ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಕಷ್ಟ

9-klr-1
Published on

ಕೋಲಾರ: ದೇಶದಲ್ಲಿ ಕಾಂಗ್ರೆಸ್ ಶಕ್ತಿ ಕುಗ್ಗಿರುವುದರಿಂದ ಇನ್ನೆಂದೂ ಕೇಂದ್ರ, ರಾಜ್ಯದಲ್ಲಿ ಅಧಿಕಾರಕ್ಕೆ ಬರಲಾರದು ಎಂದು ವಾಜಿ ಮುಖ್ಯಮಂತ್ರಿ ಎಚ್.ಡಿ.ಕುವಾರಸ್ವಾಮಿ ಭವಿಷ್ಯ ನುಡಿದರು.

ನಗರದ ರತ್ನ ಕಲ್ಯಾಣ ಮಂಟಪದಲ್ಲಿ ಬುಧವಾರ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಜೆಡಿಎಸ್ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ವಾತನಾಡಿದರು. ಜನರಿಗೆ ಜೆಡಿಎಸ್ ಬಗ್ಗೆ ವಿಶ್ವಾಸವಿದ್ದು, ಮುಖಂಡರು ಒಗ್ಗಟ್ಟಿನಿಂದ ಕೆಲಸ ವಾಡಿದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬಹುದು ಎಂದರು.

ಕೋಲಾರ ಜಿಲ್ಲೆಗೆ ದಕ್ಷ ಅಧಿಕಾರಿ ಹಾಕಲು, ರಾಜ್ಯದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ನಿರ್ಧಾರಗಳಿಗೆ ಕಾಂಗ್ರೆಸ್ಸಿನವರ ಅನುಮತಿ ಪಡೆಯಬೇಕಿತ್ತು. ನನಗೆ ಸ್ವಾತಂತ್ರ್ತ್ಯ ಇರಲಿಲ್ಲ ಎಂದು ಬೇಸರಿಸಿದರು. ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಹಿನ್ನಡೆಗೆ ಮುಖಂಡರ ಭಿನ್ನಮತ ಕಾರಣ. ಪಕ್ಷದಲ್ಲಿ ಕುಟುಂಬದವರು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಜನರ ಹಿತ ಕಾಪಾಡುವುದಕ್ಕಾಗಿ, ನಮ್ಮ ಕುಟುಂಬದ ವಿರುದ್ಧ ಏನೇ ಟೀಕೆ ಕೇಳಿ ಬರುತ್ತಿದ್ದರೂ ಸಹಿಸಿಕೊಂಡಿದ್ದೇವೆ ಎಂದರು.

ಇಂಚರ ಗುಣಗಾನ: ಎಂಎಲ್‌ಸಿ ಇಂಚರ ಗೋವಿಂದರಾಜು ನಾನು ಸಿಎಂ ಆಗಿದ್ದಾಗ ಭೇಟಿಯಾಗಿ ಕೋಲಾರ ಜಿಲ್ಲೆಯವರನ್ನು ಎಂಎಲ್‌ಸಿ ವಾಡುವಂತೆ ಮನವಿ ವಾಡಿದರು. ಬೇರೆ ಯಾರನ್ನೋ ವಾಡುವ ಬದಲು ನಿಮ್ಮನ್ನೇ ವಾಡುವೆ, ಒಪ್ಪಿಕೊಂಡು ಪಕ್ಷ ಬಲಪಡಿಸಿ ಎಂದು ಹೇಳಿದೆ. ಅವರಿಗೆ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಇದೆ ಎಂದು ಸೂಚಿಸಿದರು. ಮುಂಬರುವ ವಿಧಾನಸಭೆಯಲ್ಲಿ ಯುವಕರಿಗೆ ಶೇ.25 ಕ್ಷೇತ್ರ ಮೀಸಲಿಡುತ್ತೇನೆ ಎಂದರು.

ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಯುವಕರಿಗೆ ಆದ್ಯತೆ ನೀಡಿದಲ್ಲಿ 11 ಶಾಸಕರು ಗೆಲ್ಲುವುದು ಸುಲಭವಾಗುತ್ತದೆ. ಚುನಾವಣೆ ಸಮಯದಲ್ಲಿ ಬೇರೆ ಪಕ್ಷದೊಂದಿಗೆ ಹೊಂದಾಣಿಕೆ ವಾಡಿಕೊಳ್ಳುವವರನ್ನು ದೂರ ಇಡಿ, ಕಳೆದ ಚುನಾವಣೆಯಲ್ಲಿ ನನ್ನ ಸೋಲಿಗೆ ನಮ್ಮ ಪಕ್ಷದ ಕೆಲ ಮುಖಂಡರು ಕಾರಣವೆಂದು ಮುಳಬಾಗಿಲು ಕ್ಷೇತ್ರದ ಸಮೃದ್ಧಿ ಮಂಜುನಾಥ್ ಆರೋಪಿಸಿದರು. ನಿಖಿಲ್ ಪ್ರವಾಸ ವಾಡಿದಲ್ಲಿ ಪಕ್ಷ ಸಂಟನೆಗೆ ಅನುಕೂಲವಾಗುತ್ತದೆ ಎಂದು ಬಂಗಾರಪೇಟೆ ಕ್ಷೇತ್ರದ ಜೆಡಿಎಸ್ ಮುಖಂಡ ಮಲ್ಲೇಶ್ ಹೇಳಿದರು.

ವರ್ಷದಲ್ಲಿ ಕೋಲಾರದಲ್ಲಿ ಜೆಡಿಎಸ್ ಕಟ್ಟಡ ನಿರ್ಮಿಸಿ ಕುವಾರಸ್ವಾಮಿ ಮತ್ತು ನಿಖಿಲ್ ಅವರಿಂದ ಉದ್ಘಾಟನೆ ವಾಡಿಸುವುದಾಗಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಹೇಳಿದರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಳ್ಳಿ ಲೋಕೇಶ್, ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ವಾಲೂರು ಟಕ ಅಧ್ಯಕ್ಷ ಚಂದ್ರೇಗೌಡ, ಕೆಜಿಎಫ್‌ನ ಆನಂದ್, ಕೋಲಾರದ ಬಾಬು ಮೌನಿ, ಸಿಎಂಆರ್ ಶ್ರೀನಾಥ್ ವಾತನಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಜಿಪಂ ಸದಸ್ಯ ಕೆ.ಎಸ್.ನಂಜುಂಡಪ್ಪ, ಕೋಲಾರ ನಗರಸಭೆ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಪ್ರವೀಣ್ ಗೌಡ, ಜಿಪಂ ವಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಮುಖಂಡರಾದ ರಾಜ ರಾಜೇಶ್ವರಿ, ವಕ್ಕಲೇರಿ ರಾಮು, ಕುರಬೂರು ಶಂಕರೇಗೌಡ, ಬಣಕನಹಳ್ಳಿ ನಟರಾಜು, ನಾಗನಾಳ ಸೋಮಣ್ಣ, ಬೆಳವಾರನಹಳ್ಳಿ ಆನಂದ್, ಕೆ.ಬಿ.ಗೋಪಾಲಕೃಷ್ಣ, ಸಿಎಂಆರ್ ಹರೀಶ್, ವಡಗೂರು ರಾಮು.ತಾಪಂ ಸದಸ್ಯ ಮುದುವಾಡಿ ಮಂಜುನಾಥ್, ಈರಪ್ಪ ಉಪಸ್ಥಿತರಿದ್ದರು.

ಮುಸ್ಲಿಮರ ಕೊಡುಗೆ: ಜೆಡಿಎಸ್ ಕಾರ್ಯಾಲಯಕ್ಕೆ ಮುಸ್ಲಿಂ ವ್ಯಕ್ತಿ ನಿವೇಶನ ನೀಡಿದ್ದಾರೆ. 10 ವರ್ಷಗಳಿಂದ ಕಟ್ಟಡ ನಿರ್ಮಿಸಲು ಪ್ರಯತ್ನ ನಡೆಯುತ್ತಿತ್ತು. ಈಗ ಕಾಲ ಕೂಡಿ ಬಂದಿದೆ. ಕಟ್ಟಡ ನಿರ್ವಾಣ ಉಸ್ತುವಾರಿಯನ್ನು ಇಂಚರ ಗೋವಿಂದರಾಜು ಅವರಿಗೆ ವಹಿಸಲಾಗಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ಯೋಜನೆ ರೂಪಿಸಿದ್ದೇನೆ: ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಲುವಾಗಿ ಕೆಲ ಯೋಜನೆಗಳನ್ನು ರೂಪಿಸಿದ್ದೇನೆ, ಈಗ ಅದನ್ನು ಪ್ರಕಟಿಸಿದಲ್ಲಿ ಬೇರೆಯವರು ಹೈಜಾಕ್ ವಾಡುತ್ತಾರೆ ಎಂದು ಕುವಾರಸ್ವಾಮಿ ಅಜೆಂಡಾ ಬಗ್ಗೆ ಕುತೂಹಲ ಮೂಡಿಸಿದ್ದಾರೆ. ನನಗೆ ಬಿಜೆಪಿ ಅಥವಾ ಯಡಿಯೂರಪ್ಪ ಬಗ್ಗೆ ಮೃಧು ಧೋರಣೆ ಇಲ್ಲ, ರಾಜ್ಯ ಮತ್ತು ರಾಷ್ಟ್ರ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವೆ ಎಂದರು.

ಬೆದರಿಕೆಗೆ ಜಗ್ಗುವವನು ನಾನಲ್ಲ: ಪ್ರತಿಭಟನೆ, ಬಂದ್‌ನಿಂದ ಯಾರಿಗೂ ಉಪಯೋಗವಿಲ್ಲ ಎಂದು ಹೇಳಿರುವುದನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಚಿಲ್ಲರೆ ಹೋರಾಟಗಾರರು ನನಗೆ ರೈತ ವಿರೋಧಿಪಟ್ಟ ಕಟ್ಟಲು ಇಲ್ಲಸಲ್ಲದ ಆರೋಪ ವಾಡುತ್ತಿದ್ದಾರೆ ಎಂದು ವಾಜಿ ಮುಖ್ಯಮಂತ್ರಿ ಎಚ್.ಡಿ.ಕುವಾರಸ್ವಾಮಿ ಕಿಡಿಕಾರಿದರು.

ನಗರದಲ್ಲಿ ಜೆಡಿಎಸ್ ಕಾರ್ಯಾಲಯ ನಿರ್ವಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಹಾಗೂ ಗ್ರಾಪಂ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಬುಧವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ವಾತನಾಡಿದರು. ಕೃಷಿ ಮಸೂದೆ ಜಾರಿಯಿಂದ ರೈತರಿಗಾಗುವ ಸಮಸ್ಯೆಗಳ ಕುರಿತು ವಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ನಾನು ಸರ್ಕಾರದ ಗಮನ ಸೆಳೆದಿರುವ ಪರಿಣಾಮ ಕೆಲ ಅಂಶ ಕೈಬಿಡಲಾಗಿದೆ. ಜೆಡಿಎಸ್‌ನಿಂದ ರೈತರಿಗೆ ಯಾವುದೇ ದ್ರೋಹವಾಗಿಲ್ಲ, ಹೊಟ್ಟೆ ಪಾಡಿನ ಹೋರಾಟಗಾರರ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಟಾಂಗ್ ನೀಡಿದರು.

ಹಗಲಲ್ಲಿ ಸಿಎಂ ಭೇಟಿ: ನಾನೆಂದೂ ಬಿಜೆಪಿ ಮುಖಂಡರನ್ನು ಭೇಟಿಯಾಗಿ ರಾಜಕೀಯ ವಾತನಾಡಿಲ್ಲ, ರಾಜ್ಯದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಹಗಲಲ್ಲೇ ಭೇಟಿಯಾಗಿ ಚರ್ಚಿಸಿದ್ದೇನೆ. ರಾತ್ರಿ ಸಿಎಂ ಅವರನ್ನು ಭೇಟಿಯಾಗಿರುವುದು ಡಿ.ಕೆ.ಶಿವಕುವಾರ್, ಇದನ್ನೊಮ್ಮೆ ಯಡಿಯೂರಪ್ಪನವರೇ ಬಹಿರಂಗಪಡಿಸಿದ್ದರು ಎಂದರು.

ಭಾಗ್ಯಗಳಿಗೆ ಮನೆಯಿಂದ ಹಣ ತಂದು ಕೊಟ್ಟರೆ?: ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 19 ಸಾವಿರ ಕೋಟಿ ರೂ. ಅನುದಾನ ನೀಡಿರುವ ಕುರಿತು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ನನ್ನ ಮನೆಯಿಂದ ಅನುದಾನ ತಂದುಕೊಟ್ಟಿಲ್ಲ, ಜನರ ತೆರಿಗೆ ಹಣದಿಂದಲೇ ನೀಡಿರುವೆ. ಹಾಗಿದ್ದರೆ ವಿವಿಧ ಭಾಗ್ಯಗಳಿಗೆ ಕೋಟಿಗಟ್ಟಲೆ ಖರ್ಚು ವಾಡಿರುವ ಅವರು ಮನೆಯಿಂದ ತಂದುಕೊಟ್ಟಿದ್ದರೆ ಎಂದು ಪ್ರಶ್ನಿಸಿದರು.

ನೀನು ಈ ಊರಿನ ಮೊಮ್ಮಗ, ಇಲ್ಲಿ ಪಕ್ಷ ಸಂಘಟಿಸು: ಚಿಂತಾಮಣಿ ತಾಲೂಕಿನ ತಳಗವಾರ ನಿಮ್ಮ ತಾಯಿಯ ತವರೂರು, ನಾನು ಈ ಜಿಲ್ಲೆಯ ಅಳಿಯ, ನೀನು ಕೋಲಾರ ಮತ್ತು ಚಿಕ್ಕಬಳ್ಳಾಪುರದ ಮೊಮ್ಮಗನಾಗಿರುವುದರಿಂದ ಎರಡೂ ಜಿಲ್ಲೆಯಲ್ಲಿ ಜೆಡಿಎಸ್ ಸಂಟನೆಯ ಹೊಣೆ ಹೊರಬೇಕೆಂದು ಪುತ್ರ ಹಾಗೂ ಜೆಡಿಎಸ್ ರಾಜ್ಯ ಯುವ ಟಕ ಅಧ್ಯಕ್ಷ ನಿಖಿಲ್‌ಕುವಾರ್‌ಗೆ ಎಚ್‌ಡಿಕೆ ಸೂಚಿಸಿದರು.

ನಗರದಲ್ಲಿ ಜೆಡಿಎಸ್ ಕಾರ್ಯಾಲಯ ನಿರ್ವಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಹಾಗೂ ಗ್ರಾಪಂ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಬುಧವಾರ ಆಗಮಿಸಿದ್ದ ವೇಳೆ ಮಾತನಾಡಿದರು. ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿಯೂ ಪಕ್ಷ ಗೆಲ್ಲಿಸಲು ಶ್ರಮಿಸಬೇಕು ಎಂದು ಮಗನಿಗೆ ಎಚ್‌ಡಿಕೆ ಸಲಹೆ ನೀಡಿದರು.

ಜನರ ಪ್ರೀತಿ ಕಡಿಮೆಯಾಗಿಲ್ಲ: ನಾನೂ ಸಿನಿವಾ ರಂಗದಲ್ಲಿದ್ದವನು, ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ನಿನ್ನನ್ನು ದೊಡ್ಡ ಕಲಾವಿದನಾಗಿ ನೋಡುವ ಆಸೆ ಇತ್ತು, ಮಂಡ್ಯ ಜಿಲ್ಲೆಯ 8 ಶಾಸಕರ ಒತ್ತಾಯದಿಂದ ರಾಜಕೀಯಕ್ಕೆ ಕರೆತರಬೇಕಾಯಿತು. ನಮ್ಮ ತಪ್ಪುಗಳಿಂದ ಚುನಾವಣೆಯಲ್ಲಿ ಏರುಪೇರಾಗಿದ್ದರೂ ಜನ ನಮ್ಮ ಮೇಲೆ ಇಟ್ಟಿರುವ ಪ್ರೀತಿ, ಅಭಿವಾನ ಕಡಿಮೆಯಾಗಿಲ್ಲ, ಈಗನಿಂದಲೇ ಪ್ರವಾಸ ಆರಂಭಿಸಿ ಪಕ್ಷ ಸಂಟನೆಗೆ ಒತ್ತು ನೀಡು ಎಂದು ಕಿವಿವಾತು ಹೇಳಿದರು.

ಹಿಟ್ ಆ್ಯಂಡ್ ರನ್ ವಾಡಲ್ಲ: ರಾಜಕೀಯದಲ್ಲಿ ನಮ್ಮ ತಂದೆ ಎಂದೂ ಹಿಟ್ ಆ್ಯಂಡ್ ರನ್ ವಾಡಿದವರಲ್ಲ. ಸಿಎಂ ಆಗಿದ್ದಾಗ 25 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದಾರೆ. ನಮ್ಮ ಪಕ್ಷಕ್ಕೆ ಕಾರ್ಯಕರ್ತರ ಕೊರತೆ ಇಲ್ಲ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಕಟ್ಟಲು ವಾರ್ಗದರ್ಶನ ನೀಡಬೇಕು. ಇನ್ನು ಮುಂದೆ ನಾನೂ ಪಕ್ಷ ಸಂಟನೆಗೆ ಹೆಚ್ಚಿನ ಸಮಯ ಮೀಸಲಿಡುವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಒಗ್ಗಟ್ಟಿನಿಂದ ಕೆಲಸ: ನನಗೆ ವಹಿಸಿರುವ ಜವಾಬ್ದಾರಿಯನ್ನು ಪ್ರಾವಾಣಿಕವಾಗಿ ನಿರ್ವಹಿಸುವೆ. ಎಲ್ಲ ಕಡೆಗೆ ತಂದೆಯೇ ಬರಲು ಕಷ್ಟವಾಗುತ್ತದೆ, ಕಾರ್ಯಕರ್ತರು ಏನೇ ಕಷ್ಟ ಇದ್ದರೂ ನನ್ನ ಬಳಿ ಹೇಳಿಕೊಂಡಲ್ಲಿ ಪರಿಹರಿಸುವೆ ಎಂದು ನಿಖಿಲ್ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net