

ಕೆ.ಎಂ.ದೊಡ್ಡಿ: ಸಮೀಪದ ಮುಟ್ಟನಹಳ್ಳಿ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಡಿ.ಸಿ.ತಮ್ಮಣ್ಣ ಭೂಮಿಪೂಜೆ ನೆರವೇರಿಸಿದರು.
ಗ್ರಾಮೀಣ ಭಾಗದ ರಸ್ತೆಗಳನ್ನು ಗುತ್ತಿಗೆದಾರರು ಗುಣಮಟ್ಟದಲ್ಲಿ ನಿರ್ಮಾಣ ಮಾಡಬೇಕು. ಕಳಪೆ ಕಾಮಗಾರಿ ಕಂಡುಬಂದಲ್ಲಿ ಸಾರ್ವಜನಿಕರು ತಡೆದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಗ್ರಾಮಸ್ಥರು ಪಕ್ಷಭೇದ ಮರೆತು ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಹಾಗಲಹಳ್ಳಿ ಚಿಕ್ಕತಿಮ್ಮೇಗೌಡ, ಮುಖಂಡರಾದ ಕೆ.ಟಿ.ಸುರೇಶ್, ಗುರುದೇವರಹಳ್ಳಿ ಅರವಿಂದ್ ,ಅಣ್ಣೂರು ವಿನು, ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಜು, ಶಿವಲಿಂಗಯ್ಯ, ಎಂ.ಕೆ.ಚಂದ್ರಶೇಖರ, ಯತೀಶ್ ಕುಮಾರ್, ಲತಾ ಪಿ.ಮಹೇಶ್, ನಾಡಗೌಡ ಎಂ.ಕೆ.ವೀರಯ್ಯ, ಕಲಾವತಿ ರಾಮೇಗೌಡ, ವೀಣಾ ಸಣ್ಣಕ್ಕಯ್ಯ, ಗ್ರಾಮಸ್ಥರಾದ ಕಾಳೇಗೌಡ, ನಾರಾಯಣ್, ಪುಟ್ಟೇಗೌಡ, ಯು.ಡಿ ಚಂದ್ರಶೇಖರ್, ಮಧು, ಶೇಖರ್, ಸಂತೋಷ , ಹರೀಶ್ ಇದ್ದರು.