ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ : ಅಭ್ಯರ್ಥಿ ಎಂ.ಎ.ಗೋಪಾಲಸ್ವಾಮಿ ವಿಶ್ವಾಸ

IMG_20230502_160641
Published on

ಹಾಸನ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಶ್ರವಣಬೆಳಗೊಳ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ. ಎ.ಗೋಪಾಲಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ನುಗ್ಗೇಹಳ್ಳಿ ಹೋಬಳಿಯ ಅಕ್ಕನಹಳ್ಳಿ ವೃತ್ತದ ಗಣೇಶ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದರು.


ತಾಲೂಕಿನ ಕಬ್ಬಳಿ ದಿಡಗ ಭಾಗದ ಕೆರೆಗಳಿಗೆ ಏತ ನೀರಾವರಿ ಯೋಜನೆ, ತೆಂಗಿನ ಉಪ ಉತ್ಪನ್ನಗಳ ಕಾರ್ಖಾನೆಗಳ ಸ್ಥಾಪನೆ, ಅನ್ನಭಾಗ್ಯ ಯೋಜನೆಯಿಂದ 10 ಕೆಜಿ ಅಕ್ಕಿ ವಿತರಣೆ, ಗ್ರಾಮೀಣ ವಿದ್ಯಾವಂತ ನಿರುದ್ಯೋಗಿಗಳಿಗೆ ಕೌಶಲಾಭಿವೃದ್ಧಿ ತರಬೇತಿ, ಕ್ಷೇತ್ರದ ಹೆಚ್ಚಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ನನಗೆ ಆಶೀರ್ವದಿಸಿ ಎಂದು ಮನವಿ ಮಾಡಿದರು.


ಅಕ್ಕನಹಳ್ಳಿ ಪಂಚಾಯಿತಿಯ ಸೊಸಲಗೆರೆ, ಶೆಟ್ಟಿಹಳ್ಳಿ, ಸಮುದ್ರಳ್ಳಿ, ಬಾಣನಕೆರೆ, ಹೆಬ್ಬಳಲು, ಗ್ರಾಮಗಳಲ್ಲಿ ಬೆಂಬಲಿಗರೊಂದಿಗೆ ಮತಯಾಚಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಡಿ.ಕಿಶೋರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ಶಂಕರ್, ಮುಖಂಡರಾದ ಮಂಜಣ್ಣ, ಯುವರಾಜ್, ಗ್ರಾಮ ಪಂಚಾಯಿತಿ ಸದಸ್ಯ ರಾಜಕುಮಾರ್, ಮಧು, ಪ್ರವೀಣ್, ಕಿರಣ್, ಶರತ್, ಶೇಖರ್, ಶಂಕರ್ ಲಿಂಗೇಗೌಡ, ಗಣೇಶ್, ಬಸವರಾಜ್, ಚಂದು, ಚೇತು, ರಕ್ಷಿ, ಕಾರ್ಯಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net