ಕಸ್ತೂರಿ ರಂಗನ್ ವರದಿ ಜಾರಿ ಬೇಡ- ಜೊಯಿಡಾದಲ್ಲಿ ಪ್ರತಿಭಟನೆ

Screenshot_20220725-1732092.png
Published on

ಜೊಯಿಡಾ(ಉತ್ತರ ಕನ್ನಡ): ಪಶ್ಚಿಮಘಟ್ಟದ ಸಾಕಷ್ಟು ಪ್ರದೇಶಗಳನ್ನು ಸಂರಕ್ಷಿತ ಪ್ರದೇಶ ಎಂದು ಪರಿಗಣಿಸುವ ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡದಂತೆ ಆಗ್ರಹಿಸಿ ಜೊಯಿಡಾದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿವಬಟನೆ ನಡೆಸಿತು.

ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ನಮ್ಮ ಸರ್ಕಾರ ಇದ್ದಾಗ ಸಚಿವ ಸಂಪುಟದ ಉಪ ಸಮಿತಿ ಮಾಡಿ ಈ ಕಸ್ತೂರಿ ರಂಗನ್ ವರದಿ ವಿರೋಧಿಸುವ ನಿರ್ಣಯ ಮಾಡಿದ್ದೆವು. ಕಸ್ತೂರಿ ರಂಗನ್ ವರದಿ ವೈಜ್ಞಾನಿಕವಲ್ಲ. ಸ್ಥಳಕ್ಕೆ ಬಂದು ಮಾಡಿದ ವರದಿ ಅಲ್ಲ. ಹಾಗಾಗಿ ಇದನ್ನು ಸಂಪೂರ್ಣವಾಗಿ ವಿರೋದಿಸುತ್ತಿದ್ದೇವೆ ಎಂದು ಹೇಳಿದರು.
ಈ ಅಧಿಸೂಚನೆ ಜಾರಿಯಾದರೆ ಇಲ್ಲಿನ ಪ್ರವಾಸೋಧ್ಯಮಕ್ಕೆ ತೊಂದರೆಯಾಗಲಿದೆ. ಉಸುಕು,ಜಲ್ಲಿ ಸೇರಿದಂತೆ ಗಣಿಗಾರಿಗೆ ನಿಷೇಧವಾಗಲಿದ್ದು,ಮೂಲ ಸೌಕರ್ಯ ಬೇಳವಣಿಗೆಗೆ ತೊಂದರೆಯಾಗಲಿದೆ.ಒಟ್ಟು ಉತ್ತರ ಕನ್ನಡ ಜಿಲ್ಲೆಯ 9 ತಾಲೂಕಿನಲ್ಲಿ ಈ ಕಸ್ತೂರಿ ರಂಗನ್ ವರದಿಯಿಂದ ತೊಂದರೆಯಾಗಲಿದ್ದು, ಪ್ರತಿ ಗ್ರಾಮ ಪಂಚಾಯಿತಿಯಿಂದ ಇದಕ್ಕೆ ಆಕ್ಷೇಪಣೆ ಸಲ್ಲಿಸಬೇಕು ಎಂದರು.
ಜೊಯಿಡಾ ಶಿವಾಜಿ ಸರ್ಕಲ್ಲಿನಿಂದ ತಹಸೀಲ್ದಾರ್ ಕಚೇರಿಯ ತನಕ ಮೆರವಣಿಗೆಯಲ್ಲಿ ಬಂದ ಜನರು ಜೊಯಿಡಾ ತಹಸೀಲ್ದಾರ್ ಸಂಜಯ ಕಾಂಬಳೆ ಮೂಲಕ ರಾಷ್ಟೃಪತಿಗಳಿಗೆ ಮನವಿ ಸಲ್ಲಿಸಿದರು

ಜಿ.ಪಂ. ಮಾಜಿ ಸದಸ್ಯರಾದ ರಮೇಶ ನಾಯ್ಕ, ಸಂಜಯ ಹಣಬರ, ತಾ.ಪಂ. ಮಾಜಿ ಸದಸ್ಯ ವಿಜಯ ಪಂಡಿತ, ಅಣಶಿ ಗ್ರಾಪಂ ಅಧ್ಯಕ್ಷ ಅರುಣ ನಾಯ್ಕ, ಉಳವಿ ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಮೊಕಾಶಿ, ಮಗೇಶ ಕಾಮತ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾನಂದ ದಬ್ಗಾರ, ಕೃಷ್ಣಾ ದೇಸಾಯಿ,ಗೋಪಾಲ ಭಟ್ಟ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net