ಕಸಾಯಿಖಾನೆಗೆ ಗಾಗಿಸುತ್ತಿದ್ದ ಎಮ್ಮೆಗಳ ರಕ್ಷಣೆ

20-GPT-2
Published on

ಗುಂಡ್ಲುಪೇಟೆ: ತಮಿಳುನಾಡಿನ ಕಸಾಯಿಖಾನೆಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಎಮ್ಮೆಗಳನ್ನು ಪಟ್ಟಣ ಠಾಣೆಯ ಪೊಲೀಸರು ರಕ್ಷಿಸಿದ್ದಾರೆ.
ಸೋಮವಾರ ರಾತ್ರಿ ತಾಲೂಕಿನ ಬಂಡೀಪುರ ಹುಲಿ ಯೊಜನೆಯ ವ್ಯಾಪ್ತಿಯ ಮದ್ದೂರು ಚೆಕ್‌ಪೋಸ್ಟ್ ಮೂಲಕ ತಮಿಳುನಾಡಿಗೆ ಎಮ್ಮೆಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಪಟ್ಟಣ ಠಾಣೆಯ ಪೊಲೀಸರು ದಾಳಿ ನಡೆಸಿದರು. ಟಾರ್ಪಾಲಿನಿಂದ ಮುಚ್ಚಿದ್ದ ಲಾರಿಯನ್ನು ಪರಿಶೀಲಿಸಿದಾಗ 9 ಎಮ್ಮೆಗಳನ್ನು ಇರುವುದು ಕಂಡು ಬಂದಿದೆ.


ಘಟನೆ ಸಂಬಂಧ ತಮಿಳುನಾಡು ಮೂಲದ ಅಶ್ರಫ್, ಕೇರಳ ಮೂಲದವರಾದ ಇರ್ಫಾನ್ ಹಾಗೂ ಸಿಹಾಬ್ ಎಂಬ ಮೂವರನ್ನು ಹಾಗೂ ಅವರಿದ್ದ ಕಾರು, ಎಮ್ಮೆಗಳನ್ನು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ತಾಲೂಕಿನ ಕಣ್ಣೇಗಾಲ ಗ್ರಾಮದ ಕೃಷ್ಣ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ.
ಕಾರ್ಯಾಚರಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಕಿರಣ್ ಕುಮಾರ್, ಸಿಬ್ಬಂದಿ ಪ್ರಕಾಶ್, ಶಶಿಧರಮೂರ್ತಿ ಹಸಗೂಲಿ ಹಾಗೂ ಮಹೇಶ್ ಭಾಗವಹಿಸಿದ್ದರು. ಎಮ್ಮೆಗಳನ್ನು ಚಾಮರಾಜನಗರ ತಾಲೂಕಿನ ಕನಕಗಿರಿಯ ಗೋಶಾಲೆಗೆ ರವಾನಿಸಲಾಗಿದೆ. ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net