. ಬಳಿಕ ಬಳ್ಳಾರಿ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಯಾರು ಗೆದ್ದಿಲ್ಲ. ಈ ಬಾರಿ ಪಾಲಿಕೆ ಕೈ ವಶದಲ್ಲಿದ್ದು, ಅವಳಿ ಜಿಲ್ಲೆಯಲ್ಲಿ ಅತ್ಯಧಿಕ ಕಾಂಗ್ರೆಸ್ ಶಾಸಕರಿದ್ದು ಬಳ್ಳಾರಿಯನ್ನು ಕಾಂಗ್ರೆಸ್ ಮಯ ಮಾಡಲು ಪಣತೊಟ್ಟಿದ್ದೇವೆ. ನಗರದಲ್ಲಿ ನಡೆಯುವ ಬೃಹತ್ ಬಹಿರಂಗ ಸಮಾವೇಶದಲ್ಲಿ ರಾಹುಲ್ ಗಾಂಧಿ ಜತೆಯಲ್ಲಿ, ಸಿಎಂ, ಡಿಸಿಎಂ, ಕೊಪ್ಪಳ ಅಭ್ಯರ್ಥಿ ಹಾಗೂ ಅವಳಿ ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿ ಮಂತ್ರಿಗಳಿಂದ ಹಿಡಿದು ಸಣ್ಣ ಕಾರ್ಯಕರ್ತರವರೆಗೂ ಇದೆ. ಪಂಚ ಗ್ಯಾರಂಟಿ ಯೋಜನೆಗಳ ಬಲ ನಮ್ಮ ಪಕ್ಷಕ್ಕೆಯಿದೆ. ಮೊದಲು ಗುಜರಾತ್ ಮಾಡೆಲ್ ಅಂತಿದ್ದರು, ಅದರೆ ಈಗ ಕರ್ನಾಟಕ ಮಾಡೆಲ್ ಅಂತಾ ಜನ ನೋಡುತ್ತಿದ್ದಾರೆ. ಬಳ್ಳಾರಿ ಉತ್ತರ ಕರ್ನಾಟಕದ ಹೆಬ್ಬಾಗಿಲುಯಾಗಿದೆ. ವಿಧಾನಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿ ಎಲ್ಲೆಲ್ಲಿ ಪ್ರಚಾರ ನಡೆಸಿದ್ದರೂ, ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ ಎಂದು ಹೇಳಿದರು.
ಶಾಸಕ ಭರತರೆಡ್ಡಿ, ಬುಡಾ ಅಧ್ಯಕ್ಷ ಆಂಜನೇಯಲು, ಜಿಲ್ಲಾಧ್ಯಕ್ಷ ಅಲ್ಲಂ್ ಪ್ರಶಾಂತ, ಮೇಯರ್ ಶ್ವೇತಾ ಬಿ, ಪಾಲಿಕೆ ಸದಸ್ಯ ಪೇರಂ ವಿವೇಕ್ ಇದ್ದರು.

ಕೋಟ್.. ದೇಶದಲ್ಲಿಯೇ ಕರ್ನಾಟಕ ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟಲಾಗುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ಅನುದಾನದ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ. ಬರ ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.

  • ಈ.ತುಕಾರಾಮ್, ಕಾಂಗ್ರೆಸ್ ಅಭ್ಯರ್ಥಿ, ಬಳ್ಳಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net