ಕಾಂಕ್ರೀಟ್​ ರಸ್ತೆ ನಿರ್ಮಾಣಕ್ಕೆ ಆಗ್ರಹ

31MKH1
Published on

ಎಂ.ಕೆ.ಹುಬ್ಬಳ್ಳಿ: ಮಂಜೂರಾಗಿರುವ ಪೇವರ್ಸ್​ ರಸ್ತೆಯನ್ನು ರದ್ದುಗೊಳಿಸಿ, ಸಿಸಿ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಪಟ್ಟಣದ ಕಮ್ಯಾರ ಓಣಿ ನಿವಾಸಿಗಳು ಸ್ಥಳಿಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿಶಂಕರ ಮಾಸ್ತಿಹೊಳಿಮಠ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಹಲವು ವರ್ಷಗಳಿಂದ ಮಳೆಗಾಲದಲ್ಲಿ ಕೆಸರುಮಯ ರಸ್ತೆಯಲ್ಲಿ ಸಂಚಾರ ದುಸ್ತರವಾಗಿ, ನಡೆದಾಡಲು ತೀವ್ರ ತೊಂದರೆಯಾಗುತ್ತಿತ್ತು. ಈಗ ರಸ್ತೆಯನ್ನು ಪೆವರ್ಸ್​ ಹಾಕಿ ಅಭಿವೃದ್ಧಿಪಡಿಸಲು ಪಟ್ಟಣ ಪಂಚಾಯಿತಿ ನಿರ್ಧರಿಸಿದ್ದು, ಪೇವರ್ಸ್​ ರಸ್ತೆ ಬೇಡ, ಸಿಸಿ ರಸ್ತೆ ನಿರ್ಮಿಸಲು ಮನವಿ ಮಾಡುತ್ತಿದ್ದೇವೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಗುಡುಸಾಬ್​ ಬಾವಾಖಾನ, ರುದ್ರಪ್ಪ ಗೋಕಾರ, ಅಜ್ಪಪ್ಪ ಪಟ್ಟಣಶೆಟ್ಟಿ, ರುದ್ರಪ್ಪ ಹೊಟಗಣ್ಣವರ, ಕುತುಬುಸಾಬ್​ ಜೂಟದಾರ, ಭೀಮರಾಯಪ್ಪ ಪಾಟೀಲ, ಮೆಹಬೂಬಸಾಬ್​ ಬಾವಖಾನ್​, ಹಜರತಸಾಬ್​ ಬಾವಾಖಾನ್​, ಈರಣ್ಣ ಹೊಂಗಲ, ಸಾಗರ ಪಾಟೀಲ, ಕಲ್ಮೇಶ ಹೊಟಗಣ್ಣವರ, ಶೌಕತ್​ ಅಲಿ ಬಾವಾಖಾನ್​, ಪ್ರಕಾಶ ನೇಗಿನಹಾಳ, ಮಹಾಂತೇಶ ದಳವಾಯಿ, ಅನಸೂಯಾ ಕಾಜಗಾರ, ಈರವ್ವ ಭಂಡಾರಿ, ಸುಮಿತ್ರಾ ಪಾಟೀಲ, ಸಾವಿತ್ರಿ ಭಂಡಾರಿ, ಮಲ್ಲವ್ವ ನೇಗಿನಹಾಳ, ತುಳಸವ್ವ ಪಾಟೀಲ ಇತರರಿದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net