ಕಸಾಪ ಸದಸ್ಯತ್ವ ಪಡೆದು ಸಕ್ರೀಯರಾಗಿ

09 hulsur 01
Published on

ಹುಲಸೂರು: ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಹುಲಸೂರು ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯನ್ನು ಮಾಡಿ, ಕನ್ನಡಪರ ಕೆಲಸ ಚುರುಕಾಗಿಸಬೇಕು ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಹೇಳಿದರು.

ಪಟ್ಟಣದ ಗುರು ಬಸವೇಶ್ವರ ಸಂಸ್ಥಾನ ಮಠದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿಣಿಯಲ್ಲಿ ಮಾತನಾಡಿ, ಗಡಿ ಗ್ರಾಮಗಳಲ್ಲಿ ಕನ್ನಡ ಸಾಕಷ್ಟು ಬೆಳೆಯಬೇಕಾಗಿದೆ. ಪ್ರತಿ ಗ್ರಾಮದಲ್ಲಿ ಕನಿಷ್ಠ ೧೦ ಜನರು ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಪಡೆದರೆ, ಆ ಗ್ರಾಮದ ಕನ್ನಡಪರ ಸಮಸ್ಯೆ ತಿಳಿಯಲು ಸಾಧ್ಯ. ತಾಲೂಕು ಘಟಕದ ಪದಾಧಿಕಾರಿಗಳು ಸಂಕೋಚವಿಲ್ಲದೆ ಕಾರ್ಯಪ್ರವೃತ್ತರಾಗಬೇಕು ಎಂದರು.

ಪ್ರಸ್ತುತ ಕರ್ನಾಟಕ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ತಾಲೂಕು ಮತ್ತು ಜಿಲ್ಲಾ ಘಟಕದಿಂದ ಮಾಡಬೇಕಾದ ಕಾರ್ಯ ಹಂಚಿಕೊಳ್ಳಬೇಕು. ೫೦ ಕೃತಿ ಸಂಪುಟಗಳನ್ನು ಲೋಕಾರ್ಪಣೆ ಮಾಡುವ ಯೋಜನೆ ಇದೆ. ೫೦ ದತ್ತಿ ನಿಧಿ ನಿರ್ಮಿಸುವ ಉದ್ದೇಶ ಹೊಂದಿದ್ದೇವೆ. ವಲಯ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಮಾಡುವ ಉದ್ದೇಶ ಹೊಂದಲಾಗಿದೆ. ಅದರ ರೂಪುರೇಷೆ ಮಾಡಿಕೊಳ್ಳಬೇಕು ಎಂದರು.

ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನಿಂದ ಮನೆಗೊಂದು ಕನ್ನಡ ಜ್ಯೋತಿ, ಊರಿಗೊಂದು ಹಾಗೂ ಶಾಲೆಗೊಂದು ಕಾರ್ಯಕ್ರಮ ಆಯೋಜಿಸಿ ಕನ್ನಡಪರ ಕೆಲಸಕ್ಕೆ ವೇಗ ನೀಡೋಣ ಎಂದರು.

ಕೆಲ ದಿನಗಳ ಹಿಂದೆ ಅಕಾಲಿಕವಾಗಿ ನಿಧನರಾದ ಕಸಾಪ ನಗರ ಘಟಕದ ಅಧ್ಯಕ್ಷ ಸಂಗಮೇಶ ಭೋಪಳೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಾ.ಧರ್ಮೇಂದ್ರ ಭೋಸ್ಲೆ ಅವರಿಗೆ ಗೌರವ ಡಾಕ್ಟರೇಟ್ ದೊರೆತ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ ಮೇತ್ರೆ, ಬಸವಕುಮಾರ ಕೌಟೆ ಮಾತನಾಡಿದರು. ಶ್ರೀ ಡಾ.ಶಿವಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಬೀದರ್ ತಾಲೂಕು ಅಧ್ಯಕ್ಷ ಮನೋಹರ ಮಾಳಗೆ, ಕಸಾಪ ವಲಯ ಅಧ್ಯಕ್ಷ ದೀಪಕ ಪಾಟೀಲ್, ರೇಖಾ ಕಾಡಾದಿ, ರಾಜಶೇಖರ ಪಾಟೀಲ್, ಮಲ್ಲಿಕಾರ್ಜುನ ದೇವಪ್ಪ, ಡಿಸಿ ಪಾಟೀಲ್, ಇಸ್ಮಾಯಿಲ್ ಪಠಾಣ, ರೇವಣ ಚಿಲ್ಲಾಬಟ್ಟೆ, ಯುವರಾಜ ಬಿರಾದಾರ, ಡಾ. ಧರ್ಮೇಂದ್ರ ಭೋಸ್ಲೆ , ಭದ್ರಪ್ಪ
ತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net