ಕಾಂಗ್ರೆಸ್ ಕಾರ್ಯಕರ್ತರಿಂದ ವಿಜಯೋತ್ಸವ

cong vijayotsav
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಳೇ ಹುಬ್ಬಳ್ಳಿ ಇಂಡಿ ಪಂಪ್ ವೃತ್ತದ ಬಳಿ ಶನಿವಾರ ವಿಜಯೋತ್ಸವ ಆಚರಿಸಿದರು.

ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ ನೇತೃತ್ವದಲ್ಲಿ ಸಿಹಿ ಹಂಚಿ, ಪಟಾಕಿಗಳನ್ನು ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು. ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ...ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಯವಾಗಲಿ...ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಜಯವಾಗಲಿ...ಎಂಬಿತ್ಯಾದಿ ಘೊಷಣೆಗಳನ್ನು ಕೂಗಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಕಿತ್ತೂರ, ಸತೀಶ ಮಹೆರವಾಡೆ, ಚಂದ್ರಶೇಖರ ಜುಟ್ಟಲ್, ವಿಶಾಲ ಅಬ್ಬಯ್ಯ, ಮೋಹನ ಅಸುಂಡಿ, ಡಿ.ಎಂ. ದೊಡ್ಡಮನಿ, ನವೀದ ಮುಲ್ಲಾ, ಸಾಗರ ಹಿರೇಮನಿ, ಅಬ್ದುಲ್ ಗನಿ ವಲಿಅಹ್ಮದ್, ಇಕ್ಬಾಲ್ ನವಲೂರ, ಮೆಹಮೂದ್ ಕೊಳೂರ, ಸಂಗಮೇಶ್ವರ ಗೌರಕ್ಕನವರ, ಅರ್ಜುನ ಪಾಟೀಲ, ಸರೋಜಾ ಹೂಗಾರ, ಶಾರುಖ್ ಮುಲ್ಲಾ, ಪ್ರೇಮನಾಥ ಚಿಕ್ಕತುಂಬಳ, ಡಾ. ಆನಂದಕುಮಾರ, ಪಿರಾಜಿ ಖಂಡೇಕಾರ, ವೀರಣ್ಣ ಹಿರೇಹಾಳ, ಪ್ರವೀಣ ಶೆಲವಡಿ, ಫಾರೂಕ್ ಕಾಲೇಬುಡ್ಡೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net