ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

CTD 12 Protest--04
Published on


ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ಗಾಂಧಿಗೆ ಕೇಂದ್ರ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ಮುಖಂಡರು, ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸಮೀಪ ಜಮಾಯಿಸಿದ ಕಾರ್ಯಕರ್ತರು ಪ್ರಧಾನಿ ವಿರುದ್ಧ ಘೋಷಣೆ ಕೂಗಿದರು. ಭಾರತ್ ಜೋಡೋ ಯಾತ್ರೆಯ ನಂತರ ರಾಹುಲ್ ಗಾಂಧಿಯವರ ಜನಪ್ರಿಯತೆ ಸಹಿಸಲಾಗದೆ, ರಾಜಕೀಯವಾಗಿ ತುಳಿಯುವ ಪ್ರಯತ್ನ ಬಿಜೆಪಿ ನಾಯಕರಿಂದ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ದುರಾಡಳಿತ, ಆದಾನಿ ಲೂಟಿಕೋರತನ ಬಹಿರಂಗಪಡಿಸಿರುವ ರಾಹುಲ್ಗಾಂಧಿ, ವಿವಿಧ ವೇದಿಕೆಗಳಲ್ಲಿ ಇಬ್ಬರ ನಡುವಿನ ಸಂಬಂಧವನ್ನು ನಿರಂತರವಾಗಿ ಪ್ರಶ್ನಿಸಿದ್ದಾರೆ. ಹೀಗಾಗಿಯೇ ಸಂಸದರ ಸ್ಥಾನ ಅನರ್ಹಗೊಳಿಸಿ, ವಿನಾಕಾರಣ ಮಾನಸಿಕವಾಗಿ ಹಿಂಸೆ ನೀಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ,ಮಾಜಿ ಶಾಸಕ ಉಮಾಪತಿ, ಮಾಜಿ ಎಂಎಲ್ಸಿ ಜಯಮ್ಮ, ಮುಖಂಡರಾದ ಕೆ.ಪಿ.ಸಂಪತ್‌ಕುಮಾರ್,ಡಿ.ಎನ್.ಮೈಲಾರಪ್ಪ,ಜಿ.ಎಸ್.ಕುಮಾರ್‌ಗೌಡ, ಡಿ.ಟಿ.ವೆಂಕಟೇಶ್,ಶಬ್ಬೀರ್ ಅಹಮದ್, ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ,ಜಿ.ಎಸ್.ಮಂಜುನಾಥ್.

ಆರ್.ಕೆ.ಸರ್ದಾರ್,ಆರ್.ಕೃಷ್ಣಮೂರ್ತಿ,ಎನ್.ಡಿ.ಕುಮಾರ್,ಎಚ್.ಅಂಜಿನಪ್ಪ,ಜಯಣ್ಣ,ಓ.ಶಂಕರ್, ಮುದಸಿರ್ನವಾಜ್,ಮಹಡಿಶಿವಮೂರ್ತಿ,ಆರ್. ಪ್ರಕಾಶ್,ಮೋಹನ್ ಪೂಜಾರಿ,ಎಲ್.ಬಿ.ರಾಜಪ್ಪ,ಯು.ಲಕ್ಷ್ಮ್ಮಿಕಾಂತ್, ಅಬ್ದುಲ್ಲಾ, ಗೀತಾ ನಂದಿನಿಗೌಡ, ಎಚ್.ಮಂಜಪ್ಪ, ಸೈಯದ್ ಖುದ್ದೂಸ್, ಆರತಿ, ಮೀನಾಕ್ಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net