ಕಾAಗ್ರೆಸ್ ಸರ್ಕಾರದಲ್ಲಿ ದಲಿತರಿಗಿಲ್ಲ ರಕ್ಷಣೆ

ydg02
Published on

ಕೊಡೇಕಲ್: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಎಂಬುದು ಸಂಪೂರ್ಣವಾಗಿ ಸತ್ತು ಹೋಗಿದ್ದು, ಈ ಸರ್ಕಾರದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಬಪ್ಪರಗಿ ಗ್ರಾಮದ ದಲಿತ ಬಾಲಕಿ ಮೇಲೆ ನಡೆದಿರುವ ಅತ್ಯಚಾರ ಹಾಗೂ ದಲಿತರ ಮೇಲೆ ಹಾಕಿರುವ ಬಹಿಷ್ಕಾರ ಘಟನೆ ಹಿನ್ನೆಲೆಯಲ್ಲಿ ಮಂಗಳವಾರ ಮಾಜಿ ಸಚಿವ ನರಸಿಂಹನಾಯಕ ಅವರೊಂದಿಗೆ ಬಾಲಕಿ ಮನೆಗೆ ಭೇಟಿ ನೀಡಿ ಮಾತನಾಡಿದದರು.

ರಾಜ್ಯದಲ್ಲಿ ದಲಿತರ ಮೇಲೆ ಬಹಳಷ್ಟು ದೌರ್ಜನ್ಯ ನಡೆಯುತ್ತಿದ್ದರೂ ಕೂಡ ಆಡಳಿತ ಪಕ್ಷ ದಲಿತರ ರಕ್ಷಣೆಗೆ ನಿಲ್ಲದೆ ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜನರ ಕಷ್ಟ ಸುಖಗಳನ್ನು ಆಲಿಸುವ ಕಡೆಗೆ ಗಮನ ಹರಿಸುತ್ತಿಲ್ಲ. ಸರ್ಕಾರ ಸಂಪೂರ್ಣವಾಗಿ ಹಳಿ ತಪ್ಪಿದ್ದು ಇದಕ್ಕೆ ಚಿಕಿತ್ಸೆಯ ಅಗತ್ಯವಿದೆ ಎಂದು ವಾಗ್ದಾಳಿ ನಡೆಸಿದರು.

ಘಟನೆಯಿಂದ ಬಾಲಕಿ ಆಘಾತಗೊಂಡಿದ್ದು, ಆರೋಗ್ಯದ ದೃಷ್ಟಿಯಿಂದ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡುವ ಮೂಲಕ ಆಕೆಯ ಯೋಗಕ್ಷೇಮ ನೋಡಿಕೊಳ್ಳಲಾಗುವುದು ಮುಂದೆ ಬಾಲಕಿಗೆ ಸರ್ಕಾರಿ ಕೆಲಸ ಹಾಗೂ ಜನಿಸಲಿರುವ ಮಗುವಿನ ಶಿಕ್ಷಣ ಸೇರಿ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ವರು ಹೇಳಿದರು. ಬಹಿಷ್ಕಾರಕ್ಕೆ ಒಳಗಾಗಿರುವ ಎಲ್ಲ ದಲಿತ ಕುಟುಂಬಗಳಿಗೆ ಪುರ್ನವಸತಿ, ಭೂ ಒಡೆತನದ ಯೋಜನೆಯಡಿ ಭೂಮಿ ಮಂಜೂರು ಮಾಡಬೇಕು ಜತೆಗೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಜಿಲ್ಲಾಸ್ಪತ್ರೆಗೆ ಬಾಲಕಿ ಶಿಪ್ಟ್: ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭೇಟಿ ನಂತರ ಅತ್ಯಾಚಾರಕ್ಕೊಳಗಾದ ಬಾಲಕಿ ಆರೋಗ್ಯ ತಪಾಸಣೆ ನಡೆಸಿದ ವೈದ್ಯರ ಜತೆ ಆಂಬುಲೆನ್ಸ್ನಲ್ಲಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ, ದೇವಿಂದ್ರನಾಥ ನಾದ, ಆರ್.ರುದ್ರಯ್ಯ, ಬಿಜೆಪಿ ಜಿಲ್ಲಾ ಪ್ರಧಾನ ಕರ‍್ಯದರ್ಶಿ ಮೇಲಪ್ಪ ಗುಳಗಿ, ವಿರೇಶ ಚಿಂಚೋಳಿ, ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ, ಸಮಾಜ ಕಲ್ಯಾಣ ಅಧಿಕಾರಿ ಮಹ್ಮದ್ ಸಲಿಂ, ಸಿಡಿಪಿಒ ಅನೀಲಕುಮಾರ ಕಾಂಬ್ಳೆ, ವೈದ್ಯಾಧಿಕಾರಿ ಡಾ.ಗೌತಮ್ ಕುಲಕರ್ಣಿ, ಉಪ ತಹಸೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ಪಿಡಿಒ ಪ್ರೇಮಾ, ನಂದಕುಮಾರ ಬಾಂಬೆಕರ್, ಮೋತಿಲಾಲ್ ಚವ್ಹಾಣ್, ಅಮಲಪ್ಪ ಹಳ್ಳಿ, ನಂದಪ್ಪ ಪೀರಾಪುರ, ಪವಾಡೆಪ್ಪ ಮ್ಯಾಗೇರಿ, ಬಸವರಾಜ ದೊಡಮನಿ, ಬಸವರಾಜ ಹಗರಟಗಿ, ಕಾಶೀನಾಥ ಹಾದಿಮನಿ, ದೇವರಾಜ ಹೊರಹಟ್ಟಿ, ಬಸವರಾಜ ಕಟ್ಟಿಮನಿ, ಸಂಗಮೇಶ ಮಾಸ್ತರ್, ನಾಗರಾಜ ದೊಡಮನಿ, ಸೈದಪ್ಪ ಬಲಶೆಟ್ಟಿಹಾಳ, ಮಂಜುನಾಥ ಹಾದಿಮನಿ, ತಿರುಪತಿ ಕೊಡೇಕಲ್, ಭೀಮಶಪ್ಪ, ಬಸವರಾಜ, ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net