ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ

IMG_20230312_133849
ಮುದ್ದನಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇಗುಲದ ನೂತನ ವಿಮಾನ ಗೋಪುರ ಲೋಕಾರ್ಪಣೆ ಧಾರ್ಮಿಕ ಸಮಾರಂಭವನ್ನು ದಯಾನಂದ್ ರೆಡ್ಡಿ ಉದ್ಘಾಟಿಸಿದರು. ಗೋಪಾಲಸ್ವಾಮಿ, ವಿಜಯಕುಮಾರ್, ಗೀತಾ, ಶಿವಸ್ವಾಮಿ ಇತರರು ಇದ್ದರು.
Published on

ನುಗ್ಗೇಹಳ್ಳಿ: ತಾಲೂಕಿನ 285 ದೇವಾಲಯಗಳ ಜೀರ್ಣೋದ್ಧಾರಕ್ಕೆ ನನ್ನ ಅಧಿಕಾರ ಅವಧಿಯಲ್ಲಿ 9 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ತಿಳಿಸಿದರು.

ಹೋಬಳಿಯ ಮುದ್ದನಹಳ್ಳಿಯಲ್ಲಿ ಭಾನುವಾರ ಪುರಾಣ ಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ದೇಗುಲ ವಿಮಾನ ಗೋಪುರ, ಗರುಡಗಂಬ, ಮಹಾದ್ವಾರ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ತಾಲೂಕಿನ 10 ದೇವಾಲಯಗಳಲ್ಲಿ ಶೌಚಗೃಹ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿದ್ದೆ. ಮುಂದೆ ರಾಜ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ರೈತರ ಪಂಪ್‌ಸೆಟ್, ಮನೆಗಳಿಗೆ ಉಚಿತ ವಿದ್ಯುತ್, ಮಹಿಳೆಯರಿಗೆ 2000 ಧನಸಹಾಯ, 10 ಕೆ.ಜಿ. ಉಚಿತವಾಗಿ ಅಕ್ಕಿ ನೀಡುವ ಯೋಜನೆಯನ್ನು ರೂಪಿಸಲಾಗಿದ್ದು, ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.

ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎಸ್.ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜತ್ತೇನಹಳ್ಳಿ ರಾಮಚಂದ್ರ, ಎಚ್‌ಎಎಲ್ ಅಧ್ಯಕ್ಷ ದಯಾನಂದ್ ರೆಡ್ಡಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ಜಯರಾಮ್, ಗೀತಾ ಗೋಪಾಲಸ್ವಾಮಿ, ಪುರಸಭಾ ಸದಸ್ಯೆ ಸುಜಾತಾ, ಗ್ರಾಪಂ ಮಾಜಿ ಅಧ್ಯಕ್ಷೆ ಪ್ರೇಮಾ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಿವಸ್ವಾಮಿ, ಮುಖಂಡರಾದ ರಾಮಕೃಷ್ಣೇಗೌಡ, ಪೂರ್ಣಿಮಾ ವೆಂಕಟೇಶ್, ಎನ್.ಎಸ್. ಪ್ರಕಾಶ್, ಎನ್.ಎಸ್. ಲಕ್ಷ್ಮಣ್, ಎಚ್.ಜೆ.ಕಿರಣ್, ನಟೇಶ್, ಉದ್ಯಮಿಗಳಾದ ಪಾಪಣ್ಣ, ಗಣೇಶ್, ಡಿಶ್ ಯುವರಾಜ್, ಬಾಂಬೆ ರಮೇಶ್, ಯುವ ಮುಖಂಡ ರತೀಶ್, ನಿವೃತ್ತ ಸೈನಿಕ ರಮೇಶ್, ಜಂಬೂರು ಜಗದೀಶ್, ಮಹಾಲಿಂಗೇಗೌಡ, ಹುಲಿಕೆರೆ ಶಿವಸ್ವಾಮಿ, ನಿಂಗರಾಜು, ಜಯಣ್ಣ, ಶಿವಕುಮಾರ್, ಸಂಘದ ಅಧ್ಯಕ್ಷ ಧನಂಜಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net