ಕಸಾಪ ಯುವಘಟಕಕ್ಕೆ ರೋಹನ್ ಅಧ್ಯಕ್ಷ

11 ckm 5 rohan
ರೋಹನ್
Published on

ಚಿಕ್ಕಮಗಳೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷ ರಾಗಿ ರೋಹನ್ ಭಾರ್ಗವಪುರಿ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಸಾಹಿತಿಗಳನ್ನು, ಚಿಂತಕರನ್ನು ಒಟ್ಟುಗೂಡಿಸಿಕೊಂಡು ಕಾವ್ಯ ಕಮ್ಮಟ, ಕವಿಗೋಷ್ಠಿ ಗಳನ್ನು ಆಯೋಜಿಸುವ ಮೂಲಕ ಕವನಗಳ ರಚನೆ, ಪ್ರತಿ ಹೋಬಳಿ ಹಂತದಲ್ಲಿ ಕಸಾಪ ಶಾಖೆಗಳನ್ನು ತೆರೆದು ಸ್ಥಳೀಯ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ನೂತನ ಅಧ್ಯಕ್ಷ ರೋಹನ್ ಭಾರ್ಗವಪುರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net